EPISODE · Jul 12, 2025 · 7 MIN
ನಿರೀಕ್ಷೆಯ ವಾಕ್ಯ - 13.07.2025
from New Hope TV Kannada
ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದನಂತರ ಯೆಹೋವನ ಆಲಯಕ್ಕೆ ಹೋಗಿ ಅದನ್ನು ಯೆಹೋವನ ಮುಂದೆ ತೆರೆದಿಟ್ಟು ಆತನಿಗೆ - ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್ದೇವರೇ, ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ; ಪರಲೋಕ ಭೂಲೋಕಗಳನ್ನುಂಟು ಮಾಡಿದವನು ನೀನೇ. ಯೆಹೋವನೇ, ಕಿವಿಗೊಟ್ಟು ಕೇಳು; ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪದೇವರಾದ ನಿನ್ನನ್ನು ನಿಂದಿಸುವದಕ್ಕೋಸ್ಕರ ಹೇಳಿಕಳುಹಿಸಿದ ಮಾತುಗಳನ್ನು ಮನಸ್ಸಿಗೆ ತಂದುಕೋ. ಯೆಹೋವನೇ, ಅಶ್ಶೂರದ ಅರಸರು ದೇಶಜನಾಂಗಗಳನ್ನು ಹಾಳುಮಾಡಿ 18ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ. ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ; ಆದದರಿಂದಲೇ ಅವುಗಳನ್ನು ಹಾಳು ಮಾಡುವದು ಅವರಿಗೆ ಸಾಧ್ಯವಾಯಿತು. ಯೆಹೋವನೇ, ನಮ್ಮ ದೇವರೇ, ನೀನೊಬ್ಬನೇ ದೇವರೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು. 2 Kings / 2 ಅರಸುಗಳು 19 : 14 - 19Listen to Sis Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #13July #Julypromiseword #promisewordfortoday #todaysmotivation #2Kings19v14
NOW PLAYING
ನಿರೀಕ್ಷೆಯ ವಾಕ್ಯ - 13.07.2025
No transcript for this episode yet
Similar Episodes
Sep 8, 2025 ·0m
Aug 31, 2025 ·1m
Aug 30, 2025 ·1m
Aug 29, 2025 ·1m
Aug 28, 2025 ·1m
Aug 27, 2025 ·3m