EPISODE · Jul 26, 2020 · 1H 46M
E17: Witty sayings in Kundapura Kannada - ಕುಂದಾಪ್ರ ಕನ್ನಡ ಚಾಟೂಕ್ತಿಗಳು
from AraliKatte ಅರಳಿಕಟ್ಟೆ · host AraliKatte
ಕ್ವಾಟ-ಕುಂದಾಪ್ರ ಕನ್ನಡ ಎನ್ನುವುದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು, ಶಿವಮೊಗ್ಗೆಯ ಕೆಲವು ಭಾಗಗಳಲ್ಲಿ ನೆಲೆಸಿದ ಹಾಗೂ ಅಲ್ಲಿಂದ ಇತರೆ ಪ್ರದೇಶಗಳಿಗೆ ವಲಸೆ ಹೋದ ಜನ ಸಮೂಹ ಬಳಸುವ ಭಾಷೆ. ಕ್ವಾಟ-ಕುಂದಾಪ್ರ ಭಾಷೆಯನ್ನು ಕನ್ನಡದ ಸಶಕ್ತ ಉಪಭಾಷೆ ಎಂದು ಭಾಷಾವಿಜ್ಞಾನಿಗಳು ಗ್ರಹಿಸಿದ್ದಾರೆ. ಕೆಲವರು ಕ್ವಾಟ-ಕುಂದಾಪ್ರ ಕನ್ನಡವನ್ನು ಹೋಯ್ಕ್-ಬರ್ಕ್ ಭಾಷೆ ಎಂದು ಪಚಾಯಿಸುವುದೂ ಉಂಟು. ಈ ಭಾಷೆಯಲ್ಲಿನ ಸುಮಾರು ಸಾವಿರ ಜನಪದ ಚಾಟೂಕ್ತಿ (ಚತುರ ಉಕ್ತಿ)ಗಳನ್ನು ತಮ್ಮ ಸಂಶೋಧನೆಯಲ್ಲಿ ಸಂಗ್ರಹಿಸಿದವರು ದಿವಂಗತ ಡಾ. ಪಾರಂಪಳ್ಳಿ ನರಸಿಂಹ ಮಯ್ಯ. ಇವರ ಪುತ್ರ ಮಂಥನ್ ಮಯ್ಯ ಆಯ್ದ ಕೆಲವು ಚಾಟೂಕ್ತಿಗಳನ್ನು ಮೊಬೈಲ್ ಅಪ್ಲಿಕೇಶನ್ ರೂಪದಲ್ಲಿ ಜನರಿಗೆ ಪರಿಚಯಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಕುಂದಾಪ್ರ ಕನ್ನಡ ಭಾಷಿಕರ ಸಂಖ್ಯೆ ಹತ್ತು ಲಕ್ಷ ಇರಬಹುದಾದರೂ ಕಾಲಕ್ರಮೇಣ ಇದರ ಬಳಕೆ ಕಡಿಮೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ಭಾಷೆಯ ಜೀವಂತಿಕೆಯನ್ನು ಪೋಷಿಸುವುದು ಹೇಗೆ ಎನ್ನುವ ಕುತೂಹಲದಿಂದ ಕುಂದಾಪ್ರ ಚಾಟೂಕ್ತಿ ಎನ್ನುವ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿರುವ ಮಂಥನ್ ಮಯ್ಯರೊಂದಿಗೆ ನಾವು ನಡೆಸಿದ ಮಾತುಕತೆ ಅರಳಿಕಟ್ಟೆಯ ಹದಿನೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. Credits: Music : Crescents by Ketsa Licensed under creative commons. Icon made by Freepik from www.flaticon.com
NOW PLAYING
E17: Witty sayings in Kundapura Kannada - ಕುಂದಾಪ್ರ ಕನ್ನಡ ಚಾಟೂಕ್ತಿಗಳು
No transcript for this episode yet
Similar Episodes
No similar episodes found.
Similar Podcasts
No similar podcasts found.