Skip to content
Mankutimmana Kagga podcast artwork

PODCAST · education

Mankutimmana Kagga

by Girish Chandra Ananthanarayana

Mankutimmana Kagga, written by DV Gundappa, is one of the greatest works in Kannada. It touches on every aspect of life - from living to philosophy to religion to principles.

Publisher-supplied feed metadata · PodParley refreshed Oct 23, 2021 · Source feed

Episodes

  1. Mankutimmana Kagga 187

    ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ಬಿಡಿಜೀವ ಸಂಗಾತಿಜೀವಗಳನರಸಿ ಪಡೆದಂದು ಪೂರ್ಣವದು – ಮಂಕುತಿಮ್ಮ

  2. Mankutimmana Kagga 566

    ಆರಣ್ಯಕದ ಪುಷ್ಪಗಳ ಮೂಸುವವರಾರು? । ಆರಿಹರು ಪತಗದುಡುಪನು ಹುಡುಕಿ ಮಚ್ಚಲ್? ॥ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ । ಸ್ವಾರಸ್ಯವೆಸಗುವಳೊ! – ಮಂಕುತಿಮ್ಮ ॥ ೫೬೬ ॥

  3. Mankutimmana Kagga 553

    ಚೂರುಗಳು ಹದಿನಾರು ಚಂದ್ರಮಂಡಲಕಂತೆ । ನೂರಾರು ಚೂರುಗಳು ಸತ್ಯಚಂದ್ರನವು ।। ಸೇರಿಸುತಳವುಗಳನು ಬಗೆಯರಿತು ಬೆಳೆಸುತಿರೆ । ಸಾರ ಋತಪೂರ್ಣಿಮೆಯೊ – ಮಂಕುತಿಮ್ಮ ।।

  4. Mukundamala Stotra

    Mukunda mAla stotram: Gita-God-Hinduism: MukundamAla Stotram

  5. Mankutimmana Kagga - 84

    ಅಣು ಭೂತ ಭೂಗೋಳ ತಾರಾಂಬರಾದಿಗಳ | ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಕುಣಿಸುತಿರುವನು ತನ್ನ ಕೃತಿಕಂತುಕವನದರೊ|| ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || 84 ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ,...

  6. Mankutimmana Kagga - 361

    ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ | ಆರವ್ಯುದಾರ್ತರ್ ಅತ್ಯಾರ್ತರಾಪದವ॥ ರೌರವಿಗೆ ಹಿತ ಮಹಾರೌರವಿಯ ಗೋಳುದನಿ । ನಾರಕದೊಳದುಪಾಯ – ಮಂಕುತಿಮ್ಮ ॥ 361 ವಾಸಿಗಳ್ಗಿಹುದೊಂದು = ವಾಸಿಗಳಿಗೆ+ಇಹುದು+ಒಂದು, ಆರವ್ಯುದಾರ್ತರ್ = ಆರವ್ಯುದು+ಆರ್ತರ್, ಅತ್ಯಾರ್ತರಾಪದವ = ಅತಿ+ಆರ್ತರ+ಆಪದವ, ನಾರಕದೊಳುದುಪಾಯ= ನಾರಕದೊಳು+ಅದು+ಉಪಾಯ. ಧಾರಿಣಿ = ಭೂಮಿ, ಜಗತ್ತು,...

  7. Mankutimmana Kagga - 451

    ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ । ಶೈಲದಚಲತೆಯಿರಲು ಝರಿಯ ವೇಗ ಸೊಗ ।। ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು । ವೈಲಕ್ಷಣದೇ ಚೆಂದ – ಮಂಕುತಿಮ್ಮ ।। 451 ವಿಸ್ತರವಿರಲು=ವಿಸ್ತರವು+ಇರಲು ಶೈಲದಚಲತೆಯಿರಲು=ಶೈಲದ ಅಚಲತೆ+ಇರಲು, ಬಯಲಂತಿರಲು=ಬಯಲಂತೆ+ಇರಲು, ಮನೆಯಚ್ಚುಕಟ್ಟಿಂಬು=ಮನೆಯ+ಅಚ್ಚುಕಟ್ಟು+ಇಂಬು ನೀಲ=ಆಕಾಶ, ಸೊಗ=ಸೊಗಸು-ಚೆಂದ, ಝರಿಯ= ದುಮ್ಮಿಕ್ಕುವ...

  8. Mankutimmana Kagga - 156

    ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ | ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ || ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ | ಬಾಯ ಚಪ್ಪರಿಸುವನು – ಮಂಕುತಿಮ್ಮ || 156 ಈಯವನಿಯೊಲೆಯೊಳೆಮ್ಮಯ = ಈ + ಅವನಿ + ಒಲೆಯೊಳು + ಎಮ್ಮಯ// ಬಾಳನಟ್ಟು = ಬಾಳನು + ಅಟ್ಟು

  9. Mankutimmana Kagga - 535

    ನೀರ ನೆರೆ ತನ್ನೆದುರಿನಣೆಕಟ್ಟನೊಡೆಯುವುದು । ಊರನದು ಕೊಚ್ಚುವುದು ಬದಿಯ ಕಟ್ಟದಿರೆ ।। ಏರಿಗಳನಿಕ್ಕೆಲದಿ ನಿಲಿಸೆ ಹರಿಯುವುದು ಸಮನೆ । ಪೌರುಷದ ನದಿಯಂತು – ಮಂಕುತಿಮ್ಮ ।। 535 ।। ತನ್ನೆದುರಿನಣೆಕಟ್ಟನೊಡೆಯುವುದು – ತನ್ನ+ಎಂದುರಿನ+ಅಣೆಕಟ್ಟನ್ನು+ಒಡೆಯುವುದು, ಊರನದು = ಊರನ್ನು+ಅದು, ಕಟ್ಟದಿರೆ=ಕಟ್ಟದೆ+ಇರೆ, ಏರಿಗಳನಿಕ್ಕೆಲದಿ...

  10. Mankutimmana Kagga -132-131

    ರಾಮನುಚ್ವಾಸವಲೆದಿರದೆ ರಾವಣನೆಡೆಗೆ | ರಾಮನುಂ ದಶಕಂಠನೆಲರನುಸಿರಿರನೆ || ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? | ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ || 132 || ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರಿರನೆ// ರಾಮರಾವಣರುಸಿರ್ಗಳಿಂದು = ರಾಮ + ರಾವಣರ +...

  11. Manktuimmana Kagga - 771

    ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು । ಕ್ಷೀರವದು, ಘೃತವಿದ-ದರೊಳ-ಗೆನ್ನುತೊಂದು ।। ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು । ಮೂರಿಂತು ಮತವಿವರ – ಮಂಕುತಿಮ್ಮ ।। 771

  12. Mankutimmana Kagga - 27

    ಧರೆಯ ಬದುಕೇನದರ ಗುರಿಯೇನು ಫಲವೇನು? I ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ II ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ I ನರನು ಸಾದಿಪುದೇನು ? – ಮಂಕು ತಿಮ್ಮ II 27 ಧರೆ = ಭೂಮಿ, ಬಳಸು= ಸುತ್ತು, ಪರಿಭ್ರಮಣೆ = ಸುತ್ತಾಟ, ಮೃಗ= ಪ್ರಾಣಿ, ಖಗ = ಪಕ್ಷಿ

  13. Mankutimmana Kagga - 113

    ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ | ಗುಣಿಸುವನು ಭೂತಶಕ್ತಿಗಳನದರಿಂದೇಂ || ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ವ | ವಣಗಿಹುದು ಮೂಲವದು – ಮಂಕುತಿಮ್ಮ|| 113 ಅಣುಸಂಖ್ಯೆಯೆಣಿಸುವನು = ಅಣುಸಂಖ್ಯೆಯನು + ಎಣಿಸುವನು | ಭೂತಶಕ್ತಿಗಳನದರಿಂದೇಂ = ಭೂತ + ಶಕ್ತಿಗಳನು + ಅದರಿಂದ+ ಏನು| ಗಣಿತಸಾಧ್ಯದ = ಗಣಿತ + ಸಾಧ್ಯದ | ಹಿಂದಗಣ್ಯದ = ಹಿಂದೆ+ ಅಗಣ್ಯದ |...

  14. Mankutimmana Kagga - 482

    ಗುಹೆಯಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ । ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ।। ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- । ರ್ವಹಿಸುವುದೇ ಜಾಣ್ಮೆಯಲ – ಮಂಕುತಿಮ್ಮ।। 482

  15. Mankutimmana Kagga - 678

    ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ । ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು ।। ಉನ್ನತಿಯನಾತ್ಮವನು ತಡೆದಿಡುವ ಪಾಶಗಳು । ಛಿನ್ನವಾದಂದೆ ಸೊಗ – ಮಂಕುತಿಮ್ಮ ।। 678

  16. Mankutimmana Kagga - 151

    ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ | ಜೀವವಾಸನೆಗಳಲಿ ಪೂರ್ವಕೃತವೆನಿಸಿ || ಧೀವರ್ತನೆಯಲಿ ಪೌರುಷವೆನಿಸಿ ಪರಸತ್ವ | ತ್ರೈವಿಧದೊಳಿರುತಿಹುದು – ಮಂಕುತಿಮ್ಮ || 151 ದೈವವೆನಿಸಿರುತೆ = ದೈವ+ಎನಿಸಿ+ ಇರುತೆ// ತ್ರೈವಿಧದೊಳಿರುತಿಹುದು = ತ್ರೈವಿಧದೊಳು + ಇರುತಿಹುದು.

  17. Mankutimmana Kagga - 505

    ದೈವಕೃಪೆಯನುವುದೇಂ? ಪರಸತ್ವನವವೃಷ್ಟಿ । ಜೀವಗುಣ ಪಕ್ವಪಟ್ಟಂತದರ ವೇಗ ।। ಭಾವಚೋದನೆಗಳಲಿ ಭಾಹ್ಯಸಾಧನೆಗಳಲಿ। ತೀವಿ ದೊರೆಕೊಳುವುದದು – ಮಂಕುತಿಮ್ಮ ।। 505 ದೈವಕೃಪೆಯನುವುದೇಂ=ದೈವಕೃಪೆ+ಎನುವುದು+ಅದೇಂ, ಪಕ್ವಪಟ್ಟಂತದರ=ಪಕ್ವ+ಪಟ್ಟಂತೆ+ಅದರ, ದೊರೆಕೊಳುವುದದು=ದೊರೆ+ಕೊಳುವುದು+ಅದು ಪರಸತ್ವನವವೃಷ್ಟಿ= ಪರಮಾತ್ಮನ ನಿತ್ಯನೂತನ ಕೃಪಾಧಾರೆ, ಭಾವಚೋದನೆ= ಅಂತರಂಗದ...

  18. Mankutimmana Kagga - 561 - 560 - 559

    ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ । ಕುಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ।। ಎಂದೆಂದುಮಶ್ವತ್ತ ಹಳೆಹೊಸದು, ತಾನದಾ । ಸ್ಪಂದನವೋ ಬ್ರಹ್ಮನದು – ಮಂಕುತಿಮ್ಮ || 561 ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ । ತೀವಿರ್ಪುದದು ಕೆಳಗೆ ನಮ್ಮ ಲೋಕದಲ್ಲಿ ।। ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು । ಸಾವು ಮರಕೇನಿಲ್ಲ – ಮಂಕುತಿಮ್ಮ।। 560 ಪರಮಪದದಲಿ...

  19. Mankutimmana Kagga - 913

    ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು । ಕತ್ತಲೆಯ ಮೊಡಕು ಮೂಲೆಗಳ ಸೇರದಿರು ।। ಭಾಸ್ಕರನನುಗ್ರಹವೆ ನೂತ್ನ ಜೀವನಸತ್ವ । ಮೃತ್ಯು ನಿನಗಲ್ಪತೆಯೊ – ಮಂಕುತಿಮ್ಮ ।। 913

  20. Mankutimmana Kagga - 762

    ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ । ಮೇರುವನು ಮರೆತಂದೆ ನಾರಕಕೆ ದಾರಿ ।। ದೂರವಾದೊಡದೇನು ? ಕಾಲು ಕುಂಟಿರಲೇನು । ಊರ ನೆನಪೇ ಬಲವೋ – ಮಂಕುತಿಮ್ಮ ।। 762 ಗುರಿಯಿರಲಿ=ಗುರಿ+ಇರಲಿ, ಮರೆತಂದೆ=ಮರೆತ+ಅಂದೆ,ದೂರವಾದೊಡದೇನು=ದೂರವು+ಆದೊಡೆ+ಏನು, ಕುಂಟಿರಲೇನು=ಕುಂಟು+ಇರಲು+ಏನು ಧಾರುಣಿ=ಭೂಮಿ, ಮೇರು=(ಪರ್ವತ) ಉನ್ನತ, ನಾರಕ=ನರಕ(ಜಗತ್ತಿನ ಕಷ್ಟಭರಿತವಾದ ಜೀವನ )

  21. Mankutimmana Kaggaa - 629

    ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ । ಆವರಿಸದಳಲ್ ಎಲ್ಲರನುಮೊಂದೆ ಸಮಯ ।। ನೋವಿಲ್ಲದವರು ನೊಂದವರನು ಸಂತಯಿಸುತಿರೆ । ಜೀವನವು ಕಡಿದಹುದೆ? – ಮಂಕುತಿಮ್ಮ ।।629

  22. Mankutimmana Kagga - 178

    ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ ಪಾಶವಾಗಲ್ಬಹುದು ನಿನಗೆ ಮೈ ಮರೆಸಿ ವಾಸನೆಗಳುರುಬಿ ಚಿತ್ತ ಜ್ವರಗಳಂ ಬಿತ್ತಿ ಮೋಸದಲಿ ಕೊಲ್ಲುವುವೋ – ಮಂಕುತಿಮ್ಮ || 178

  23. Mankutimmana Kagga - 616

    ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ । ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ।। ಸತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ । ಶಕ್ತಿಯಧ್ಯಾತ್ಮಕದು – ಮಂಕುತಿಮ್ಮ।। 616 ಯುಕ್ತದಿಂದೆರಡುಮಂಚುಗಳೊಂದೆ =ಯುಕ್ತದಿಂದ+ಎರಡುಂ+ಅಂಚುಗಳು+ಒಂದೆ, ಶಕ್ತಿ+ಆಧ್ಯಾತ್ಮಕೆ+ಅದು, ಭುಕ್ತಿಪಥ = ಹೊಟ್ಟೆಪಾಡಿನ ದಾರಿ. ಮುಕ್ತಿಪಥ=ಪರಮಾರ್ಥದ ಹಾದಿ, ಯುಕ್ತದಿಂದ=ಮೂಲ ರೂಪದಿಂದ,

  24. Mankutimmana Kagga - 330

    ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ । ಚೀಟಿ ತಾಂ ಬೀಳನೆನಲ್ ಆಟ ಸಾಗುವುದೆ? ಏಟಾಯ್ತೆ ಗೆಲುವಾಯ್ತೆಂದೆಂದು ಕೇಳುವುದದೇನು ಆಟದೋಟವೆ ಲಾಭ – ಮಂಕುತಿಮ್ಮ || 330 ಫಲವೇನು? = ಫಲವು + ಏನು?, ಬೀಳನೆನಲ್ = ಬೀಳೆನು+ಎನಲ್, ಏಟಾಯ್ತೆ=ಏಟು+ಆಯ್ತೆ, ಗೆಲುವಾಯ್ತೆಂದೆಂದು = ಗೆಲುವು+ಆಯ್ತೆ+ಎಂದು, ಕೇಳುವುದದೇನು = ಕೇಳುವುದು + ಅದೇನು ಆಟದೋಟವೆ= ಆಟದ+ಓಟವೆ, ಕೌತುಕ =...

  25. Mankutimmana Kagga - 238

    ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ ತನುವಂಗಗಳೊಳೊಂದು ರೂಪ ಗುಣ ಬೇರೆ ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ ತನುವೇಕದೊಳ್ ಬಹುಳ – ಮಂಕುತಿಮ್ಮ || 238 ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ = ಮನುಜಕುಲ + ಒಂದು +ಒಬ್ಬನು+ಇನೊಬ್ಬನಂತೆ + ಇಲ್ಲ // ತನುವಂಗಗಳೊಳೊಂದು = ತನು+ ಅಂಗಗಳು+ಒಂದು ಮನದೊಳೊಬ್ಬೊಬ್ಬನೊಂದೊಂದು = ಮನದೊಳು+ಒಬ್ಬಬ್ಬನದು+ಒಂದೊಂದು//...

  26. Mankutimmana Kagga - 623

    ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ । ವಿಹಿತದ ಸ್ಥಾನದಿಂ ಸಹಜಗುಣಬಲದಿಂ-।। ದಿಹಪರ-ಸಮನ್ವಯದೆ ಸರ್ವಹಿತಸಂಸ್ಥಿತಿಗೆ । ಸಹಕರಿಪುದಲೆ ಧರ್ಮ-ಮಂಕುತಿಮ್ಮ ।। 623

  27. Mankutimmana Kagga - 856

    ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ । ಭೂಮಿಭಾರವನಿಳುಸೆ ಸಾಲದಾಗಿರಲು ।। ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? । ಕ್ಷೇಮವೆಂದುಂ ಮೃಗ್ಯ – ಮಂಕುತಿಮ್ಮ ।। 856 ಭೂಮಿಭಾರವನಿಳುಸೆ=ಭೂಮಿ+ಭಾರವನು+ಇಳಿಸೆ, ಸಾಲದಾಗಿರಲು=ಸಾಲದು+ಆಗಿರಲು, ಸಾಮಾನ್ಯರೆನಿತು=ಸಾಮಾನ್ಯರು+ಎನಿತು, ಪೆಣಗಿದೊಡಮೇನಹುದು=ಪೆಣಗಿದೊಡೆಮ್+ಏನು+ಅಹುದು. ಕ್ಷೇಮವೆಂದುಂ=ಕ್ಷೇಮವು+ಎಂದುಂ...

  28. Mankutimmana Kagga - 792

    ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು । ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ।। ಬೇಸರದ ಪಾತಕಸ್ಮೃತಿಯ ಚುಚ್ಚದಿರ್: ಎನ್ನು – । ತೀಶನನು ಬೇಡುತಿರೋ – ಮಂಕುತಿಮ್ಮ || 792

  29. Mankutimmana Kagga - 40

    ನಿಶೆಯೊಳೇ೦ ಕಾಣಬಾರನು ಹಗಲನೊಲ್ಲದೊಡೆ? ಶಶಿರವಿಗಳವನ ಮನೆಕಿಟಕಿಯಾಗಿರರೇ೦? ಮಸುಕುಬೆಳಕೊಂದಾದ ಸಂಜೆಮಂಜೇನವನು ಮಿಸುಕಿ ಸುಳಿಯುವ ಸಮಯ? ಮಂಕುತಿಮ್ಮ|| ನಿಶೆಯೊಳೇ೦= ನಿಶೆಯೊಳು+ ಏಂ, ಹಗಲನೊಲ್ಲದೊಡೆ = ಹಗಲನು ಒಲ್ಲದೊಡೆ, ಮಸುಕುಬೆಳಕೊಂದಾದ = ಮಸುಕು + ಬೆಳಕು+ಒಂದಾದ, ಸಂಜೆಮಂಜೇನವನು = ಸಂಜೆ ಮಂಜೇನು+ ಅವನು ನಿಶೆಯೊಳು= ರಾತ್ರಿಯಲಿ, ಶಶಿರವಿಗಳು= ಸೂರ್ಯ ಚಂದ್ರರು,...

  30. Mankutimmana Kagga - 338

    ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ?। ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ।। ಪೂರ್ವಿಕರು, ಜತೆಯವರು,ಬಂಧುಸಖಶತ್ರುಗಳು। ಸರ್ವರಿಂ ನಿನ್ನ ಗುಣ – ಮಂಕುತಿಮ್ಮ ।। 338

  31. Mankutimmana Kagga - 329

    ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ । ಕಳೆವುದದರಲಿ ನಮ್ಮ ಜನುಮಜನುಮಗಳು ।। ಗೆಲುವಾರ್ಗೋ! ಸೋಲಾರ್ಗೋ! ಲೆಕ್ಕನೋಡುವುದೆಂದೋ ಫಲವು ಬರಿಯಾಟವೆಲೊ – ಮಂಕುತಿಮ್ಮ || 329 ಕೊನೆಯಿಲ್ಲದೀಯಾಟ= ಕೊನೆ+ಇಲ್ಲದ+ ಈ+ಆಟ, ಕಳೆವುದದರಲಿ= ಕಳೆವುದು+ಇದರಲಿ, ಗೆಲುವಾರ್ಗೋ= ಗೆಲುವು+ಯಾರಿಗೋ, ಸೋಲಾರ್ಗೋ=ಸೋಲು+ಯಾರಿಗೋ, ಲೆಕ್ಕನೋಡುವುದೆಂದೋ= ಲೆಕ್ಕ+ನೋಡುವುದು+ಎಂದೋ....

  32. Kagga - 121

    ತನುವೇನು? ಮನವೇನು? ಪರಮಾಣು ಸಂಧಾನ | ಕುಣಿಸುತಿಹುದುಭಯವನು ಮೂರನೆಯದೊಂದು || ತೃಣದ ಹಸುರಿನ ಹುಟ್ಟು ತಾರೆಯಸಕದ ಗುಟ್ಟು | ದಣಿಯದದನರಸು ನೀಂ – ಮಂಕುತಿಮ್ಮ || 121 ಕುಣಿಸುತಿಹುದುಭಯವನು = ಕುಣಿಸುತಿಹುದು + ಉಭಯವನು//ಮೂರನೆಯದೊಂದು = ಮೂರನೆಯದು +ಅದೊಂದು // ತಾರೆಯಸಕದ = ತಾರೆಯ + ಎಸಕದ // ದಣಿಯದದನರಸು = ದಣಿಯದೆ+ ಅದನು+ ಅರಸು ಪರಮಾಣು = ಸೂಕ್ಷ್ಮಾತಿ…

    more
  33. Mankutimmana - 580

    ದೊರೆಯವೇಷವ ಧರಿಸಿ ಮರೆಯುವೆಯ ಮೀಸೆಯನು? । ತಿರುಕಹಾರುವನಾಗಿ ಮೀಸೆ ತಿರಿಚುವೆಯ? ।। ಇರುವುದವನವನಿಗವನವನ ತಾಣದಧರ್ಮ । ಅರಿವೆಋತುಗತಿಯಂತೆ – ಮಂಕುತಿಮ್ಮ ।। 580 ಇರುವುದವನವನಿಗವನವನ=ಇರುವುದು+ಅವನವನಿಗೆ+ಅವನವನ ತಾಣದ=ಸ್ಥಳದ, ಋತುಗತಿ=ಋತು ಬದಲಾವಣೆ, ಧರ್ಮ= ಇರಬೇಕಾದ ರೀತಿ ಮತ್ತು ಮಾಡಬೇಕಾದ ಕರ್ಮ.

  34. Mankutimmana Kagga - 665

    ತನುವ ತಣಿಸುವ ತುತ್ತು ಮನಕೆ ನಂಜಾದೀತು । ಮನಮೋಹ ಜೀವಕ್ಕೆ ಗಾಳವಾದೀತು ।। ಅನುಭವದ ಪರಿಣಾಮವೊಂದರಿಂದೊದಕ್ಕೆ । ಗಣಿಸಾತ್ಮಲಾಭವನು – ಮಂಕುತಿಮ್ಮ ।। 665 ನಂಜಾದೀತು=ನಂಜು+ಆದೀತು ಗಾಳವಾದೀತು=ಗಾಳ +ಆದೀತು, ಪರಿಣಾಮವೊಂದರಿಂದೊಂದಕ್ಕೆ=ಪರಿಣಾಮವು+ಒಂದರಿಂದ+ಒಂದಕ್ಕೆ, ಗಣಿಸಾತ್ಮಲಾಭವನು=ಗಣಿಸು+ಆತ್ಮ+ಲಾಭವನು. ನಂಜು=ವಿಷ, ಮನಮೋಹ=ಮನಸ್ಸಿನ ಮೋಹ, ಗಣಿಸು=ಗಮನಿಸು.

  35. Mankutimmana Kagga - 6

    ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? ಬಗೆದು ಬಿಡಿಸುವರಾರು ಸೋಜಿಗವನಿದನು ? ಜಗವ ನಿರವಿಸಿದ ಕೈಯೊಂದಾದೊಡೇಕಿಂತು ಬಗೆ ಬಗೆಯ ಜೀವಗತಿ ? – ಮಂಕುತಿಮ್ಮ || 6

  36. Mankutimmana Kagga - 340

    ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ । ನೀಂ ಕಾಣ್ಬ ರೂಪಭಾವಂಗಳೊಳಮಿಹವು॥ ತಾಕಿ ನಿನ್ನಾತುಮವ ನಾಕನರಕಂಗಳಂ । ಏಕವೆನಿಪುವುವು ನಿನಗೆ – ಮಂಕುತಿಮ್ಮ.॥ 340

  37. Mankutimmana Kagga - 176-177

    ಇಂಗಿತಜ್ಞಾನವಿಲ್ಲದ ಬಂಧುಪರಿವಾರ ಹಂಗಿಸುವ ಛಲವುಳ್ಳ ಸತಿಪುತ್ರಸಖರು ಬಂಗಾರದಸಿ ಚುಚ್ಚಿ ಸಿಂಗಾರ ಬೊಟ್ಟೆನುವ ಮಂಗಬುದ್ಧಿಯ ಜನರು – ಮಂಕುತಿಮ್ಮ || 17 6 ಬಂಧುವುಂ ಮಿತ್ರನುಂ ಭ್ರುತ್ಯನುಂ ಶತ್ರುವೊಲೆ ದಂಡಧರನೋಲಗಕೆ ನಿನ್ನನೆಳೆವವರೋ ಅಂದದೊಡವೆಯ, ಮೊನೆಗಳಿಂದೆದೆಯನೊತ್ತುವಾ ಮಂದಹಸಿತ ಕೊಲೆಯೊ – ಮಂಕುತಿಮ್ಮ || 177

  38. Mankutimmana Kagga - 891

    ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು । ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ।। ಪುಣ್ಯವೋ,ಪಾಪವೋ,ಅಹಿತವೋ, ಹಿತವೊ ಅದು । ಚೆನ್ನಹುದು ಬೊಮ್ಮನಲಿ – ಮಂಕುತಿಮ್ಮ ।। 891

  39. Mankutimmana Kagga - 135.136

    ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ | ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ || ನಿಶ್ವಸಿತ ಸಂಬಂಧ ನಿನಗಂ ದಿಗಂತಕಂ | ಪುಷ್ಪವಾಗಿರು ನೀನು – ಮಂಕುತಿಮ್ಮ. || 136 ವಿಶ್ವಪರಿಧಿಯದೆಲ್ಲೊ = ವಿಶ್ವದ + ಪರಿಧಿ+ ಅದು + ಎಲ್ಲೊ // ಸೂರ್ಯಚಂದ್ರರಿನಾಚೆ = ಸೂರ್ಯ+ಚಂದ್ರರಿನ+ ಆಚೆ // ನೀನೆಣಿಸಿದೆಡೆಯೆ = ನೀನು + ಎಣಿಸಿದ + ಎಡೆಯೆ, ನಿಶ್ವಸಿತ = ಉಸಿರಾಡುವ…

    more
  40. Mankutimmana Kagga - 71 - 72 - 73

    ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು | ಆವನಾ ಬಂಧುತೆಯ ಜಡೆಯ ಬಿಡಿಸುವನು? || ಜೀವ ಜೀವಕೆ ನಂಟು ಜಡ ಚೇತನಕೆ ನಂಟು | ಆವುದದಕಂಟಿರದು? – ಮಂಕುತಿಮ್ಮ|| 72 ವಿಶ್ವದಲಿ = ಜಗತ್ತಿನಲಿ, ನೋಡಲೆಲ್ಲರೆಲ್ಲರ = ನೋಡಲು+ಎಲ್ಲರ+ಎಲ್ಲರ, ನತು + ಬಾಂಧವ್ಯ, ಆವನಾ = ಯಾರು, ಬಂಧುತೆಯ=ಈಬಂಧನದ, ಆವುದದಕಂಟಿರದು = ಯಾವುದಕ್ಕೆ ಅಂಟಿರದು? ತರಣಿ ಕಿರಣದ ನಂಟು ಗಗನ ಸಲಿಲದ ನಂಟು |...

  41. Mankutimma Kagga - 461 and 462

    ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ। ನಿಲ್ಲದಾಡುತ್ತಿಹವು ಯಂತ್ರ ಕೀಲುಗಳು॥ ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ। ತಲ್ಲಣವು ನಿನಗೇಕೆ? ಮಂಕುತಿಮ್ಮ ॥ 461 ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು । ತೇಲುತ್ತೆ ಭಯವ ಕಾಣದೆ ಸಾಗುತಿರಲು ॥ ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ ॥ ಮೇಲ ಕೀಳಾಗಿಪುದು – ಮಂಕುತಿಮ್ಮ ॥ 462

  42. Mankutimmana Kagga - 735-736

    ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ । ಆಯವದರಿಂ ಭಟನ ಸತ್ವಶಿಕ್ಷಣಕೆ ।। ಸ್ವೀಯ ಸತ್ವವಿಕಾಸ ನಿಜಶಕ್ತಿಯಭ್ಯಾಸ । ಶ್ರೇಯಸಿಗೆ ಸೋಪಾನ – ಮಂಕುತಿಮ್ಮ ।। 735 ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ । ಆಯಸಂ-ಬಡಿಸದ-ವೊಲಂತರಾತ್ಮವನು ।। ಮಾಯೆಯೊಡನಾಡುತ್ತ,ಬೊಮ್ಮನನು ಭಜಿಸುತ್ತ । ಆಯುವನು ಸಾಗಿಸೆಲೋ – ಮಂಕುತಿಮ್ಮ ।। 736

  43. Mankutimmana Kagga - 908 - 909

    ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ । ಜಗದುಣಿಸುಗಳನುಂಡು ಬೆಳೆದವಂ ತಾನೆ ।। ಮಗುಗಳನು ಬೆಳಸುತ್ತ ಮನೆಯನಾಳುವವೋಲು । ಜಗವನಾಳ್ವನು ಜಾಣ – ಮಂಕುತಿಮ್ಮ || 909 ಬೊಂಬೆಗಂದತ್ತು=ಬೊಂಬೆಗೆ+ಅಂದು+ಅತ್ತು, ಜಗದುಣಿಸುಗಳನುಂಡು=ಜಗದ+ಉಣಿಸುಗಳನು+ಉಂಡು, ಮನೆಯನಾಳುವವೋಲು=ಮನೆಯನು+ಆಳುವ+ಓಲು, ಜಗವನಾಳ್ವನು=ಜಗವನು+ಆಳ್ವನು, ಪಿರಿಯರ =ಹಿರಿಯರ, ಉಣಿಸುಗಳನು=ತಿಂಡಿಗಳನು,...

  44. Mankutimmana Kagga - 226

    ಉಸಿರವೊಲನುಕ್ಷಣಂ ಪುರುಶನೊಳವೊಗುತವನ ಪೊಸಬನಂಗೆಯ್ದು ದೈವಿಕಸತ್ವಮವನುಂ ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ ಬೆಸಸುತಿಹುದೇಗಳುಂ – ಮಂಕುತಿಮ್ಮ || 226 ಉಸಿರವೊಲನುಕ್ಷಣಂ = ಉಸಿರ+ಒಲು+ಅನುಕ್ಷಣಂ// ಪುರುಶನೊಳವೊಗುತವನ = ಪುರುಷನ+ಒಳ+ಒಗುತ +ಅವನ // ದೈವಿಕಸತ್ವಮವನುಂ = ದೈವಿಕಸತ್ವವಂ + ಅವನುಂ// ಬೆಸಸುತಿಹುದೇಗಳುಂ = ಬೆಸಸುತಿಹುದು+ ಏಗಳುಂ ಬೆಸಸುತಿಹುದು=...

  45. Mankutimmana Kagga - 255

    ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ | ನೋಟಕನುಮಾಗಿ ತಾಂ ನಲಿದು ನಲಿಯಿಸುವಾ || ಪಾಠವನು ಕಲಿತವನೆ ಬಾಳನಾಳುವ ಯೋಗಿ | ಆಟಕಂ ನಯವುಂಟು – ಮಂಕುತಿಮ್ಮ || 255 ನಾಟಕದೊಳನುವಿಂದ = ನಾಟಕದೊಳು+ಅನುವಿಂದ// ಬೆರೆತದನು = ಬೆರೆತು + ಅದನು// ಮೆಚ್ಚೆನಿಸಿ = ಮೆಚ್ಚು + ಎನಿಸಿ// ನೋಟಕನುಮಾಗಿ = ನೋಟಕನುಂ+ ಆಗಿ

  46. Mankutimmana Kagga - 466

    ವ್ಯಸನಕಾರಣವೊಂದು ಹಸನಕಾರಣವೊಂದು । ರಸಗಳೀಯೆರಡಕಿಂತಾಳವಿನ್ನೊಂದು ।। ಭ್ರುಶವಿಶ್ವಜೀವಿತಗಭೀರತೆಯ ದರ್ಶನದ । ರಸವದದ್ಭುತಮೌನ – ಮಂಕುತಿಮ್ಮ || 466 ರಸಗಳೀಯೆರಡಕಿಂತಾಳವಿನ್ನೊಂದು = ರಸಗಳು+ಈ+ಎರಡಕಿಂತಾ+ಆಳವು+ಇನ್ನೊಂದು, ರಸವದದ್ಭುತಮೌನ = ರಸವು+ಅದು+ಅದ್ಭುತ+ಮೌನ. ಹಸನ=ನಗುವು, ಭ್ರುಶ=ವಿಚಿತ್ರ, ಗಭೀರತೆ=ಗಂಭೀರತೆ,

  47. Mankutimma Kagga - 41

    ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿ ಅದರ ಕೀಲ್ಕುಂಚಿಕೆಯ ಹೊರಕೆಸೆಯೇ ಸಾಕು ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು ಒದವಿಪರು ದಿಟದರಿವ – ಮಂಕುತಿಮ್ಮ? 41 ಕದ – ಬಾಗಿಲು, ಅಗಳಿ = ಚಿಲಕ, ಕೀಲ್ಕುಂಚಿಕೆ = ಬೀಗದ ಕೈ, ಪದವಾಕ್ಯವಿದರು = ಪದ, ವಾಕ್ಯ, ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ = ಚರ್ಚೆ, ಗಡಣೆ = ಆಡಂಬರ, ಒದವಿಪರು=ಸಹಾಯಮಾಡುತ್ತಾರೆ, ದಿಟದರಿವ=...

  48. Mankutimmana Kagga - 388

    ದೇಹಾತುಮಂಗಳೆರಡಂಗಗಳು ಜೀವನಕೆ। ನೇಹದಿಂದೊಂದನೊಂದಾದರಿಸೆ ಲೇಸು ॥ ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ?। ದ್ರೋಹ ಬೇಡೊಂದಕಂ – ಮಂಕುತಿಮ್ಮ || 388

  49. Mankutimmana Kagga - 868

    ಅರೆದಿನದ ನಮ್ಮ ಯತ್ನದಿನದೇನೆನ್ನದಿರು । ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ।। ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? । ಕಿರಿಜಾಜಿ ಸೊಗಕುಡದೆ – ಮಂಕುತಿಮ್ಮ ।। 868 ಯತ್ನದಿನದೇನೆನ್ನದಿರು=ಯತ್ನದಿನ್+ಅದೇನು+ಎನ್ನದೆ+ಇರು, ಕಿರಿದುಮೊಡಗೂಡಿರಲು=ಕಿರಿದುಂ+ಒಡಗೂಡಿ+ಇರಲು, ಸಿರಿಯಹುದು=ಸಿರಿ+ಅಹುದು, ನಿನ್ನೊಡಲ=ನಿನ್ನ+ಒಡಲ,

  50. Mankutimmana Kaggas - done in the last 3 weeks

    This is a tribute of Kagga mAla for DVG on the occasion of his 134th Birth anniversary.

Type above to search every episode's transcript for a word or phrase. Matches are scoped to this podcast.

Searching…

We're indexing this podcast's transcripts for the first time — this can take a minute or two. We'll show results as soon as they're ready.

No matches for "" in this podcast's transcripts.

Showing of matches

No topics indexed yet for this podcast.

Loading reviews...

ABOUT THIS SHOW

Mankutimmana Kagga, written by DV Gundappa, is one of the greatest works in Kannada. It touches on every aspect of life - from living to philosophy to religion to principles.

HOSTED BY

Girish Chandra Ananthanarayana

Frequently Asked Questions

How many episodes does Mankutimmana Kagga have?

Mankutimmana Kagga currently has 77 episodes available on PodParley. New episodes are automatically indexed when they're published to the podcast feed.

What is Mankutimmana Kagga about?

Mankutimmana Kagga, written by DV Gundappa, is one of the greatest works in Kannada. It touches on every aspect of life - from living to philosophy to religion to principles.

How often does Mankutimmana Kagga release new episodes?

Mankutimmana Kagga has 77 episodes. Check the episode list to see recent publication dates and frequency.

Where can I listen to Mankutimmana Kagga?

You can listen to Mankutimmana Kagga on PodParley by clicking any episode. We provide an embedded audio player for direct listening, and you can also subscribe via your preferred podcast app using the RSS feed.

Who hosts Mankutimmana Kagga?

Mankutimmana Kagga is created and hosted by Girish Chandra Ananthanarayana.
URL copied to clipboard!