EPISODE · Sep 19, 2023 · 7 MIN
ಸ್ನೇಹಿತರ ಬಗ್ಗೆ ಹೊಟ್ಟೆಕಿಚ್ಚು ಪಡಬಹುದೇ? | Sadhguru Kannada
from ಸದ್ಗುರು ಕನ್ನಡ Sadhguru Kannada · host Sadhguru Kannada
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ , ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ. ಇದು ಬೆಂಗಳೂರಿನ IIM ನಲ್ಲಿ ನಡೆದ ಮಾತುಕತೆ! 'ಗೆಳೆಯರು ಚೆನ್ನಾಗಿ ಜೀವನ ನಡೆಸುತ್ತಿಲ್ಲ ಅಂದರೆ ಬೇಜಾರಾಗುತ್ತೆ. ಅವರು ನಮಗಿಂತ ತುಂಬಾ ಚೆನ್ನಾಗಿ ನಡೆಸುತ್ತಿದ್ದರೆ, ಮತ್ತೂ ಬೇಜಾರಾಗುತ್ತೆ! ಮನುಷ್ಯರಾಗಿ ನಮಗೆ ಏಕೆ ಹೀಗನಿಸುತ್ತೆ?’ ಎಂಬುದು ಅನೇಕರ ಪ್ರಶ್ನೆ. ಹಾಗಿದ್ದರೆ ಈ ಹೊಟ್ಟೆ ಕಿಚ್ಚಿನಿಂದ ನಮಗೆ ಯಾವ ರೀತಿಯಲ್ಲಿಯಾದರೂ ಪ್ರಯೋಜನವಿದೆಯೇ? ನಮ್ಮ ಜೀವನ ಸುಂದರವಾಗುವಲ್ಲಿ ಹೊಟ್ಟೆ ಕಿಚ್ಚು ಹೇಗೆ ನಮಗೇ ತೊಡಕಾಗಿ ಪರಿಣಮಿಸಬಹುದು. ಇದರಿಂದ ಹೊರಬರುವುದು ಹೇಗೆ? ಬೇರೆ ಯಾರು ಹೇಗಿದ್ದರೂ ತಲೆಕೆಡಿಸಿಕೊಳ್ಳದೇ ನಮ್ಮ ಜೀವನವನ್ನು ನಾವು ಸುಂದರವಾಗಿ ರೂಪಿಸಿಕೊಳ್ಳುವುದು ಹೇಗೆ? ಆ ಮೂಲಕ ಒಂದು ಮಾದರಿಯಾಗಿ ಬದುಕುವುದು ಹೇಗೆ? ಕೇಳಿ ಈ ಅದ್ಭುತ ವಿಡಿಯೋದಲ್ಲಿ! ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices
Embed this episode
NOW PLAYING
ಸ್ನೇಹಿತರ ಬಗ್ಗೆ ಹೊಟ್ಟೆಕಿಚ್ಚು ಪಡಬಹುದೇ? | Sadhguru Kannada
No transcript for this episode yet
Similar Episodes
No similar episodes found.