Ep66: ಅನಿಮೇಶನ್ ಚಿತ್ರಗಳ ಕುರಿತು ನಿಮಗೆಷ್ಟು ಗೊತ್ತು? (ಭಾಗ ೨) - A discussion on Animation films (Part 2) episode artwork

EPISODE · Jul 8, 2021 · 44 MIN

Ep66: ಅನಿಮೇಶನ್ ಚಿತ್ರಗಳ ಕುರಿತು ನಿಮಗೆಷ್ಟು ಗೊತ್ತು? (ಭಾಗ ೨) - A discussion on Animation films (Part 2)

from AraliKatte ಅರಳಿಕಟ್ಟೆ · host AraliKatte

ಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ. ಅನಿಮೇಶನ್, ವಿಶ್ಯುಯಲ್ ಎಫೆಕ್ಟ್ಸ್ ಹಾಗೂ ಚಿತ್ರ ನಿರ್ಮಾಣದ ದಿಕ್ಕನ್ನೇ ಬದಲಿಸುವ ಪರಿಣಾಮಕಾರಿ ತಂತ್ರಜ್ಞಾನಗಳು ಬಳಕೆಯಲ್ಲಿವೆ. ನಟ ಅಥವಾ ನಟಿಯೊಬ್ಬರ ಡಿಜಿಟಲ್ ನಕಲನ್ನು ಬಳಸಿ ನೂರಾರು ವರ್ಷಗಳ ಕಾಲ ಅವರು ನಟಿಸಿದ ಚಿತ್ರಗಳನ್ನು ನಿರ್ಮಿಸಲು ಸಾಧ್ಯ. ನೃತ್ಯ ಬರದ ನಟ ನಾಟ್ಯ ಪಟುವಾಗಬಲ್ಲ, ಈಜಲು ಬಾರದ ನಟಿ ಮೀನಿನಂತೆ ಈಜಬಲ್ಲಳು, ಅಳಲು ಬಾರದ ನಟರು ಪ್ರೇಕ್ಷಕರನ್ನು ಅಳುವ ಕಡಲಲ್ಲಿ ಮುಳುಗಿಸಬಲ್ಲರು. ಇವೆಲ್ಲವನ್ನು ಸಾಧ್ಯವಾಗಿಸುವ ಫೋಟೊ ಗ್ಯಾಮಿಟ್ರಿ ತಂತ್ರಜ್ಞಾನ ನಮ್ಮ ಬೆಂಗಳೂರಿನಲ್ಲೇ ಇರುವುದು ಎಷ್ಟು ಜನರಿಗೆ ತಿಳಿದಿದೆ? ಕೋವಿಡ್ ನಂತರ ಚಿತ್ರ ನಿರ್ಮಾಣವನ್ನು ಆಮೂಲಾಗ್ರವಾಗಿ ಬದಲಿಸಬಲ್ಲ ಮತ್ತೊಂದು ತಂತ್ರಜ್ಞಾನ ವರ್ಚುಯಲ್ ಪ್ರೊಡಕ್ಷನ್. ದೈತ್ಯವಾದ ಅತ್ಯಾಧುನಿಕ ಎಲ್ ಇ ಡಿ ಗೋಡೆ, ತಾರಸಿಗಳನ್ನು ಕಟ್ಟಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಲೋಕೇಶನ್ನನ್ನು ಸ್ಟುಡಿಯೋದಲ್ಲೇ ನಿರ್ಮಿಸಲು ಸಾಧ್ಯ. ಈ ತಂತ್ರಜ್ಞಾನ ಬಳಸಿ ಡಿಸ್ನಿ ದಿ ಮ್ಯಾಂಡಲೋರಿಯನ್ ಸರಣಿಯನ್ನು ನಿರ್ಮಿಸಿದೆ. ಭಾರತದಲ್ಲೂ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಬಳಸಿದ ದೊಡ್ಡ ಬಜೆಟ್ ನ ಚಿತ್ರಗಳು ತೆರೆಕಾಣಲಿವೆ. ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ. ನಿಮ್ಮ ಮುಂದಿರುವ ಅರವತ್ತಾರನೆಯ ಸಂಚಿಕೆ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ. ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್. Recording date: 19 June 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes - Bhimsain Khurana - https://www.dsource.in/course/story-indian-animation/video/bhimsain-khurana - Ram Mohan - https://www.dsource.in/course/story-indian-animation/video/ram-mohan - Cricket flip book - https://www.youtube.com/watch?v=vBxFBgZy8OA - Infobells Govina Haadu - https://www.youtube.com/watch?v=Lix-XLkFuvE - ABAI - https://twitter.com/abai_avgc - AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece

Episode metadata supplied by the publisher feed · Published Jul 8, 2021

Embed this episode

Ready to play

Ep66: ಅನಿಮೇಶನ್ ಚಿತ್ರಗಳ ಕುರಿತು ನಿಮಗೆಷ್ಟು ಗೊತ್ತು? (ಭಾಗ ೨) - A discussion on Animation films (Part 2)

0:00 44:11

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 44 minutes long.

When was this AraliKatte ಅರಳಿಕಟ್ಟೆ episode published?

This episode was published on July 8, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!