EPISODE · Oct 31, 2023 · 2 MIN
Novರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
👍 Like it? ...... Subscribe and Share! 👁️ Watch it 🕮 Read it 👂 Listen it 📧 Subscribe to our newsletterಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು೯. ಕನ್ನಡ ಮಾತಾಡದಿದ್ದರೆ ಮರೆತು ಹೋಗುತ್ತದೆತಪ್ಪು. ಬಹಳ ಕಾಲ ಕನ್ನಡ ಮಾತಾಡದೆ ಇದ್ದಾಗ, ಓದದೆ ಇದ್ದಾಗ, ಅಥವ ಬೇರೆ ದೇಶಕ್ಕೆ ವಲಸೆ ಹೋದಾಗ ಕನ್ನಡ ಮರೆತಂತೆ ಅನಿಸಿದರೂ ಬೇರುಗಳು ಗಟ್ಚಿಯಾಗಿ ಉಳಿದಿರುತ್ತವೆ. ಸರಿ ಸಂದರ್ಭದಲ್ಲಿ ಕನ್ನಡ ಮತ್ತೆ ಚಿಗುರುವುದು ಖಚಿತ. ನನ್ನದೆ ಉದಾಹರಣೆ ಕೊಡುವುದಾದರೆ, ಅಮೆರಿಕಕ್ಕೆ ಬಂದ ಮೇಲೆ ಕೆಲ ವರ್ಷ ಕನ್ನಡ ಮಾತಾಡಲೆ ಇಲ್ಲ. ಅಂಥ ಸಂದರ್ಭಗಳೆ ಬರಲಿಲ್ಲ. ಮುಂದೆ, ೨೦ ವರ್ಷಗಳ ನಂತರ ಭಗವದ್ಗೀತೆಯನ್ನು ಕನ್ನಡಕ್ಕೆ ಅನುದನಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾಯ್ತು. ಕನ್ನಡ ಮರೆತಿದೆ, ಕನ್ನಡ ನನಗೆ ಬಾರದು, ಕನ್ನಡ ಕಠಿನ ಎನ್ನುವ ಅನೇಕ ಶಂಕೆಗಳನ್ನು ತಲೆಯಲ್ಲಿ ತುಂಬಿಕೊಂಡು, ಮೊದಲ ಅಧ್ಯಾಯದಲ್ಲೆ, ಆ ಅರ್ಜುನನ ಹಾಗೆಯೆ ಕೈ ಚೆಲ್ಲಿ ಕುಳಿತುಕೊಂಡೆ. ಮುಂದೆ ನಡೆದದ್ದು ಕರ್ನಾಟಕ! ನುಡಿದದ್ದು ಭಗವತ್ ಕಂನುಡಿ!music -Separatorಕನ್ನಡದಲ್ಲಿ ಆಡಳಿತದ ಮಿಥ್ಯೆ ೧೦ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೯, ಅಕ್ಟೋಬರ ೩೧, ೨೦೨೩
Embed this episode
NOW PLAYING
Novರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು
No transcript for this episode yet
Similar Episodes
No similar episodes found.
Similar Podcasts
No similar podcasts found.