EPISODE · Oct 29, 2023 · 2 MIN
Novರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
👍 Like it? ...... Subscribe and Share! 👁️ Watch it 🕮 Read it 👂 Listen it 📧 Subscribe to our newsletterಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ೭. ಕನ್ನಡ ಕಲಿಯುವುದು ಸುಲಭವಲ್ಲತಪ್ಪು. ಇದು ಕನ್ನಡವನ್ನು ಇಂಗ್ಲೀಷಿಗೆ ಮೇಲ್ನೋಟದಲ್ಲಿ ಹೋಲಿಸಿ ಸಾಮಾನ್ಯವಾಗಿ ಹೇಳುವ ಹಗುರ ಮಾತು. "ಕನ್ನಡದಲ್ಲಿ ೪೯ ಅಕ್ಷರಗಳು ಮತ್ತು ಅವುಗಳ ಒತ್ತಕ್ಷರಗಳು ಇವೆ; ಇಂಗ್ಲಿಷಲ್ಲಿ ಕೇವಲ ೨೬" ಎಂಬುದು ಅವರ ವಾದ, ಕೇವಲ ಸಂಖ್ಯೆಗಳ ಗುದ್ದಾಟ. ಕೆದಕಿ ನೋಡಿದರೆ, ಇಂಗ್ಲೀಷ್ ನಲ್ಲಿ ದೊಡ್ಡ ಮತ್ತು ಸಣ್ಣ ಅಕ್ಷರಗಳು ಸೇರಿ ೫೨ ಅಕ್ಷರಗಳು ಮೇಲಾಗಿ ೪೪ ಉಲಿಮೆಗಳು (phonemes) ಕೂಡ ಇವೆ. ಉಚ್ಚಾರಕ್ಕೂ ಬರೆಯುವುದಕ್ಕೂ ಏಕರೂಪಿ ಸಂಬಂಧವಿಲ್ಲ. ಕನ್ನಡ ವರ್ಣಮಾಲೆ ತಾರ್ಕಿಕವಾಗಿದ್ದು ಮತ್ತು ಉಲಿಮಿಕ (phonetic) ಆಗಿದೆ. ಸಂಧಿ, ಸಮಾಸ, ಮತ್ತು ಹೊಸ ಪದಗಳನ್ನು ಹುಟ್ಟಿಸಿಕೊಳ್ಳಲು ತದ್ಭವ ನಿಯಮಗಳಿವೆ. ಮೇಲಾಗಿ ಕನ್ನಡ ಅರ್ಥ ದೃಷ್ಟಿಯಿಂದ (semantically) ಶ್ರೀಮಂತವಾಗಿದೆ.ಕನ್ನಡದ ವೈಜ್ಞಾನಿಕ ದೌರ್ಬಲ್ಯದ ಮಿಥ್ಯೆ ೮ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೭, ಅಕ್ಟೋಬರ ೨೯, ೨೦೨೩
Embed this episode
NOW PLAYING
Novರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ
No transcript for this episode yet
Similar Episodes
No similar episodes found.
Similar Podcasts
No similar podcasts found.