Ep100: ಸಮಾನಾಂತರ ಸಿನಿಮಾಗಳ ಕುರಿತು ಗಿರೀಶ್ ಕಾಸರವಳ್ಳಿ ಜತೆ - On parallel films with Girish Kasaravalli episode artwork

EPISODE · Apr 4, 2022 · 1H 12M

Ep100: ಸಮಾನಾಂತರ ಸಿನಿಮಾಗಳ ಕುರಿತು ಗಿರೀಶ್ ಕಾಸರವಳ್ಳಿ ಜತೆ - On parallel films with Girish Kasaravalli

from AraliKatte ಅರಳಿಕಟ್ಟೆ · host AraliKatte

ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಹತ್ತು ಹಲವು ವಿಷಯಗಳ ಕುರಿತ ಕುತೂಹಲಕಾರಿ ಚರ್ಚೆಯನ್ನು ಅಬ್ಬರವಿಲ್ಲದ ಮೆಲು ಧ್ವನಿಯಲ್ಲಿ ಪ್ರತಿ ವಾರ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲವನ್ನು ನೆಚ್ಚಿ ನಾವು ನೂರನೆಯ ಸಂಚಿಕೆಗೆ ತಲುಪಿದ್ದೇವೆ. ಈ ಶತಮಾನದ ಸಂಚಿಕೆಯಲ್ಲಿ ನಮ್ಮ ಜೊತೆಯಾಗಿರುವವರು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಜಾಗತಿಕ ಸಿನಿಮಾ ಭೂಪಟದಲ್ಲಿ ಕರ್ನಾಟಕ ತಲೆ ಎತ್ತಿನಿಲ್ಲುವಂತಹ ಚಿತ್ರಗಳನ್ನು ನಿರ್ಮಿಸಿದ ಗಿರೀಶ್ ಕಾಸರವಳ್ಳಿಯವರ ಕುರಿತ ಪರಿಚಯ ಕನ್ನಡಿಗರಿಗೆ ಅಗತ್ಯವಿರಲಾರದು. ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಫಾರ್ಮಸಿಯಲ್ಲಿ ಪದವಿ ಓದಿ ಆಕಸ್ಮಿಕವಾಗಿ ಚಲನಚಿತ್ರ ಜಗತ್ತಿಗೆ ಕಾಲಿರಿಸಿದವರು. ಘಟಶ್ರಾದ್ಧ, ದ್ವೀಪ, ಕನಸೆಂಬೋ ಕುದುರೆಯನ್ನೇರಿ, ನಾಯಿ ನೆರಳು, ಹಸೀನಾ, ಗುಲಾಬಿ ಟಾಕೀಸ್ - ಕಾಸರವಳ್ಳಿಯವರ ಸಿನಿಮಾಗಳ ಪಟ್ಟಿ ದೊಡ್ಡದು. ಗಿರೀಶ್ ರೊಂದಿಗಿನ ನಮ್ಮ ಚರ್ಚೆಯ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗದಲ್ಲಿ ನಾವು ಕಾಸರವಳ್ಳಿಯಲ್ಲಿನ ಗಿರೀಶರ ಬಾಲ್ಯ, ಎತ್ತಿನ ಗಾಡಿಯಲ್ಲಿ ಮನೆಮಂದಿ ಸಿನೆಮಾ ನೋಡಲು ಹೋಗುತ್ತಿದ್ದ ನೆನಪು, ಮೊದಲ ಬಾರಿಗೆ ಜಾಗತಿಕ ಸಿನೆಮಾಗೆ ತೆರೆದುಕೊಂಡ ಅನುಭವ, ಪುಣೆಯ ಸಿನೆಮಾ ಸಂಸ್ಥೆಯಲ್ಲಿನ ಓದು, ತರಬೇತಿ, ಅನಂತಮೂರ್ತಿಯವರೊಂದಿಗಿನ ಒಡನಾಟ, ಅಡ್ಡೂರು ಗೋಪಾಲಕೃಷ್ಣ, ಯು.ಆರ್.ಅನಂತಮೂರ್ತಿಯವರ ಕುರಿತ ಸಾಕ್ಷ್ಯಚಿತ್ರಗಳು ಹೀಗೆ ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ. ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ನಮ್ಮ ಯುಟ್ಯೂಬ್ ಚಾನೆಲ್ಗೆ ಚಂದಾದಾರಾಗಿ, ನಿಮ್ಮ ಗೆಳೆಯರಿಗೆ ನಮ್ಮ ಬಗ್ಗೆ ತಿಳಿಸಿ. ನಿಮ್ಮಂತಹ ಇನ್ನಷ್ಟು ಸಹೃದಯರನ್ನು ತಲುಪಲು ನೆರವಾಗಿ. Recording date: 06 February 2022 Credits: Music: Crescents by Ketsa Licensed under creative commons. Icon made by Freepik from www.flaticon.com Show Notes Professor Satish Bahadur https://surendarchawdhary.wordpress.com/2015/09/29/professor-satish-bahadur-one-and-the-only/

Episode metadata supplied by the publisher feed · Published Apr 4, 2022

Embed this episode

Ready to play

Ep100: ಸಮಾನಾಂತರ ಸಿನಿಮಾಗಳ ಕುರಿತು ಗಿರೀಶ್ ಕಾಸರವಳ್ಳಿ ಜತೆ - On parallel films with Girish Kasaravalli

0:00 1:12:03

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 12 minutes long.

When was this AraliKatte ಅರಳಿಕಟ್ಟೆ episode published?

This episode was published on April 4, 2022.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!