Ep59: ನಸೀಮ್ ತಲೆಬ್ ಸ್ಕಿನ್ ಇನ್ ದಿ ಗೇಮ್ - Nassim Taleb's Skin in the game episode artwork

EPISODE · May 18, 2021 · 1H 24M

Ep59: ನಸೀಮ್ ತಲೆಬ್ ಸ್ಕಿನ್ ಇನ್ ದಿ ಗೇಮ್ - Nassim Taleb's Skin in the game

from AraliKatte ಅರಳಿಕಟ್ಟೆ · host AraliKatte

್ರಭಾವಶಾಲಿ, ಅದಕ್ಕಿಂತ ಹೆಚ್ಚಾಗಿ ವಿವಾದಾಸ್ಪದವಾದ ನಮ್ಮ ಕಾಲದ ಲೇಖಕರಲ್ಲಿ ಒಬ್ಬರಾದ ನಸೀಂ ತಲೆಬ್ ರ ಸ್ಕಿನ್ ಇನ್ ದಿ ಗೇಮ್ (Skin in the game) ಪುಸ್ತಕದ ಚರ್ಚೆ ಅರಳಿಕಟ್ಟೆಯ ಐವತ್ತೊಂಭತ್ತನೆಯ ಸಂಚಿಕೆಯಲ್ಲಿ... ತಲೆಬ್ ಬೌದ್ಧಿಕ ಜಗತ್ತಿನ ರಾಕ್ ಸ್ಟಾರ್ ಹಾಗೂ ರೆಬೆಲ್ ಎಂದೇ ಪರಿಗಣಿಸಲ್ಪಡುತ್ತಾರೆ. ವಿಶ್ವವಿದ್ಯಾಲಯಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ಬೋರ್ಡ್ ರೂಮ್ ಚರ್ಚೆಗಳವರೆಗೆ, ಜಿಮ್ ಗಳಿಂಗ ಹಿಡಿದು ಕ್ರೀಡಾಂಗಣಗಳಲ್ಲಿನ ಮಾತುಕತೆಗಳವರೆಗೆ ಈತನ ವಿಚಾರಗಳು ಪ್ರಭಾವಶಾಲಿಯಾಗಿವೆ. "ಕಣ್ಣಿಗೆ ಕಣ್ಣು" ಎಂದು ಗುರುತಿಸುವ ಹಮ್ಮುರಬಿಯ ಶಾಸನವನ್ನು ನಾವು ಆಧುನಿಕರು ಸರಿಯಾಗಿ ಅರ್ಥೈಸಿಕೊಂಡಿದ್ದೇವೆಯೇ? ನಾವು ಅನಾಗರೀಕ ಎಂದು ಭಾವಿಸುವ ಪುರಾತಾನ ಸಂಸ್ಕೃತಿಗಳು ಕಂಡುಕೊಂಡ ನೀತಿ ಶಾಸ್ತ್ರಗಳು ಪ್ರಬುದ್ಧವಾಗಿದ್ದವು ಎಂದು ತಲೆಬ್ ವಾದಿಸುವುದು ಏಕೆ? ಬೆಂಗಳೂರಿನಲ್ಲಿ ಚಿಕನ್ ಮಾರಲು ಅಂಗಡಿ ತೆರೆದ ಕೆ ಎಫ್ ಸಿ ಜಗತ್ತಿನ ತನ್ನ ಬೇರೆ ಯಾವುದೇ ಅಂಗಡಿಗಳಲ್ಲಿ ಇರದ ಅನ್ನದ ಬಟ್ಟಲು "ರೈಸ್ ಬೌಲ್" ಪರಿಚಯಿಸಲು ಕಾರಣವೇನು? ನಮ್ಮ ಬೀದಿಗಳಲ್ಲಿ ಒಂದೆರೆಡೆಂಬಂತೆ ಶುರುವಾದ ಆಕ್ಟೀವ್ ಹೊಂಡಾ ಮಾದರಿಯ ದ್ವಿಚಕ್ರವಾಹನಗಳು ಏಕಾಏಕಿ ರಸ್ತೆಗಳನ್ನು ಆವರಿಸಿದ್ದರ ಹಿಂದಿರುವ ತತ್ವವೇನು? ಇಸ್ರೇಲ್ ಪ್ಯಾಲಸ್ತೀನ್ ನಡುವಿನ ಬಿಕ್ಕಟ್ಟಿಗೂ, ಸಂಸಾರವೊಂದರಲ್ಲಿನ ಗಂಡ ಹೆಂಡತಿಯರ ನಡುವಿನ ಜಗಳಕ್ಕೂ ಇರುವ ನಂಟೇನು? - ಇವೇ ಮೊದಲಾದ ಕುತೂಹಲಕರ ಉದಾಹರಣೆಗಳೊಂದಿಗೆ ನಾವು ಈ ಪುಸ್ತಕಗ ಒಳನೋಟಗಳನ್ನು ನಮಗೆ ದಕ್ಕಿದ ರೀತಿಯಲ್ಲಿ ಚರ್ಚಿಸಿದ್ದೇವೆ. ನಿಮಗೂ ಈ ಚರ್ಚೆ ಖುಷಿಕೊಡಬಹುದು ಎನ್ನುವ ನಂಬಿಕೆ ನಮ್ಮದು. ಈ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್. Recording date: 11 April 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes Taleb's appearances on Econ Talk Podcast: https://nassimtaleb.org/tag/econtalk/ Taleb's podcast with Gad Saad: https://www.youtube.com/watch?v=ezhjumayRsg Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase.

Episode metadata supplied by the publisher feed · Published May 18, 2021

Embed this episode

Ready to play

Ep59: ನಸೀಮ್ ತಲೆಬ್ ಸ್ಕಿನ್ ಇನ್ ದಿ ಗೇಮ್ - Nassim Taleb's Skin in the game

0:00 1:24:12

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 24 minutes long.

When was this AraliKatte ಅರಳಿಕಟ್ಟೆ episode published?

This episode was published on May 18, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!