ಚಾತಕ - ಕವಿಸಮಯ Chataka KaviSamaya episode artwork

EPISODE · Nov 2, 2022 · 5 MIN

ಚಾತಕ - ಕವಿಸಮಯ Chataka KaviSamaya

from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit

A Kannada Lesson - ಕನ್ನಡ ಪದ್ಯ ಪಾಠLike it? ...  Subscribe and Share!Watch it ... at https://www.youtube.com/mykannadakaliRead  it ...  http://kannadakali.com/publications/podcastsListen it ... https://anchor.fm/kannadakaliಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.      ಸ್ತೋಕ  ಅಂದರೆ ಕಣ , ಹನಿ.  ಮಳೆಯ ಹನಿಗಳನ್ನು ಮಾತ್ರ, ನೇರವಾಗಿ,  ಕುಡಿದು ಬದುಕುವ ಪಕ್ಷಿ ಸ್ತೋಕಕ, ಚಾತಕ . ಅದರಲ್ಲೂ, ಸ್ವಾತಿ ನಕ್ಷತ್ರದ ಮಳೆಗಾಗಿ ಹಾತೊರೆಯುತ್ತ, ಒಂಟಿ ಕಾಲಿನ ಮೇಲೆ, ಬಾಯ್ತೆರೆದು, ವರ್ಷವಿಡೀ ನಿಂತುಕೊಳ್ಳುವ ಪಕ್ಷಿ.  ಇದೊಂದು ಕವಿಸಮಯ.  ಕವಿ ಕಾಳಿದಾಸ ತನ್ನ ಮೇಘದೂತದಲ್ಲಿ ಯಕ್ಷ-ಯಕ್ಷಿಯರ ಪ್ರೇಮದ ಹಂಬಲಿಕೆಯ ರೂಪಕವಾಗಿ ಇದನ್ನು ಬಳಸಿದ್ದಾನೆ. ಇದು ಇತರ ಕಾವ್ಯಗಳಲ್ಲಿ  ಮುಂದುವೆರೆದು ಜನಜನಿತವಾಗಿದೆ. ಈ ಕವಿಸಮಯದ ಆಧಾರದ ಮೇಲೆ ರಚಿತವಾದ ಮೂರು ಚೆನ್ನುಡಿಗಳು ಹೀಗಿವೆ:  ಮೊದಲನೆಯ ಚೆನ್ನುಡಿ:    ಗೆಳತಿ ಚಾತಕಿ - ರೇ ರೇ ಚಾತಕ  ಎಲೆ ಎಲೇ ಗೆಳತಿ ಚಾತಕಿಯೆ, ಚಣವೊಮ್ಮೆ,        ಕಿವಿಗೊಟ್ಟು ನೀ ನನ್ನ ಮಾತೊಂದ ಕೇಳು: ಗಗನದಲಿ ಹಾರುವವು ಮೋಡಗಳು ಬಹಳ,        ಕರಿ ನೀಲಿ ಬಿಳಿ ಬೂದಿ ಹಿರಿ ಕಿರಿದು ತೆರನ;  ಮಳೆಗರೆದು ಇಳೆಯನ್ನು ತೋಯಿಸಲು ಕೆಲವು,     ನಗೆ ಮಿಂಚು ಸೂಸಿ ಬರಿ ಗುಡುಗುವವು  ಹಲವು :  ಕಂಡಕಂಡವರಿಗೆರಗುತ್ತ, ನೀ ಗೆಳತಿ,ಮೊರೆ ಇಡುತ ಬೇಡದಿರು, ನಾ ಬಡವಿ, ಎಂದು ಸಂಸ್ಕೃತ ಮೂಲ:  ಭರ್ತೃಹರಿ, ನೀತಿಶತಕ-೪೯   ರೇ ರೇ ಚಾತಕ, ಸಾವಧಾನಮನಸಾ, ಮಿತ್ರ ಕ್ಷಣಂ ಶ್ರೂಯತಾಂ.  ಅಂಭೋದಾ ಬಹವೋ ಹಿ ಸಂತಿ ಗಗನೇ ಸರ್ವೇಽಪಿ ನೈತಾದೃಶಾಃ ;ಕೇಚಿದ್ ವೃಷ್ಟಿಭಿರಾರ್ದ್ರಯಂತಿ ವಸುಧಾಂ ಗರ್ಜಂತಿ ಕೇಚಿದ್ ವೃಥಾ ;ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ  ಮಾ ಬ್ರೂಹಿ ದೀನಂ ವಚಃ.         -----------------ಎರಡನೆಯ ಚೆನ್ನುಡಿ:      ಹಕ್ಕಿ ಚಾತಕಕೆ - ಏಕ ಏವ ಖಗಹಕ್ಕಿ ಚಾತಕಕೆ ಬಲು ಹೆಮ್ಮೆ,   ಮಳೆಯ ನೀರೇ ಬೇಕು ಸೊಗಕೆ;ಬೇಡುವುದು ಘನರಾಜನನ್ನೆ:   ಕೀಳ್ಜನಕೆ ಬಾಯ್ತೆರೆಯಲೇಕೆ?ಸಂಸ್ಕೃತ ಮೂಲ:    ಶ್ರೀಧರದಾಸನ ಸದುಕ್ತಿ ಕರ್ಣಾಮೃತಏಕ ಏವ ಖಗೋ ಮಾನೀ     ಸುಖಂ ಜೀವತಿ ಚಾತಕಃ; ಅರ್ಥಿತ್ವಂ  ಯಾತಿ ಶಕ್ತಸ್ಯ     ನ ನೀಚಮುಪಸರ್ಪತಿ.       ------------------ಮೂರನೆಯ ಚೆನ್ನುಡಿ:      ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್ಮೂರು ಯಾ ನಾಲ್ಕು ಹನಿ ನೀರು ನೀಡೆಂದು    ಚಾತಕವು ಬಾಯ್ದೆರೆದು ಬೇಡಲಾ ಮುಗಿಲುಮಳೆಗರೆದು ತುಂಬಿಸಿತು ಇಡಿಯ ಇಳೆಯನ್ನು    ದೊಡ್ಡವರ ಔದಾರ್ಯಕಿದೆಯೆ ಇತಿಮಿತಿಯು!ಸಂಸ್ಕೃತ ಮೂಲ:  ಪೂರ್ವಜಾತಕಾಷ್ಟಕಂ ಚಾತಕಸ್ತ್ರಿಚತುರಾನ್ ಪಯಃ ಕಣಾನ್     ಯಾಚತೇ ಜಲಧರಂ ಪಿಪಾಸಯಾ; ಸೋಽಪಿ  ಪೂರಯತಿ ವಿಶ್ವಮಂಭಸಾ :    ಹಂತ ಹಂತ ಮಹತಾಮುದಾರತಾ!      ---------------0:00 ಪರಿಚಯ 1:18 ಗೆಳತಿ ಚಾತಕಿ - ರೇ ರೇ ಚಾತಕ 3:25 ಹಕ್ಕಿ ಚಾತಕಕೆ - ಏಕ ಏವ ಖಗ 4:21 ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್

Episode metadata supplied by the publisher feed · Published Nov 2, 2022

Embed this episode

NOW PLAYING

ಚಾತಕ - ಕವಿಸಮಯ Chataka KaviSamaya

0:00 5:59

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Secret of Kannada ಕನ್ನಡದ ಗುಟ್ಟು Kannadada Guttu?

This episode is 5 minutes long.

When was this Secret of Kannada ಕನ್ನಡದ ಗುಟ್ಟು Kannadada Guttu episode published?

This episode was published on November 2, 2022.

Can I download this Secret of Kannada ಕನ್ನಡದ ಗುಟ್ಟು Kannadada Guttu episode?

Yes. Use the download control on the episode player to save the publisher-provided media file.
URL copied to clipboard!