EPISODE · Nov 9, 2020 · 56 MIN
Ep32: Israel, a startup nation - ಇಸ್ರೇಲ್ ಎಂಬ ಸ್ಟಾರ್ಟಪ್ ರಾಷ್ಟ್ರ
from AraliKatte ಅರಳಿಕಟ್ಟೆ · host AraliKatte
ಬ್ರಿಟೀಷರ ಆಳ್ವಿಕೆಯಿಂದ ಭಾರತ ಮುಕ್ತವಾದ ಆಸುಪಾಸಿನಲ್ಲೇ ಅರಬ್ಬರ ನಾಡಿನಲ್ಲಿ ಸಣ್ಣದೊಂದು ಯಹೂದಿ ರಾಷ್ಟ್ರ ಸ್ಥಾಪನೆಯಾಯಿತು. ತನ್ನ ಗಡಿಯ ಸುತ್ತಲೂ ಶತ್ರು ರಾಷ್ಟ್ರಗಳ ದಾಳಿಯನ್ನು ಹಿಮ್ಮೆಟ್ಟಿಸುತ್ತಾ ಈ ಪುಟ್ಟ ರಾಷ್ಟ್ರ ಪವಾಡ ಸದೃಶವಾದ ಆರ್ಥಿಕ ಪ್ರಗತಿಯನ್ನು ಸಾಧಿಸಿತು. ಹನಿ ನೀರಾವರಿ ತಂತ್ರಜ್ಞಾನದ ಆವಿಷ್ಕರಿಸಿ ಬಂಜರು ಭೂಮಿಯನ್ನು ಹಸಿರಾಗಿಸಿತು. ಸಂಖ್ಯೆಯಲ್ಲಿ ತಾನು ಎಂದಿಗೂ ಅರಬ್ ರಾಷ್ಟ್ರಗಳನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಅತ್ಯಾಧುನಿಕ ತಂತ್ರಜ್ಞಾನವನ್ನು ನೆಚ್ಚಿಕೊಂಡಿತು. ಜಗತ್ತಿನಲ್ಲೇ ಅತಿ ಹೆಚ್ಚು ಸ್ಟಾರ್ಟಪ್ ದಟ್ಟಣೆ ಹೊಂದಿರುವ ರಾಷ್ಟ್ರ ಎನ್ನುವ ಪಟ್ಟವನ್ನು ಏರಿತು. ಇಸ್ರೇಲಿನ ಸಾಧನೆಗೆ ಇರುವ ಕಾರಣಗಳೇನು? ಇಸ್ರೇಲಿನ ಅನುಭವ ಹಾಗೂ ಆಯ್ಕೆಗಳಿಂದ ಭಾರತವೂ ಸೇರಿದಂತೆ ಇತರೆ ದೇಶಗಳು ಕಲಿಯಬೇಕಾದ್ದು ಏನು? ಈ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಮುವತ್ತೆರಡನೆಯ ಸಂಚಿಕೆ ನಿಮ್ಮ ಮುಂದಿದೆ. Recording date: 30 August 2020
Embed this episode
Ready to play
Ep32: Israel, a startup nation - ಇಸ್ರೇಲ್ ಎಂಬ ಸ್ಟಾರ್ಟಪ್ ರಾಷ್ಟ್ರ
No transcript for this episode yet
Similar Episodes
No similar episodes found.
Similar Podcasts
No similar podcasts found.