EPISODE · Aug 31, 2026 · 37 MIN
ರೋಗದ ವಾಸನೆ ಪತ್ತೆಹಚ್ಚುವ ನಾಯಿಗಳು: ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಪ್ರಕೃತಿ ಮತ್ತು ವಿಜ್ಞಾನದ ಸಂಗಮ
from TALRadio Kannada · host Touch A Life Foundation
ಪ್ರತಿ ಕಾಯಿಲೆಗೂ ತನ್ನದೇ ಆದ ಒಂದು ವಾಸನೆ ಇರುತ್ತದೆಯೇ? ಹೌದು ಎನ್ನುತ್ತದೆ ಬೆಂಗಳೂರಿನ ಆಳವಾದ ತಂತ್ರಜ್ಞಾನ ಆಧಾರಿತ (Deep-tech) ಸ್ಟಾರ್ಟ್‌ಅಪ್ 'ಡಾಗ್ನೋಸಿಸ್' (Dognosis). TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ನಾಯಿಗಳ ಅಸಾಧಾರಣ ವಾಸನೆ ಗ್ರಹಿಸುವ ಶಕ್ತಿಯನ್ನು ವೈದ್ಯಕೀಯ ಜಗತ್ತಿನ ಕ್ರಾಂತಿಕಾರಿ ಬದಲಾವಣೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲಾಗಿದೆ.'ಡಾಗ್ನೋಸಿಸ್' ಸಂಸ್ಥೆಯ ಶೃಷ್ಠಿ ಎ. ಅವರು ನಮ್ಮ ಜೊತೆಗೂಡಿ, ನಾಯಿಗಳ ನೈಸರ್ಗಿಕ ಸಾಮರ್ಥ್ಯವನ್ನು DogSense ಮತ್ತು BreathEasy ನಂತಹ ತಂತ್ರಜ್ಞಾನಗಳ ಮೂಲಕ ನಂಬಿಕಸ್ಥ ವೈದ್ಯಕೀಯ ಡೇಟಾವಾಗಿ ಹೇಗೆ ಪರಿವರ್ತಿಸಲಾಗುತ್ತದೆ ಎಂಬ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಭಾರತದಂತಹ ದೇಶದಲ್ಲಿ ಏಕೆ ಸವಾಲಾಗಿದೆ? ಈ ಮಹಾನ್ ಕೆಲಸದಲ್ಲಿ ಭಾಗಿಯಾಗಿರುವ ನಾಯಿಗಳ ಆರೋಗ್ಯ ಮತ್ತು ಸೌಖ್ಯವನ್ನು ಹೇಗೆ ಕಾಪಾಡಲಾಗುತ್ತದೆ? ಮತ್ತು ತಂತ್ರಜ್ಞಾನವು ಮಾನವೀಯತೆಯೊಂದಿಗೆ ಬೆರೆತಾಗ ಉಂಟಾಗುವ ಹೊಸ ಬದಲಾವಣೆಗಳೇನು? ಎಂಬ ಹಲವು ಸೂಕ್ಷ್ಮ ಮಗ್ಗುಲಗಳ ಮೇಲೆ ಈ ಸಂವಾದ ಬೆಳಕು ಚೆಲ್ಲುತ್ತದೆ. ವಿಜ್ಞಾನದ ಈ ಅದ್ಭುತ ಪಯಣವನ್ನು ಕೇಳಲು RJ ಗುರು ನಡೆಸಿಕೊಡುವ ಈ ಸಂಚಿಕೆಯನ್ನು ಮಿಸ್ ಮಾಡಬೇಡಿ.Can the most effective tool to fight cancer be walking right beside us? In this fascinating episode of TALRadio Kannada, we explore the groundbreaking world of Dognosis, a deep-tech startup that bridges the gap between a dog’s extraordinary sense of smell and modern medicine.We sat down with Shrishti A from the Founder's Office at Dognosis to discuss their innovative technologies, DogSense and BreathEasy. Discover how a dog's natural intuition is transformed into reliable medical data through AI and brain-computer interfaces. From the challenges of early detection in India to the heartwarming focus on the wellbeing of their four-legged "experts," this conversation is a tribute to the power of nature and innovation. Join host RJ Guru to learn how empathy and deep-tech are creating a hopeful new path for healthcare.Available on: TALRadio | Spotify | Apple Podcast Guest: Shrishti A (Associate - Founder's Office, Dognosis)Host: RJ Guru#Dognosis #CancerDetection #HealthTech #Innovation #NatureMeetsTech #EarlyDetection #Inspiration #HumanConnect #TALRadioKannada #ಬದಲಾವಣೆಯಧ್ವನಿ #ಕ್ಯಾನ್ಸರ್_ಜಾಗೃತಿ #ವಿಜ್ಞಾನ #TouchALife #ಕನ್ನಡಪಾಡ್‌ಕಾಸ್ಟ್
Embed this episode
Ready to play
ರೋಗದ ವಾಸನೆ ಪತ್ತೆಹಚ್ಚುವ ನಾಯಿಗಳು: ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಪ್ರಕೃತಿ ಮತ್ತು ವಿಜ್ಞಾನದ ಸಂಗಮ
No transcript for this episode yet
Similar Episodes
No similar episodes found.