EPISODE · May 10, 2020 · 1H 59M
E06: About regional and world cinema - ಪ್ರಾದೇಶಿಕ ಹಾಗೂ ಜಾಗತಿಕ ಸಿನಿಮಾ
from AraliKatte ಅರಳಿಕಟ್ಟೆ · host AraliKatte
ಅರಳಿಕಟ್ಟೆಯ ಆರನೆಯ ಸಂಚಿಕೆ ನಾವು ಬೆಂಗಳೂರಿನ ಸುಚಿತ್ರ ಫಿಲಂ ಸೊಸೈಟಿಯ ಸದಸ್ಯರಾದ ಹರೀಶ್ ಮಲ್ಯರೊಂದಿಗೆ ಸಿನೆಮ ಕುರಿತ ಮಾತುಕತೆಗೆ ಮೀಸಲಿಟ್ಟಿದ್ದೇವೆ. ೨೦೦೦ ರ ಆಸುಪಾಸಿನಲ್ಲಿ ಜಾಗತಿಕ ಸಿನಿಮಾಸಕ್ತರು ಚಿತ್ರಮಂದಿರಗಳಿಗಿಂತ ಹೆಚ್ಚಾಗಿ ಬೆಂಗಳೂರಿನ ನ್ಯಾಶನಲ್ ಮಾರ್ಕೇಟಿಗೆ ಎಡತಾಕುತ್ತಿದ್ದುದರ ಉದ್ದೇಶವೇನು? 'ಫಾರಿನ್ ಫಿಲಂ'ಗಳನ್ನು ಅರಸಿಕೊಂಡು ನ್ಯಾಶನಲ್ ಮಾರುಕಟ್ಟೆಗೆ ಹೋಗಿದ್ದ ಮುಕುಂದ್ ರ ಮಜವಾದ ಅನುಭವ ಹೇಗಿತ್ತು? ಕೇರಳ, ತಮಿಳುನಾಡು, ಕಲ್ಕತ್ತಾದಲ್ಲಿರುವ ಸಿನೆಮಾ ಸಂಸ್ಕೃತಿ ಕನ್ನಡದಲ್ಲಿ ಕಾಣದಿರುವುದಕ್ಕೂ ಸಿಲಿಕಾನ್ ವ್ಯಾಲಿಗೂ ಏನು ಸಂಬಂಧ. ಆಟೋ ರಿಕ್ಷಾ ಡ್ರೈವರಿಗೆ ಕುವೆಂಪು ಗೊತ್ತು ಆದರೆ ಕಾಸರವಳ್ಳಿ ಗೊತ್ತಿಲ್ಲ, ಇದನ್ನ ಹೇಗೆ ತಿದ್ದುವುದು? ಸಿನಿಮಾವೊಂದನ್ನು ನಿರ್ಮಿಸುವುದಕ್ಕೆ ಕನಿಷ್ಠ ೭೫ ಲಕ್ಷದಿಂದ ಒಂದು ಕೋಟಿ ರುಪಾಯಿಗಳ ಹೂಡಿಕೆ ಬೇಕು. ನಾವು ಅತಿ ಸಣ್ಣ ಬಜೆಟ್ಟಿನಲ್ಲಿ ಸಿನಿಮಾ ಮಾಡುತ್ತೀವಿ ಎನ್ನುವುದು ಕೇವಲ ಕನಸಿನ ಕುದುರೆಯೇ? ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಹರೀಶ್ ಮಲ್ಯ, ಮುಕುಂದ್ ಸೆತ್ಲೂರ್ , ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್. Recording date: 10 May 2020 Credits: Music : Crescents by Ketsa Licensed under creative commons. Icon made by Freepik from www.flaticon.com
Embed this episode
NOW PLAYING
E06: About regional and world cinema - ಪ್ರಾದೇಶಿಕ ಹಾಗೂ ಜಾಗತಿಕ ಸಿನಿಮಾ
No transcript for this episode yet
Similar Episodes
No similar episodes found.
Similar Podcasts
No similar podcasts found.