EPISODE · Oct 26, 2023 · 3 MIN
Novರಾತ್ರಿ ಸರಣಿ, ದಿನ ೪,ಮಿಥ್ಯೆ ೪: ಕನ್ನಡದ ಪ್ರಾಂತೀಯತೆ
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
👍 Like it? ...... Subscribe and Share! 👁️ Watch it 🕮 Read it 👂 Listen it 📧 Subscribe to our newsletterಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ೪. ಕನ್ನಡ ಒಂದು ಪ್ರಾಂತೀಯ ಭಾಷೆ (Kannada is a regional, provincial, parochial, or a vernacular language)ತಪ್ಪು. ಕನ್ನಡಕ್ಕೆ ಯಾವ ಸೀಮೆಯೂ ಇಲ್ಲ. ಕನ್ನಡಿಗರು ಭಾರತದ ತುಂಬ ಇದ್ದಾರೆ. ವಿದೇಶಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯೂ ಅಲ್ಲಿಯೂ ಕನ್ನಡ ಮಾತಾಡುತ್ತಾರೆ.ಪ್ರಶ್ನೆ "ಕನ್ನಡ ಮಾತ್ರ ಗೊತ್ತಿರುವ ಒಬ್ಬ ಭಾರತದ ಎಲ್ಲೆಡೆ ಬದುಕುಳಿಯಬಹುದೆ? ಜಗತ್ತಿನ ಎಲ್ಲೆಡೆ ಬದುಕುಳಿಯಬಹುದೆ?" ಎಂದಾದರೆ ಉತ್ತರ “ಇಲ್ಲ.” ಜಗತ್ತಿನ ಎಲ್ಲ ಭಾಷೆಗಳಿಗೂ ಇದೇ ಉತ್ತರ! ಕನ್ನಡ ಗೊತ್ತಿದ್ದರೆ ಕರ್ನಾಟಕದಲ್ಲಿ ಖಂಡಿತ ಬಾಳಬಹುದು ಮತ್ತು ಬೆಳೆಯಬಹುದು. ಆದ್ದರಿಂದ ಕನ್ನಡ ಮತ್ತು ಇತರ ಹಲವು ಭಾರತೀಯ ಭಾಷೆಗಳು ರಾಜ್ಯಗಳ ಭಾಷಗಳು. ಕನ್ನಡ ಕರ್ನಾಟಕ ರಾಜ್ಯದ ಭಾಷೆ. ಈ ಮೊದಲು ಹೇಳಿದಂತೆ, ಎಲ್ಲ ಭಾರತೀಯ ಭಾಷೆಗಳು ರಾಷ್ಟ್ರದ ಭಾಷೆಗಳು ಮತ್ತೂ ಭಾರತೀಯ ಸಂಸ್ಕೃತಿಯ ಆಕರ ಮತ್ತು ವಾಹಿನಿಗಳು. ಆದ್ದರಿಂದ ಕನ್ನಡವನ್ನು (ಭಾರತೀಯ ಭಾಷೆಯನ್ನು) regional, provincial, parochial, vernacular, ಪ್ರಾಂತೀಯ, ಎಂದೆಲ್ಲ ಸಂಬೋಧಿಸುವುದು ತಪ್ಪು. ನಿಜವಾಗಿಯೂ, ಇಂಥ ಮಾತುಗಳು ಹೀಗೆ ಅಸಡ್ಡೆಯಿಂದ ಮಾತಾಡುವವರ ಕಲೋನಿಯಲ್ ಗುಲಾಮೀಯ ಮಾನಸಿಕ ಮತ್ತು ಸಾಂಸ್ಕೃತಿಕ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುತ್ತವೆ.ಕನ್ನಡದ ಅದೈವಿಕತೆಯ ಮಿಥ್ಯೆ ೫ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೪, ಅಕ್ಟೋಬರ ೨೬, ೨೦೨೩
Embed this episode
NOW PLAYING
Novರಾತ್ರಿ ಸರಣಿ, ದಿನ ೪,ಮಿಥ್ಯೆ ೪: ಕನ್ನಡದ ಪ್ರಾಂತೀಯತೆ
No transcript for this episode yet
Similar Episodes
No similar episodes found.
Similar Podcasts
No similar podcasts found.