PODCAST · society
ಸಖಿ ಸಮಯ... - Sakhi Samaya...
by Amita Ravikirana
ಚಿಕ್ಕ ಚಿಕ್ಕ ಖುಷಿಗಳ ಹುಡುಕುತ್ತ,
-
12
ಸಂಪ್ರದಾಯದ ಹಾಡುಗಳು - ಒರಳುಕಲ್ಲು ಪೂಜೆ ಹಾಡು
ಮದುವೆ ಸಂದರ್ಭದಲ್ಲಿ ಹಾಡುವ ಹಾಡುಗಳು.
-
11
ಸಂಪ್ರದಾಯದ ಹಾಡುಗಳು #1 ವರನನ್ನ ಹಸೆಗೆ ಕರೆಯುವ ಹಾಡುಗಳು.
ಸಂಪ್ರದಾಯದ ಹಾಡುಗಳು
-
10
ಅಭಿಷೇಕ ಮಾಡಿದಳು ಗೌರಿ- ವೈದೇಹಿ ಅವರ ಕವಿತೆ
ಅಭಿಷೇಕ ಮಾಡಿದಳು ಗೌರಿ ತ್ರಿಲೋಕ ಸಂಚಾರಿಗೆ ಕರೆದೊಯ್ದಳು ಶಿವನ ಶುಭ್ರಸ್ನಾನಕ್ಕೆ ಮೂಗಾಲು ಮಣೆಯಲ್ಲಿ ಮೂಗಣ್ಣಿನವನ ಕುಳ್ಳಿರಿಸಿ ಪ್ರೀತಿಯೊತ್ತಿ ಮೂಜಗದಲೋಡಾಡಿ ಎಂತು ದಣಿದವೋ ಪಾದ ಎಂಬ ನೆಪತುದಿಯಿಂದ ಧೂಳನೆತ್ತಿ ಯಾರ ಮನೆ ಬೀದಿಯದು ಪತ್ತೆ ಹಚ್ಚಿ ನಗುವ ನಟರಾಜನನು ಕರೆವಳೋ ಸ್ನಾನಕ್ಕೆ ದುಃಖ ಹತ್ತಿಕ್ಕಿ ಮುಗಿಯಿತೇ ಬೇಟೆ? ಪ್ರಶ್ನೆ ಚುಚ್ಚಿ ಇದೋ ಈ ತಂಬಿಗೆ ನೀರು ಗಂಗೆಯವತಾರಕ್ಕೆ ಇದು ಇಗೋ ಆ ಮಣಿಕರ್ಣಿಕೆಗೆ ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು ಕಡೆಯದಿಗೋ ನನ್ನ ಅನುದಿನದ ಬಡ ಕನಲು ಎಂದಾಗ ನೀರೊಳಗೆ ಗೌರಿ ಕಂಬನಿ ಬಿಂದು ಮಿಸಕ್ಕನೆ ಬೆರೆತು ಬಿಸಿಯಾಗಲು ‘ಆಯ್’ ಎಂದು ಶಿವ ಬೆವರಿ ‘ನನ್ನನೇನೆಂದುಕೊಂಡೆ? ನಿನ್ನ ಬಿಟ್ಟರೆ ಶುದ್ಧ ಬೈರಾಗಿ’ ‘ಈ ಮಾತಿಗೆ ಶಿವನೇ ನಾನೆಷ್ಟನೆಯ ನಾರಿ?’ ಎನ್ನುತ್ತ ಮೃದು ಚಿವುಟಿ ಮೀಸುವಳು ನಮ್ಮ ಗೌರಿ. ಬೈರಾಗಿ ಬೂದಿ ತೊಳೆಯುತ್ತ ಹಚ್ಚಗೆ ನೋಡುವಳು ಮೆತ್ತಗೆ ಮೈ ಒರೆಸಿ ತಂಬಾಲು ಕುಡಿಸಿ ತೊಡೆ ಮೆತ್ತೆಯನು ನೀಡಿ ಕೋರುವಳು ಶಿವ ಶಿವಾ! ಎಲ್ಲ ನದಿಗಳ ನೆನೆದು ಮಲಗು ದೇವ! ನುಡಿ ರೇಶಿಮೆಯಡಿ ನಂಜು ನುಂಗಿದ ಕಿರಾತ ಹೃದಯದಲಿ ಕಚಗುಳಿಯ ಹೂವು ಹರಿಗೋಲು ಕಚಗುಳಿಯ ಹರಿಗೋಲು ಹರನ ಹತ್ತಿಸಿಕೊಂಡು ಮತ್ತೆ ಸಾಗಿತು ಗೌರಿಯಿಂದ ದೂರ ಶಿವನಿದ್ದೂ ಶಿವನಿಲ್ಲದಂಥಚೋದ್ಯಗಳೆಲ್ಲ ಹೊಸತೇನು ಶಿವಕಾಮಿಗೆ? ಮಿಸುಕಾಡದೇ ಕುಳಿತು ತಲ್ಲಣವ ತಡೆಯುವ ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ ಸಂಚಾರ ಮುಗಿಸಿ ಬರುವ ಈಶ್ವರ ಜೋಗಿ ಗೌರಿ ಕರೆವಳು ಅವನ ಸ್ನಾನಕಾಗಿ ಮದ್ದಿನೆಣ್ಣೆಯ ಪೂಸಿ, ಬಿದ್ದ ಕಂಗಳ ಒರೆಸಿ ಜ್ವರ ಹಿಡಿಸಿಕೊಂಡಿರುವ ಲೋಕ ಸಂಚಾರಿಗೆ ಕಿರಾತ ಕಡ್ಡಿಯ ಕಷಾಯ ಕುಡಿಸಿ.
-
9
ಅವನ ನೆನಪು
ರಚನೆ: ಅಮಿತಾ ರವಿಕಿರಣ್
-
8
ಏನೂ ಇಲ್ಲ...
ಸ್ವರಚಿತ ಕವನ ವಾಚನ.
-
7
ಲೋನ - ಕವಿತೆ : ಜಯಲಕ್ಷ್ಮೀ ಪಾಟೀಲ
ಮೂಲ ಮರಾಠಿ : ಅಕ್ಷತಾ ದೇಶಪಾಂಡೆ ಕನ್ನಡಭಾವಾನುವಾದ- ಜಯಲಕ್ಷಿ ಪಾಟೀಲ್
-
6
ಬಳುಕುವ ನದಿಯೊಂದು...
ಖಲೀಲ್ ಗಿಬ್ರಾನ ರ The Fear ಕವಿತೆಯ ಸ್ಪೂರ್ತಿಯಿಂದ ಡಾ.ಮುರಳಿ ಹತ್ವಾರ್ ಅವರು ಬರೆದ ಈ ಕವಿತೆಯನ್ನು ವಾಚಿಸುವ ಪ್ರಯತ್ನ ಮಾಡಿದ್ದೇನೆ.
-
5
ಸಾಲು ಮರದ ತುಂಬಾ- ಜಿ ಎಸ್ ಎಸ್ ಕವಿತೆ
ಗೆಳತಿ ರಂಗಮ್ಮ ಹೊದೆಕಲ್ ಕವಿತೆಯೊಂದನ್ನ ಬರೆದು ಹಾಕಿದ್ದರು, ತುಂಬಾ ಇಷ್ಟ ಆಯ್ತು ಅದಕ್ಕೆ ವಾಚಿಸಿದೆ. ಪ್ರಸ್ತುತ ನಾನಿರುವ ಊರಿನಲ್ಲಿ ಚಳಿಗೆ ಮರಗಳೆಲ್ಲ ಎಲೇ ಉದುರಿಸಿ ನಿಂತಿರುವುದು , ಬೋಳು ಮರಗಳ ಮೇಲೆ ಹಕ್ಕಿ ಗೂಡಿನ ಗುಟ್ಟು ರಟ್ಟಾಗಿರುವುದು ಎಲ್ಲ ಕಾಣ ಸಿಗುತ್ತದೆ. ಅದಕ್ಕೆ ಈ ಕವಿತೆ ಇನ್ನೂ ಹತ್ತಿರ ಎನಿಸಿತು.
-
4
ರೇಣುಕಾ ರಮಾನಂದ್ ಅವರ ಕವಿತೆ.
ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ....? ಯಾರಿಗೆ ಗೊತ್ತು ನಾವಿಬ್ಬರು ಇಂದು ಭೇಟಿಯಾದರೂ ಆಗಬಹುದು ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ ಹತ್ತಿಯಷ್ಟು ಹಗುರಾಗಿ ಬೂರುಗದ ಹೂಗಳಂತೆ ನಮ್ಮಿಬ್ಬರ ಮಧ್ಯೆ ಹಾರಾಡಬಹುದು ಇಪ್ಪತ್ತು ವರ್ಷ- ನಾ ನಿನ್ನ ನೋಡದೇ.. ಗಂವ್ ಎನ್ನುವ ಕೆಲವು ಕಡುಕಪ್ಪು ರಾತ್ರಿಗಳಲ್ಲಿ ಕನಸಿಗೆ ಬಂದದ್ದು ಬಿಟ್ಟರೆ ಈ ಕೆಲಸದ ಮಧ್ಯೆ ನೀನು ಮಸುಕು ಮಸುಕು ಹುರಿಗೊಳಿಸಿದ ಬಿಲ್ಲಿನಂತಿದ್ದ ನಿನ್ನ ಬೆನ್ನೀಗ ಕೊಂಚವಾದರೂ ಬಾಗಿರಬಹುದು ತಲೆ ಸ್ವಲ್ಪ ಬೋಳಾಗಿರಬಹುದು ಚಾಳೀಸು ಬಂದ ಕಣ್ಣ ಕೆಳಗಿನ ಕುಡಿಮೀಸೆ ಕಪ್ಪು ಬಿಳುಪಿನ ಚಿತ್ರವಾಗಿರಬಹುದು ತೀವೃ ನಿಗಾ ಘಟಕದಲ್ಲಿ ಮಲಗಿ ಬಂದಾಗಿಂದ ನನಗೂ ಕೊಂಚ ಮಂಡಿನೋವು 'ತೂಕ ಕಡಿಮೆ ಮಾಡಿಕೊಳ್ಳಿ' ಎಂದಾಗಲೆಲ್ಲ ವೈದ್ಯರು ನಿನ್ನ ನೆನಪಾಗಿ ಎರಡು ದಿನ ಸೌತೆಕಾಯಿ ತಿಂದು ಊಟ ಬಿಡುತ್ತೇನೆ ಮತ್ತೆ ಯಥಾವತ್ತು ಹಿಂದಿನಂತೆ ಚಿಕನ್ ತಂದೂರಿ,ಬಂಗುಡೆ ಫ್ರೈ ಅಂದಾದರೂ ನಾ ನಿನ್ನ ದೂರದಿಂದ ಕದ್ದುನೋಡಿದ್ದಷ್ಟೇ....ನೀನೂ ತೇಪೆಹಾಕಿದ ಬೈಸಿಕಲ್ಲಿನ ಹವಾ ನೋಡುವ ನೆಪಮಾಡಿ ಮುರ್ಕಿಯಲ್ಲಿ ದೃಷ್ಟಿ ಕೂಡಿಸಿದ್ದಷ್ಟೇ... ಇವಕ್ಕೂ ಮೀರಿ ಹೇಳಿಕೊಳ್ಳುವಂಥದ್ದು ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ...? ಅಲ್ಲೆಲ್ಲೋ ಮಹಾನಗರಗಳಲ್ಲಿ ಇಲ್ಲಿಂದ ಹೋದವರೇ ಲಿವ್ಇನ್ ರಿಲೇಶನ್ಶಿಪ್ಪಿನಲ್ಲಿರುತ್ತಾರಂತೆ ಬರೇ ಇಪ್ಪತ್ತರ ಆಸುಪಾಸಿನವರು ನಾಲ್ಕಾರು ವರ್ಷ ಜೊತೆಯಲ್ಲಿದ್ದು ಸಾಕಾದರೆ ಟಪ್ಪನೆ ಬೇಪ೯ಡುತ್ತಾರಂತೆ ಹಿಂದಿನ ಕುರುಹೇ ಇಲ್ಲದೇ ಬೀಜ ಭೂಮಿಯಾಗುತ್ತಾರಂತೆ ಇನ್ಯಾರದೋ ಕಸುವಿಗೆ ಬದಲಾಗುತ್ತಿರುವುದು ಕಾಲವೋ..ಮನುಷ್ಯನೋ.. ಎಂದು ಚಿಂತಿಸುತ್ತಲೇ ಪುಳಕ ರೋಮಾಂಚನಗಳೆಲ್ಲ ಸತ್ತು ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಮತ್ತೆ ಮತ್ತೆ ಅಂದುಕೊಳ್ಳುತ್ತಿದ್ದೇನೆ ಅಪ್ಪಿ ತಪ್ಪಿ ನಾವಿಬ್ಬರೂ ಇಂದು ಭೇಟಿಯಾದರೂ ಆಗಬಹುದು ಇಪ್ಪತ್ತು ವರ್ಷಗಳ ನಂತರ ಕೆನ್ನೆಗಳಲ್ಲಿ ಮತ್ತೊಮ್ಮೆ ಓಕುಳಿ ನೀರು ಚಲ್ಲಾಡಬಹುದು __________________________________ ರೇಣುಕಾ ರಮಾನಂದ
-
3
ಪ್ರೀತಿ ನೀ ಯಾಕೆ ಹೀಗೆ?
ಕಿರುಗವಿತೆಗಳನ್ನ ಆಗೀಗ ಗೀಚುತ್ತೇನೆ, ಅವನ್ನ ಓದಿದಾಗ ಬರೆದಾಗ ಇರುವ ಭಾವಕ್ಕಿಂತ ಬೇರೆಯೇ ತೆರನಾದ ಅನುಭವ . ನೀವೂ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.
-
2
ಶೀಲಾ ಭಂಡಾರ್ಕರ್ ಕವಿತೆ
ತವರಿನ ನೆನಪಪಲ್ಲಿ ಶೀಲಕ್ಕ ಬರೆದ ಈ ಕವಿತೆ ನಂಗೆ ತುಂಬಾ ಇಷ್ಟ ಆಯ್ತು. ನೀವೂ ಕೇಳಿ ನಿಮಗೂ ಇಷ್ಟ ಆಗುತ್ತೆ.
-
1
ಭಾವಗೀತೆ- ನೆನಪಿದೆಯೇ ನಿನಗೆ
ಇದು ನಾ ಕಲಿತ ಮೊದಲ ಭಾವಗೀತೆ. ರಚನೆ :ರಾಷ್ಟಕವಿ ಜಿ ಎಸ್ ಶಿವರುದ್ರಪ್ಪ
-
0
ಸುಮ್ ಸುಮ್ನೆ
ಚಿಕ್ಕ ಚಿಕ್ಕ ಖುಷಿಗಳನ್ನ ಅನುಭವಿಸೋ ಕನಸುಗಣ್ಣಿನ ಜೀವದ ಕನವರಿಕೆಗಳು.
No matches for "" in this podcast's transcripts.
No topics indexed yet for this podcast.
Loading reviews...
Loading similar podcasts...