Novರಾತ್ರಿ ಸರಣಿ : ದಿನ ೧, ಮಿಥ್ಯೆ೧ - ಕನ್ನಡದ ಹುಟ್ಟು episode artwork

EPISODE · Oct 23, 2023 · 2 MIN

Novರಾತ್ರಿ ಸರಣಿ : ದಿನ ೧, ಮಿಥ್ಯೆ೧ - ಕನ್ನಡದ ಹುಟ್ಟು

from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit

👍 Like it? ...... ⁠Subscribe and Share! ⁠👁️ ⁠Watch it⁠  🕮 ⁠Read it ⁠  👂 ⁠Listen it⁠ 📧 ⁠Subscribe to our newsletter⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೧, ಮಿಥ್ಯೆ೧ : ಕನ್ನಡದ ಹುಟ್ಟುಸಂಸ್ಕೃತದಿಂದ ಕನ್ನಡ ಹುಟ್ಟಿದೆತಪ್ಪು. ಕನ್ನಡ ಸಂಸ್ಕೃತದಿಂದ ವಿಭಿನ್ನವಾದ ಮತ್ತು ಬೇರೆ ಮೂಲದ ಭಾಷೆ. ಕನ್ನಡ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಒಂದು ಸ್ವತಂತ್ರ ಭಾಷೆ. ಜನರ ಬೆರೆಕೆ ಮತ್ತು ಪರಸ್ಪರ ವ್ಯವಹಾರಗಳಿಂದ ಭಾಷೆಗಳು ಒಂದರ ಮೇಲೊಂದು ಪ್ರಭಾವ ಬೀರುವುದು ಸಹಜ. ಸಂಸ್ಕೃತ ಮತ್ತು ಪ್ರಾಕೃತ ಎರಡೂ ಕನ್ನಡದ ಮೇಲೆ ಬಹಳ ಪ್ರಭಾವ ಬೀರಿವೆ. ಹಾಗೆಯೆ, ಕನ್ನಡ ಕೂಡ ಸಂಸ್ಕೃತದ ಮೇಲೆ ಪ್ರಭಾವ ಬೀರಿದೆ. ಕನ್ನಡ ಪದಗಳು "ತತ್ಸಮಗೊಂಡು" ಸಂಸ್ಕೃತದಲ್ಲಿ ಸೇರಿವೆ. ಇಂಥ ಅನೇಕ ಪದಗಳನ್ನು ರೆ. ಕಿಟೆಲ್ ತಮ್ಮ ಕೋಶದಲ್ಲಿ ಪಟ್ಟಿ ಮಾಡಿದ್ದಾರೆ.ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತದ ಛಾಯೆ ಸಾಕಷ್ಟು ಬಿದ್ದಿದೆ. ಕನ್ನಡದ ನಾಲಗೆಗೆ ಒಗ್ಗದೆ ಇದ್ದರೂ, ಕನ್ನಡದಲ್ಲಿ ಸಂಸ್ಕೃತ ವರ್ಣಗಳು ಮತ್ತು ಸಂಸ್ಕೃತ ಮೂಲದ ಪದಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ; ಪೂರ್ತಿ ಕನ್ನಡದಲ್ಲಿ ಬೆರೆತುಕೊಳ್ಳದೆ, ಇಂದಿಗೂ ಸಂಸ್ಕೃತ ವ್ಯಾಕರಣ ನಿಯಮಗಳನ್ನೆ ಅನುಸರಿಸುತ್ತ ಪ್ರತ್ಯೇಕತೆಯನ್ನು, ಕಾಪಾಡಿಕೊಂಡಿವೆ. ಆದ್ದರಿಂದ, ಪುರಾತನವಾದ, ಜ್ಞಾನರಾಶಿಯನ್ನು ಹೊಂದಿರುವ, ಸಂಸ್ಕೃತವನ್ನು ಕನ್ನಡದ ಜನ್ಮದಾತೆ ಎನ್ನುವುದಕ್ಕಿಂತ ಕನ್ನಡದ ದೃಷ್ಟಿಯಿಂದ, ನೆರೆಮನೆಯ ಜಾಣ ಅಜ್ಜಿ ಎನ್ನುವುದು ಉಚಿತ.ಕನ್ನಡ ಲಿಪಿಯ ಮಿಥ್ಯೆ ೨ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧, ಅಕ್ಟೋಬರ ೨೩, ೨೦೨೩

Episode metadata supplied by the publisher feed · Published Oct 23, 2023

Embed this episode

NOW PLAYING

Novರಾತ್ರಿ ಸರಣಿ : ದಿನ ೧, ಮಿಥ್ಯೆ೧ - ಕನ್ನಡದ ಹುಟ್ಟು

0:00 2:57

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Secret of Kannada ಕನ್ನಡದ ಗುಟ್ಟು Kannadada Guttu?

This episode is 2 minutes long.

When was this Secret of Kannada ಕನ್ನಡದ ಗುಟ್ಟು Kannadada Guttu episode published?

This episode was published on October 23, 2023.

Can I download this Secret of Kannada ಕನ್ನಡದ ಗುಟ್ಟು Kannadada Guttu episode?

Yes. Use the download control on the episode player to save the publisher-provided media file.
URL copied to clipboard!