EPISODE · Sep 7, 2026 · 38 MIN
ಬಾಲ್ಯದ ಕನಸು... ನಾಳೆಯ ಭವಿಷ್ಯ: ಶಿಕ್ಷಣ ತಜ್ಞೆ ವಂದನಾ ಚೇತನ್ ಅವರೊಂದಿಗೆ ಒಂದು ಆಪ್ತ ಪಯಣ
from TALRadio Kannada · host Touch A Life Foundation
ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ, ಅವರು ಮಗುವಿನ ಅಂತರಂಗದ ಶಕ್ತಿಯನ್ನು ಗುರುತಿಸಿ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. TALRadio ಕನ್ನಡದ ಈ ವಿಶೇಷ ಸಂಚಿಕೆಯಲ್ಲಿ, ಶಿಕ್ಷಕರ ದಿನಾಚರಣೆಯ ಅಂಗವಾಗಿ ನಮ್ಮ ಜೊತೆಗಿದ್ದಾರೆ ಖ್ಯಾತ ಶಿಕ್ಷಣ ತಜ್ಞೆ ಮತ್ತು ಉದ್ಯಮಿ ವಂದನಾ ಚೇತನ್. ಬಾಲ್ಯದಲ್ಲಿ ಶಿಕ್ಷಕಿಯಾಗಬೇಕೆಂದು ಕಂಡ ಪುಟ್ಟ ಕನಸು, ಇಂದು ನೂರಾರು ಮಕ್ಕಳ ಬಾಳಿಗೆ ಬೆಳಕಾಗುತ್ತಿರುವ 'ಕ್ಯಾಂಗರೂ ಕಿಡ್ಸ್' ಪ್ರಿಸ್ಕೂಲ್ ಬ್ರೂಕ್ಫೀಲ್ಡ್ ನಿರ್ದೇಶಕಿಯಾಗಿ ಬೆಳೆದ ಹಾದಿ ನಿಜಕ್ಕೂ ಸ್ಪೂರ್ತಿದಾಯಕ.ಕೇವಲ ಅಂಕಗಳಿಗಾಗಿ ಮಕ್ಕಳನ್ನು ಸಿದ್ಧಪಡಿಸುವ ಬದಲು, ಅವರ ಕುತೂಹಲ ಮತ್ತು ಸೃಜನಶೀಲತೆಯನ್ನು ಹೇಗೆ ಕಾಪಾಡಬಹುದು? ಆರಂಭಿಕ ಬಾಲ್ಯದ ಶಿಕ್ಷಣದ ಬಗ್ಗೆ ಪೋಷಕರಲ್ಲಿರುವ ತಪ್ಪು ಕಲ್ಪನೆಗಳೇನು? ಶಿಕ್ಷಕಿಯಾಗಿ ಮತ್ತು ಉದ್ಯಮಿಯಾಗಿ ಈ ಪಯಣದಲ್ಲಿ ಅವರು ಎದುರಿಸಿದ ಸವಾಲುಗಳು ಮತ್ತು ಮಕ್ಕಳಿಂದಲೇ ತಾವು ಕಲಿತ ಬದುಕಿನ ಪಾಠಗಳ ಬಗ್ಗೆ ವಂದನಾ ಅವರು ಇಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಶಿಕ್ಷಕರ ದಿನದ ಈ ವಿಶೇಷ ಸಂವಾದವು ಪ್ರತಿಯೊಬ್ಬ ಪೋಷಕರಿಗೆ ಮತ್ತು ಶಿಕ್ಷಕರಿಗೆ ಒಂದು ಹೊಸ ದೃಷ್ಟಿಕೋನವನ್ನು ನೀಡಲಿದೆ. Host ದೀಕ್ಷಾ ನಡೆಸಿಕೊಡುವ ಈ ಸಂಚಿಕೆಯನ್ನು ಮಿಸ್ ಮಾಡಬೇಡಿ.What if the secret to a brighter future lies in protecting a child’s curiosity rather than just focusing on marks? On this Teacher’s Day, TALRadio Kannada brings you a heart-warming conversation with Vandhana Chetan, an educator and preschool entrepreneur. Vandhana shares her incredible journey—from a young girl who dreamed of teaching to building a world-class environment for little ones at Kangaroo Kids International Preschool Brookefield.Hosted by RJ Deeksha, this episode dives deep into the soul of education. Discover why early childhood is the most critical stage of growth, how to navigate doubts when following a passion, and why modern teachers must "unlearn" old methods to stay relevant for the next generation. Join us for a dialogue that reminds us that while teachers teach children, children also teach us the most valuable lessons of life. It’s time to celebrate the people who believed in us before we learned to believe in ourselves.Available on: TALRadio | Spotify | Apple Podcast Guest: Vandhana Chetan (Director, Kangaroo Kids International Preschool, Brookefield)Host: RJ Deeksha#TeachersDay #VandhanaChetan #ShapingFutures #EarlyEducation #InspiringTeachers #HumanConnect #TALRadioKannada #ಬದಲಾವಣೆಯಧ್ವನಿ #ಶಿಕ್ಷಕರದಿನಾಚರಣೆ #ಶಿಕ್ಷಣ #TouchALife #ಕನ್ನಡಪಾಡ್‌ಕಾಸ್ಟ್
Embed this episode
Ready to play
ಬಾಲ್ಯದ ಕನಸು... ನಾಳೆಯ ಭವಿಷ್ಯ: ಶಿಕ್ಷಣ ತಜ್ಞೆ ವಂದನಾ ಚೇತನ್ ಅವರೊಂದಿಗೆ ಒಂದು ಆಪ್ತ ಪಯಣ
No transcript for this episode yet
Similar Episodes
No similar episodes found.