#47: ಶಾಂತಿ ಕದಡಿದ ಶಾರದೆಯ ನಾಡು episode artwork

EPISODE · Apr 25, 2025 · 10 MIN

#47: ಶಾಂತಿ ಕದಡಿದ ಶಾರದೆಯ ನಾಡು

from SatisHFactionKannada Podcast from the US · host Satish Hosanagara

ಈ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಹತ್ತಿರದಲ್ಲಿನ ಬೈಸರನ್ ಎಂಬ ಪ್ರವಾಸಿ ಸ್ಥಳದಲ್ಲಿ ಮುಸ್ಲಿಮ್ ಭಯೋತ್ವಾದಕರ ಸಂಘಟನೆ ಒಂದು ಆಯೋಜಿತವಾದ ಮತ್ತು ಹೇಯವಾದ ಧಾಳಿಯನ್ನು ನಡೆಸಿ 26 ಮಂದಿ ಹಿಂದೂ ಪ್ರವಾಸಿಗಳನ್ನು ಬಲಿ ತೆಗೆದುಕೊಂಡಿರುವ ವಿಷಯ ವಿಶ್ವದಾದ್ಯಂತ ತಲ್ಲಣವನ್ನು ಮೂಡಿಸಿದೆ.ಎಲ್ಲರಿಗೂ ಗೊತ್ತಾಗಲೀ ಎಂದೇ ನಡೆಸಿದ ಈ ಕ್ರೂರವಾದ ಧಾಳಿಯ ಹಿಂದೆ ಟಿ.ಆರ್.ಎಫ಼್. ಎಂಬ ಗುಂಪು ದುಷ್ಕೃತ್ಯವನ್ನು ಎಸೆಗಿದ್ದಷ್ಟೇ ಅಲ್ಲದೇ ಸಾರಾಸಗಟಾಗಿ ಇದರ ಕೈವಾಡ ತನ್ನದೇ ಎಂದು ಬಹಿರಂಗ ಹೇಳಿಕೆಯನ್ನು ನೀಡಿರುವುದು ಭಾರತ ದೇಶವನ್ನು ಮುಜುಗರಕ್ಕೀಡು ಮಾಡಿದೆ. ಕಳೆದ ಹತ್ತು ವರ್ಷಗಳಿಂದ ನಿಧಾನವಾಗಿ ಸಹಜತೆ (normalcy) ಗೆ ಮರಳುತ್ತಿದ್ದ ಶಾರದೆಯ ನಾಡು, ಇಂದು ಮತ್ತೆ ಅದೇ ಹಿಂದಿನ ಗೊಂದಲವನ್ನು ಎಲ್ಲರಲ್ಲೂ ಮೂಡಿಸಿದೆ. ಈ ನಿಟ್ಟಿನಲ್ಲಿ, ಆ ಆಯೋಜಿತ ಭಯೋತ್ಪಾದಕತೆ ಕೃತ್ಯ, ಜಯಶೀಲವಾಗಿದೆ. ಇನ್ನು ಪ್ರವಾಸಿಗಳಿರಲಿ, ಸ್ಥಳೀಯರೂ ಈ ಸ್ಥಳಗಳಲ್ಲಿ ಮುಕ್ತವಾಗಿ ಓಡಾಡಲು ಅನೇಕ ವರ್ಷಗಳೇ ಹಿಡಿಯುತ್ತದೆ.***ಈ ಸಾವು-ನೋವುಗಳಿಗೆ ಸರಿಯಾದ ಪಾಠ ಕಲಿಸಿ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ದೇಶದಾದ್ಯಂತ ಈ ರೀತಿಯ ಘಟನೆಗಳು ಮರುಕಳಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ತಾವು ಅಲ್ಪಸಂಖ್ಯಾತರು ಎನ್ನುವ ಸೋಗಿನಲ್ಲಿ, ದೇಶದ ಅಭದ್ರತೆಯ ಮೂಲಕಾರಣವಾಗಿ ಯಾರೇ ಇದರ ಸೂತ್ರಧಾರರಿದ್ದರೂ, ಅವರಿಗೆಲ್ಲ ತಕ್ಕ ಉತ್ತರವನ್ನು ಕೊಡುವ ಸಮಯ ಬಂದಿದೆ. ಭಾರತ ದೇಶದ ಸತ್ವವನ್ನು ಪರೀಕ್ಷಿಸುವ ಈ ಸಮಯದಲ್ಲಿ, ಬಲ-ಕುಶಲ-ಸಾಹಸಗಳಿಂದ ಇಂದು ಪೂರ್ಣ ದೇಶವೇ ಈಸಬೇಕು, ಇದ್ದು ಜೈಸಬೇಕು! ಈ ಸಂದರ್ಭದಲ್ಲಿ ಭಾರತ ದೇಶ ಕೈಗೊಳ್ಳುವ ಎಲ್ಲ ನಿಲುವುಗಳನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಸಮರ್ಥಿಸುತ್ತಾರಾದರೂ, ಪ್ರತಿಕ್ರಿಯೆಯ ಹೆಸರಿನಲ್ಲಿ forever ಸಮಯ ಸಿಗೋದಿಲ್ಲ. ಕಬ್ಬಿಣ ಕಾದಿದೆ, ಅದನ್ನು ಜಾಗರೂಕತೆಯಿಂದ ಬಡಿದುಕೊಂಡು ಶಾಂತಿಗೆ ಅನುಕೂಲವಾಗುವ ಆಯುಧವನ್ನು ಮಾಡಿಕೊಂಡಿದ್ದೇ ಆದರೆ, ಶಾರದೆಯ ನೆಲದಲ್ಲಿ, ಮತ್ತೆ ಶಾಂತಿ ಮೂಡಬಹುದು, ಎನ್ನುವ ಆಶಾವಾದ ನಮ್ಮದೆಲ್ಲರದು!

Episode metadata supplied by the publisher feed · Published Apr 25, 2025

Embed this episode

NOW PLAYING

#47: ಶಾಂತಿ ಕದಡಿದ ಶಾರದೆಯ ನಾಡು

0:00 10:39

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SatisHFactionKannada Podcast from the US?

This episode is 10 minutes long.

When was this SatisHFactionKannada Podcast from the US episode published?

This episode was published on April 25, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.
URL copied to clipboard!