EPISODE · Oct 27, 2023 · 2 MIN
Novರಾತ್ರಿ ಸರಣಿ, ದಿನ ೫, ಮಿಥ್ಯೆ ೫: ಕನ್ನಡದ ಅದೈವಿಕತೆ
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
👍 Like it? ...... Subscribe and Share! 👁️ Watch it 🕮 Read it 👂 Listen it 📧 Subscribe to our newsletterಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ೪. ಕನ್ನಡ ದೇವಭಾಷೆ (ಧಾರ್ಮಿಕ ಭಾಷೆ) ಅಲ್ಲತಪ್ಪು. ಹಲವಾರು ಜೈನ ಗ್ರಂಥಗಳು ಕನ್ನಡದಲ್ಲಿ ಇವೆ. ಲಿಂಗಾಯತ ಭಾಷೆ ಕನ್ನಡ. ಪುರಂದರಾದಿ ದಾಸಶ್ರೇಷ್ಠರೆಲ್ಲ ಕನ್ನಡದಲ್ಲೆ ಆರಾಧಿಸಿ ವಿಪುಲ ಸಂಗೀತ-ಸಾಹಿತ್ಯ ಸೃಷ್ಟಿಸಿದ್ದಾರೆ. “ದೇವರಿಗೆ ತಿಳಿಯುವುದು ಒಂದೇ ಭಾಷೆ, ಅದು ಕನ್ನಡ ಅಲ್ಲ” ಎನ್ನುವುದು ಹಾಸ್ಯಾಸ್ಪದ. ಸರ್ವಜ್ಞನಾದ ದೇವರಿಗೆ ಎಲ್ಲ ಭಾಷೆಗಳೂ ಗೊತ್ತು. ಸಂಸ್ಕೃತವೂ ದೇವಭಾಷೆ, ಕನ್ನಡವೂ ದೇವಭಾಷೆ; ತಮಿಳು, ತೆಲುಗು, ತುಳು, ಬಡಗ, ಕೊಡವ, ಕೊರಗ, ಕುಡಿಯ, ಗೊಂಡಿ, ಕೊಂಡ. ಮಂಡ, ಕುವಿ, ಕೋಯಾ, ಕೊಲಾಮಿ, ಕುರುಖ, ಒಳ್ಳಾರಿ, ತೋಡ, ದುರುವ, ಬ್ರಾಹ್ವಿಗಳೂ ದೇವಭಾಷೆಗಳು.ಭಕ್ತಿಯೆ ಪರಮ ಭಾಷೆ ಆಗಿರುವ ದೇವರಿಗೆ "ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿಹ ಕನ್ನಡ" ಅಂತರಂಗದ ಮಾತು.ಕನ್ನಡದ ದುಷ್ಪ್ರಭಾವದ ಮಿಥ್ಯೆ ೬ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೫, ಅಕ್ಟೋಬರ ೨೭, ೨೦೨೩
NOW PLAYING
Novರಾತ್ರಿ ಸರಣಿ, ದಿನ ೫, ಮಿಥ್ಯೆ ೫: ಕನ್ನಡದ ಅದೈವಿಕತೆ
No transcript for this episode yet
Similar Episodes
Mar 19, 2026 ·34m
Feb 18, 2026 ·11m
Feb 11, 2026 ·45m
Nov 12, 2025 ·35m
Oct 17, 2025 ·40m