PODCAST · society
SatisHFactionKannada Podcast from the US
by Satish Hosanagara
The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community.#NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.
-
93
ಸ್ವದೇಶ - ವಿದೇಶ
ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು.ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ ಸಂಘದ ಸಮಾರಂಭಕ್ಕೆ ಹೋದಾಗಲೆಲ್ಲ, ಅಲ್ಲಿ ಮಾತಿಗೆ ಸಿಗುತ್ತಿದ್ದ ಹಿರಿಯರು, "ನಾವು ಬಂದು ೨೫ ವರ್ಷಗಳ ಮೇಲಾಯ್ತು..." ಎಂದು ಹೇಳಿದಾಗಲೆಲ್ಲ, ನಮಗೆಲ್ಲ ಆಶ್ಚರ್ಯ, ವಿಸ್ಮಯ, ಜೊತೆಗೆ ಒಂದು ರೀತಿಯ ಗೊಂದಲ ಕೂಡ ಆಗ್ತಾ ಇತ್ತು. ನಮ್ಮ ಜನರೇಶನ್ನಿನವರು ಏನಿದ್ರೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದವರು, ಆದ್ದರಿಂದ ಈ ದೇಶದಲ್ಲಿ ನಾವು ನೋಡಿದ ಕಡಿಮೆ ಹಣ ಎಂದರೆ ಮೂರು ಸಾವಿರ ಡಾಲರುಗಳಷ್ಟು. ಇಲ್ಲಿ ವಿದ್ಯಾರ್ಥಿಗಳಾಗಿ, ವ್ಯಾಸಂಗ ಮತ್ತು ಸಂಶೋಧನೆ ಮಾಡಲು ಬಂದವರ ಹಾಗೆ, ನಾವೇನೂ ಗ್ಯಾಸ್ ಸ್ಟೇಶನ್‌ನಲ್ಲಾಗಲೀ, ಅಂಗಡಿಗಳಲ್ಲಾಗಲೀ ಕೆಲಸ ಮಾಡಿ, ವಾರವಿಡೀ ಬ್ರೆಡ್ ತಿಂದು, ಸೂಪ್ ಕುಡಿದು ಮಲಗಿದ್ದ ಅನುಭವವಂತೂ ನಮ್ಮ ಜನರೇಶನ್ನಿನವರಲ್ಲಿ ಆದದ್ದು ಕಡಿಮೆ ಎನ್ನಬೇಕು.ಅದೇ ಸಮಯದಲ್ಲಿ, ಇಂಟರ್‌ನೆಟ್ಟಿನ ಮಹಿಮೆಯಿಂದ, ದೂರದ ಭಾರತ, ನಾವು ತೊರೆದು ಬಂದ ನಾಡು ಹತ್ತಿರವಾಗತೊಡಗಿತು. ಮೊದಲೆಲ್ಲ ದುಬಾರಿಯಾಗಿದ್ದ, ಇಂಟರ್‌ನ್ಯಾಶನಲ್ ಕರೆಗಳು, ಈ ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಒಂದು ನಿಮಿಷಕ್ಕೆ ಒಂದು ಡಾಲರಿನ ರೇಟಿನಿಂದ ಸೊನ್ನೆಗೆ ಇಳಿದು ಬಂದಿದೆ. ಫ಼ೋನ್ ಕರೆಗಳಿಗಿಂತ ಮುಂಚೆ ನನ್ನ ತಲೆಮಾರಿನವರಲ್ಲಿ ಕೆಲವರು, ಭಾರತಕ್ಕೆ ಅಮೇರಿಕದಿಂದ ಪತ್ರಗಳನ್ನು ಬರೆದಿದ್ದೇವೆ. ಊರಿನಲ್ಲಿ ಕೆಲವೇ ಕೆಲವು ಜನರ ಮನೆಗಳಲ್ಲಿ ಫ಼ೋನ್ ಸೌಲಭ್ಯ ಇದ್ದ ಕಾಲದಲ್ಲಿ, ನಮ್ಮ ಹತ್ತಿರದವರಿಗೆ, ಸ್ನೇಹಿತರಿಗೆ ನಾವು ಪತ್ರಗಳನ್ನು ಬರೆಯುತ್ತಿದೆವು, ಈಗೆಲ್ಲ ಸ್ನೇಲ್ ಮೇಲ್ ಅಂತಾರಲ್ಲ, ಅದೇ ಆಗ ನಮಗೆ ದೂರದ ಜನರೊಂದಿಗಿನ ಒಡನಾಟಕ್ಕೆ ಒಂದು ಕೊಂಡಿಯಾಗಿದ್ದಿತು. ತರುವಾಯ, ಅಮೇರಿಕದ ನಮ್ಮ ಮನೆ (ಅಪಾರ್ಟ್‌ಮೆಂಟ್) ಫ಼ೋನಿಗೆ, ಇಂಟರ್‌ನ್ಯಾಶನಲ್ ಕರೆ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಂಡು, ನಂತರ ಕಾಲಿಂಗ್ ಕಾರ್ಡ್‌ನಿಂದ ಭಾರತಕ್ಕೆ ಕರೆ ಮಾಡಿ, ನಂತರ ವಾನೇಜ್ ಮೊದಲಾದ ಐ.ಪಿ. ಫ಼ೋನ್‌ಗಳ ಮುಖೇನ ಅನ್‌ಲಿಮಿಟೆಡ್ ಕರೆಗಳನ್ನು ತಿಂಗಳ ನಿಗದಿತ ಬಿಲ್‌ಗೆ ಮಾಡುವಾಗ ನಾವೆಲ್ಲ ಗೆದ್ದೆವು ಅಂದುಕೊಳ್ಳುತ್ತಿದ್ದ ಕಾಲವದು. ಅದರ ತರುವಾಯ, ಸುಮಾರು ೨೦೧೮ರ ಹೊತ್ತಿಗೆ ವಾಟ್ಸ್ಯಾಪ್ ಹಾವಳಿ ಹೆಚ್ಚಾಗಿ, ನಮ್ಮ ಎಲ್ಲ ಕರೆಗಳೂ ಸಂಪೂರ್ಣ "ಉಚಿತ" ಎನ್ನುವ ಕಾಲ ಬರುವಷ್ಟರ ಹೊತ್ತಿಗೆ ಒಂದು ಮಹತ್ತರ ಬದಲಾವಣೆ ಆಗತೊಡಗಿತು.ನಾವು ದೂರ ಹೋದ ಹಾಗೆಲ್ಲ, ನಮಗೆ ಹತ್ತಿರವಾಗಿದ್ದವರು ದೂರವಾಗ ತೊಡಗಿದರು. ಹಳೆಯ ಬೇರುಗಳು ಕೆಲವು ಕಳಚಿಕೊಂಡು, ಕಣ್ಮರೆಯಾದವು. ಹೊಸ ಚಿಗುರುಗಳು ಹುಟ್ಟಿ ಬೆಳೆದು, ಇಡೀ ಭಾರತವೇ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಅಗಾಧವಾದ ಬೆಳವಣಿಗೆಯನ್ನು ಸಾಧಿಸತೊಡಗಿತು. ಒಂದು ಕಾಲದಲ್ಲಿ ಎಷ್ಟು ಕರೆಮಾಡಿದರೂ ತೀರದಿದ್ದ ದಾಹ, ಮುಂದೆ ಎಷ್ಟು ಬೇಕಾದರೂ ಕರೆ ಮಾಡಬಹುದು ಎನ್ನುವಷ್ಟರಲ್ಲಿ, ಆ ದಾಹವೇ ಇರದ ಹಾಗಾಗಿದ್ದನ್ನು ಸ್ವಯಂ ಅನುಭವಿಸಿದ ತಲೆಮಾರು ನಮ್ಮದು. ಒಂದು ರೀತಿ, ಹಲ್ಲು-ಕಡಲೆಯ ಸಂಬಂಧದ ಹಾಗೆ.***ಪೌರತ್ವ ಅಥವಾ ಸಿಟಿಜ಼ೆನ್‌ಶಿಪ್ ಅನ್ನೋದು, ನನ್ನ ಪ್ರಕಾರ ಒಂದು ಪಾಸ್‌ಪೋರ್ಟ್ ಬದಲಾಯಿಸಿದಷ್ಟು ಸರಳವಾದದ್ದಲ್ಲ. ಅದರ ಹಿಂದೆ, ಕೇವಲ ಪ್ರಾಕ್ಟಿಕಲ್ ಡಿಸಿಷನ್‌ಗಳು ಮಾತ್ರವಲ್ಲದೇ, ಅನೇಕ ಭಾವನಾತ್ಮಕ ಸಂಬಂಧಗಳೂ ಹಲವಿರುತ್ತವೆ. ನಾವು ಅಮೇರಿಕಕ್ಕೆ ಯಾವುದೇ ದಾರುಣ ಸ್ಥಿತಿಯ ಹಿನ್ನೆಲೆಯಿಂದ ಬಂದವರಲ್ಲ - ನಾವು ಸೈದ್ಧಾಂತಿಕವಾಗಿ ಮುನ್ನಲೆಯಲ್ಲಿದ್ದಾಗಲೇ, ಒಂದು ಕರ್ತವ್ಯ ನಿಮಿತ್ತ ಇಲ್ಲಿಗೆ ಬಂದು, ಇಂದೂ ಸಹ ಆ ಕರ್ಮಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಹಾಗಿರುವಾಗ, ಯಾವುದು "ಸ್ವ"ದೇಶ, ಯಾವುದು "ವಿ"ದೇಶ ಎಂದು ಯೋಚಿಸಬೇಕಾದುದು ಗಮನಾರ್ಹ. ಈ ಅಮೇರಿಕದ ಹಿರಿಮೆಯೇ ಅಂತದು - ಇದೊಂದು ಕನಸುಗಾರರ ದೇಶ, ಇಲ್ಲಿ ಅವಕಾಶಗಳು ವಿಪುಲ, ಬೇರೆ ಯಾವುದೇ ದೇಶಕ್ಕೆ ಹೋಲಿಸಿದರೂ ಇಲ್ಲಿ ನ್ಯಾಯ, ನಿಷ್ಠೆ, ಕರ್ತವ್ಯಪರತೆ, ಸ್ವಾಂತಂತ್ರ್ಯ, ಹಾಗೂ ನ್ಯಾಯ ಎಲ್ಲವೂ ಒಂದು ಪಾಲು ಹೆಚ್ಚೇ. ಯಾವುದೇ ಸರ್ಕಾರವಿರಲಿ, ಯಾರೇ ಆಡಳಿತಕ್ಕೆ ಬರಲಿ, ಈ ದೇಶದ ಸಂವಿಧಾನಕ್ಕೆ ಎಲ್ಲರೂ ತಲೆ ತಗ್ಗಿಸಲೇ ಬೇಕು, ಮತ್ತು ಎಲ್ಲರೂ ಸಮಾನರು.ಆದ್ದರಿಂದ, ಅಮೇರಿಕಕ್ಕೆ ಬಂದ ನಮಗೂ ಹಾಗೂ ಉಳಿದ ದೇಶಗಳಿಗೆ ಹೋದ ಅನಿವಾಸಿ ಭಾರತೀಯರಿಗೂ ಬಹಳಷ್ಟು ವ್ಯತ್ಯಾಸವಿದೆ. ಒಂದೇ ಮಾತಿನಲ್ಲಿ ಹೇಳೋದಾದರೆ, ಇದೇ ಸಂಬಳ-ಸವಲತ್ತುಗಳನ್ನು ಬೇರೆ ಯಾವುದೇ ದೇಶದವರು ಅವರ ಪೌರತ್ವದ ಜೊತೆಗೆ ಉಚಿತವಾಗಿ ಕೊಟ್ಟರೂ ನಾವು ಖಂಡಿತ ಅಲ್ಲಿಗೆ ಹೋಗೋದಿಲ್ಲ!ಈಗ ಹೇಳಿ, ಯಾವುದು ಪರಕೀಯ, ಯಾವುದು ವಿದೇಶ - ನಾವು ತೂಗುತ್ತಿರುವ ತಕ್ಕಡಿಯಲ್ಲಿ ನಮ್ಮ ಅಮೇರಿಕನ್ ಮೌಲ್ಯಗಳು, ಇಲ್ಲಿನ ಜನ, ನಾಡು-ನುಡಿ, ಸಂಸ್ಕೃತಿ, ಒಡನಾಟಗಳು ಎಲ್ಲವೂ ನಮ್ಮ ಅವಿಭಾಜ್ಯ ಅಂಗಗಳೇ ಆಗಿರುವಾಗ ಇದೇ "ನಮ್ಮ" ದೇಶವಾಗುತ್ತದೆ.***
-
92
ನಾನೇಕೆ ಓದುತ್ತೇನೆ?
ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ.ಯಾವುದೇ ಒಂದು ಸಮಾಜದಲ್ಲಿ, ನೂರಕ್ಕೆ ಎಷ್ಟು ಜನ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ, ಎಷ್ಟು ಜನ ನಿಜವಾಗಿಯೂ ಬರೆಯುತ್ತಾರೆ, ಎಷ್ಟು ಜನ ಅವುಗಳನ್ನು ಓದುತ್ತಾರೆ ಎಂದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ. ನೂರು ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದರೆ, ಒಂದು ಕಾಲದಲ್ಲಿ ಬರೀ ಪ್ರಿಂಟ್ ಮತ್ತು ರೇಡಿಯೋ ಮಾಧ್ಯಮಕ್ಕೆ ಮೀಸಲಾದ ಜನ ಮತ್ತು ಬರಹಗಾರರು, ನೂರು ವರ್ಷಗಳಲ್ಲಿ ಅದೆಷ್ಟೋ ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿ ಕಂಡುಬರುತ್ತಾರೆ. ಇತ್ತೀಚಿನ ಸೋಶಿಯಲ್ ಮೀಡಿಯಾದಲ್ಲಿ ಮಾನವ ನಿರ್ಮಿತ ಕಂಟೆಂಟ್‌ಗಳನ್ನೂ ಮೀರಿ, ಕೃತಕ ಬುದ್ಧಿಮತ್ತೆಯಿಂದ ತಯಾರಾದ ಕಂಟೆಂಟ್‌ಗಳೂ ಇತ್ತೀಚೆಗೆ ನಮ್ಮ ಸುತ್ತಲೂ ಗಿರಕಿ ಹೊಡೆಯತೊಡಗಿವೆ.ಒಂದಾನೊಂದು ಕಾಲದಲ್ಲಿ ಪ್ರೊಫ಼ೆಷನಲ್ ಬರಹಾರರು, ಆಸ್ಥಾನ ಪಂಡಿತರು ಮೊದಲಾದ ಮಹಾನ್/ಗಣ್ಯ ವ್ಯಕ್ತಿಗಳು ಮಾತ್ರ ಒಂದು ಪುಸ್ತಕವನ್ನು ಹೊರ ತರಲು ಸಾಧ್ಯವಾಗುತ್ತಿತ್ತು. ಒಂದು ಉನ್ನತ ಮಟ್ಟದ ಜರ್ನಲ್‌ನಲ್ಲಿ ಪಬ್ಲಿಷ್ ಮಾಡಲು ಸಾಧ್ಯವಾಗುತ್ತಿತ್ತು. ಆಗೆಲ್ಲ ೧-೩% ಪ್ರತಿಶತ ಜನ ಬರೆಯುತ್ತಿದ್ದರೆ, ಮಿಕ್ಕವರು, ಅದರಲ್ಲೂ ಅಕ್ಷರಸ್ಥರು ಅದನ್ನು ಬಳಸುತ್ತಿದ್ದರು, ತಮ್ಮ ಮನರಂಜನೆ ಅಥವಾ ತಿಳುವಳಿಕೆಯ ದೃಷ್ಟಿಯಿಂದ. ಆಗ ಬರೆಯುತ್ತಿದ್ದವರ ಸಂಖ್ಯೆಗೆ ಈಗಿನ ಬರೆಯುವವರ ಸಂಖ್ಯೆಯನ್ನು ಹೋಲಿಸಿದಾಗ, ಪ್ರೊಫ಼ೆಷನಲ್ ಬರಹಗಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚುಳವನ್ನು ಕಾಣಬಹುದು.ಆದರೆ, ಆಗಿನ ಹಾಗೆ, ಈಗಿನ ಬರಹಗಾರರು, ಕಂಟೆಂಟ್ ಕ್ರಿಯೇಟರುಗಳು, ಪೆನ್ನು, ಪೆನ್ಸಿಲ್ ಬಳಸಿ ಪುಸ್ತಕಗಳಲ್ಲಿ ಬರೆಯಬೇಕು ಎಂದೇನೂ ಇಲ್ಲ. ಹೆಚ್ಚಿನ ಬರಹಗಾರರು, ನನ್ನನ್ನೂ ಸೇರಿ, ಇತ್ತೀಚೆಗೆ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ "ಬರೆಯುವ" ಲೇಖಕರಾಗಿರುವುದು ಇತ್ತೀಚಿನ ವಿಶೇಷ. ಯಾವುದೇ ಕೈಬರಹದ ಮ್ಯಾನುಸ್ಕ್ರಿಪ್ಟನ್ನು ನಾವುಗಳು ನೋಡಿಯೇ ಅದೆಷ್ಟೋ ವರ್ಷಗಳಾಗಿವೆ.ಉದಾಹರಣೆಗೆ ಕನ್ನಡ ಪುಸ್ತಕಗಳ ಪ್ರಕಟಣೆಯ ವಿಚಾರವನ್ನು ಸೂಕ್ಷ್ಮವಾಗಿ ನೋಡಿದಾಗ, ಈ ಎರಡು ಅಂಶಗಳನ್ನು ಗಮನಿಸಬಹುದು:- ಕಳೆದ ನೂರು ವರ್ಷಗಳಲ್ಲಿ, ಕನ್ನಡದ ೫೦ ಪ್ರತಿಶತ ಟೈಟಲ್‌ಗಳನ್ನು ಪಬ್ಲಿಕ್ ಲೈಬ್ರರಿಗಳಿಗೋಸ್ಕರ ಪ್ರಕಟಿಸಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ, ಲೇಖಕರು ನೇರವಾಗಿ ತಮ್ಮ ಓದುಗರನ್ನು ತಲುಪುವುದನ್ನು ನೋಡಬಹುದು.- ಕನ್ನಡದಲ್ಲಿ ಎಲೆಕ್ಟ್ರಾನಿಕ್ ಪುಸ್ತಕ ಮಾಧ್ಯಮ (ಇ-ರೀಡರ್ಸ್) ಅಷ್ಟೊಂದಾಗಿ ಬೆಳೆಯದಿದ್ದರೂ, ಪ್ರತಿಲಿಪಿಯಂತಹ ಪ್ಲಾಟ್‌ಫ಼ಾರ್ಮ್ ಮುಖೇನ ಕಳೆದ ೬ ವರ್ಷಗಳಲ್ಲಿ, ಪಿಡಿಎಫ಼್ ಹಂಚಿಕೊಳ್ಳುವಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.- ದಕ್ಷಿಣ ಭಾರತದಲ್ಲಿ ಖರ್ಚಾಗುವ ಪುಸ್ತಕಗಳಲ್ಲಿ, ಕನ್ನಡ ಪುಸ್ತಕಗಳ ಮಾರುಕಟ್ಟೆ ಸುಮಾರು ೨೫ ಪ್ರತಿಶತ ಇದೆ (ರಾಷ್ಟ್ರಮಟ್ಟದಲ್ಲಿ ಹಿಂದಿಯ ಪುಸ್ತಕಗಳ ಪಾಲು, ಸುಮಾರು ೩೫ ಪ್ರತಿಶತ ಮಾತ್ರ)- ೨೦೨೬ರಲ್ಲಿ, ಈ ಲೇಖನ ಬರೆಯುವ ಹೊತ್ತಿಗೆ, ಸುಮಾರು ೧೨೦-೧೫೦ ಪುಸ್ತಕಗಳು, ಪ್ರತೀವಾರ ಬಿಡುಗಡೆಗೊಳ್ಳುತ್ತವೆ (ಅನೇಕ ಫ಼ಾರ್ಮ್ಯಾಟುಗಳಲ್ಲಿ)ಇಷ್ಟೆಲ್ಲ ಪುಸ್ತಕಗಳು ಹೊರಬರುತ್ತಿರುವಾಗ, ನಾವೇಕೆ ಓದುತ್ತೇವೆ ಎಂದು ಕೇಳಿಕೊಳ್ಳುವುದು ಹಾಸ್ಯಾಸ್ಪದವಾಗಿ ಕಂಡುಬರಬಹುದು. ಅದರಲ್ಲೂ, ನಮಗೆ ಬೇಕಾದ ಮಾಹಿತಿ ಎಲ್ಲ ಇಂಗ್ಲೀಷ್ ಮಾಧ್ಯಮದಲ್ಲೇ ಸಿಕ್ಕುತ್ತಿರುವುದಾದರೆ, ನಾವು ಕನ್ನಡ ಪುಸ್ತಕಗಳನ್ನು ಏಕೆ ಓದಬೇಕು? ವರ್ಷಕ್ಕೆ ೭೨೦೦ ಪುಸ್ತಕದಂತೆ ಬಿಡುಗಡೆಯಾಗಿ, ಅಂದರೆ ದಿನಕ್ಕೆ ಸುಮಾರು ೨೦ ಪುಸ್ತಕಗಳ ಬಿಡುಗಡೆಯಾಗುತ್ತಿರುವಾಗ ಅವುಗಳನ್ನು ಕೊಳ್ಳುವವರು ಯಾರು? ಓದುವವರು ಯಾರು?ನನ್ನ ಪ್ರಕಾರ, ನಾವು ಆಯಾ ವಿಷಯಗಳಿಗೆ ತಕ್ಕಂತೆ, ಆಯಾ ಭಾಷೆಯಲ್ಲಿ ಪುಸ್ತಕವನ್ನು ಓದುವುದು ಸರಿ ಎನಿಸುತ್ತದೆ. ಉದಾಹರಣೆಗೆ, ಆಫ಼ೀಸಿಗೆ ಸಂಬಂಧಿಸಿದ ಲೇವಾದೇವಿ, ಕೆಲಸ ಕಾರ್ಯಗಳನ್ನು ನಾವು ಕನ್ನಡದಲ್ಲಿ ಹೇಗೆ ಊಹಿಸಿಕೊಳ್ಳಲಾರೆವೋ, ಹಾಗೆಯೇ, ನಮ್ಮೂರಿನಲ್ಲಿ ಗಡಚಿಕ್ಕುವಂತೆ ಮಳೆ ಹೊಯ್ಯುವ ಶಬ್ದ, ತದನಂತರ ಮಣ್ಣಿನಿಂದ ಹೊರಬರುವ ಹಿತವಾದ ಪರಿಮಳ ಇವುಗಳನ್ನೂ ಕೂಡ ನಾನು ಇಂಗ್ಲೀಷಿನಲ್ಲಿ ಊಹಿಸಿಕೊಳ್ಳಲಾರೆ.ನಾನು ಕನ್ನಡದಲ್ಲಿ ಕತೆಗಳನ್ನೋ, ಕಾದಂಬರಿಗಳನ್ನೋ ಓದಿ, ಆಯಾ ಪಾತ್ರಗಳು ಮತ್ತು ಅವುಗಳ ಹಿನ್ನೆಲೆಯಲ ಮಿಳಿತಗೊಂಡು, ಆಯಾ ಪಾತ್ರಗಳ ಸಮಸ್ಯೆ, ಸಂವೇದನೆಗಳು ನಮ್ಮವೇ ಎಂದು ಯೋಚಿಸಿಕೊಳ್ಳುತ್ತೇವಲ್ಲ, ಆ ಭಾಗ್ಯ, ಇಂಗ್ಲೀಷಿನಲ್ಲಿ ಪಾತ್ರಗಳನ್ನು ಅಭ್ಯಾಸ ಮಾಡಿದಾಗ ನಮ್ಮ ಚರ್ಮದ ಕೆಳಗೇ ಇಳಿಯದು ಎನ್ನುವಂತಾಗುತ್ತದೆ. ಬೇಕಾದರೆ, ನೀವು, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕೃತಿಯ ಮೊದಲ ಅಧ್ಯಾಯವನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬೇರೆ ಬೇರೆಯಾಗಿ ಓದಿ ನೋಡಿ. ನಾಯಿ-ಗುತ್ತಿ, ಗುತ್ತಿ-ನಾಯಿ ನಿಮಗೆ ಯಾವ ರೀತಿಯ ಮೋಡಿಯನ್ನು ಮಾಡಬಲ್ಲರು ಎಂದು.ನಾನು ಏಕೆ ಕನ್ನಡ ಪುಸ್ತಕಗಳನ್ನು ಓದುತ್ತೇನೆಂದರೆ, ಅದರ ಮುಖೇನ, ನಾನು ಅಲ್ಲಿನ ಮಾನವೀಯ ಮೌಲ್ಯ, ಭಾವನೆಗಳ ನಡುವೆ ಒಂದು ಸಂಪರ್ಕಸಾಧಿಸಿಕೊಂಡು, ಅವುಗಳನ್ನು ಅರ್ಥ ಮಾಡಿಕೊಂಡು, ಆಯಾ ಪಾತ್ರಗಳು ನಮ್ಮ ಸ್ನೇಹಿತರೋ, ಬಂಧು-ಮಿತ್ರರೋ ಎಂದು ಯೋಚಿಸುವಂತೆ ಮಾಡುತ್ತವಲ್ಲ? ಆ ಸಮಯವನ್ನು ನಾವು ವ್ಯಯಿಸುವ ಮಟ್ಟಿಗೆ ಅದೊಂದು ಧ್ಯಾನವೇ ಎಂದು ನನ್ನ ನಂಬಿಕೆ. ಜೊತೆಗೆ, ಆಯಾ ಲೇಖಕರ ಸಾಮರ್ಥ್ಯಕ್ಕೆ ತಕ್ಕೆಂತೆ ಅವರ ಉಪಮೆ, ರೂಪಕ, ಉತ್ಪ್ರೇಕ್ಷೆಗಳನ್ನೆಲ್ಲ ಅನುಭವಿಸಿ, ಅವುಗಳನ್ನು ನಮ್ಮ ಮನದಲ್ಲಿ ಪುನರ್‌ಸೃಷ್ಟಿಸಿಕೊಂಡು ಚಪ್ಪರಿಸುತ್ತೇವೆಲ್ಲ, ಅದಕ್ಕಿಂತ ಮಿಗಿಲಾದ ಸಂತೋಷ ಓದುವುದನ್ನು ಬಿಟ್ಟು ಎಲ್ಲಿದೆ ಹೇಳಿ? ಕೊನೆಯದಾಗಿ, ನಾವು ನಮ್ಮೂರಿನ ನೆರೆ-ಹೊರೆ, ಭಾಷೆ-ಬಂಧು, ನೆಂಟರು-ಇಷ್ಟರು ಇವರನ್ನೆಲ್ಲ ಕಳೆದುಕೊಂಡು ದೂರ ಬಂದಿದ್ದೇವೆಲ್ಲ, ನಮಗೆ ಈ ಕನ್ನಡ ಕೃತಿಗಳಲ್ಲದೇ ಮತ್ತಿನ್ಯಾರು ತಾನೆ ಆ ಪರಿಸರವನ್ನು ನಮಗೆ ಕಟ್ಟಿಕೊಡಬಲ್ಲರು?
-
91
AI Agents are here! Now What?!
AI Agents are here! Now What?!ಆರ್ಟಿಫ಼ಿಷಿಯಲ್ ಇನ್ಟೆಲಿಜೆನ್ಸ್ ಬಂದ್ರೆ, ನಮ್ ಕಥೆ ಏನು?ಈ ಕೃತಕ ಬುದ್ಧಿಮತ್ತೆಯ ಏಜೆಂಟುಗಳಿಂದ ಮುಂದೆ ನಮಗೆಲ್ಲ ಏನೇನು ಕಾದಿದೆ ಎಂದು ಊಹಿಸಿಕೊಳ್ಳುವ ಚಿತ್ರಣ.
-
90
ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ!
ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ!ನನ್ನ ಸಹೋದ್ಯೋಗಿ, ಸ್ನೇಹಿತ ಮತ್ತು ಕನ್ನಡಿಗ ಪ್ರವೀಣ್ ವೆಂಕಟರಾಮು ಅವರ ಜೊತೆ ಒಂದು ಸಂಭಾಷಣೆ.ಅವರು ೨೦೨೫ರ ಬೇಸಿಗೆಯಲ್ಲಿ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಬಂದವರು. ಈ ಎಪಿಸೋಡ್‌ನಲ್ಲಿ, ಅವರ ಪರಿಕ್ರಮದ ತಯಾರಿ, ಅವರು ತಮ್ಮ ಗುರಿ ಸಾಧನೆಯಲ್ಲಿ ಅನುಭವಿಸಿದ ರೋಚಕತೆಯನ್ನ ಈ ಮೂಲಕ ಕೇಳೋಣ.ಸ್ಯಾಟಿಸ್‌ಫ಼್ಯಾಕ್ಷನ್, ಸೀಜ಼ನ್ ೨, ಎಪಿಸೋಡ್ ೧
-
89
Season 1 Final Episode (88)
Season 1 Final Episode (88)ಸ್ಯಾಟಿಸ್‌ಫ಼್ಯಾಕ್ಷನ್‌ನಿಂದ ನಾನು ಕಲಿತ ಪಾಠ!ಯಾವುದೋ ಒಂದು ಕಾಲದಲ್ಲಿ ಶುರು ಮಾಡಬೇಕಾಗಿದ್ದ ಪಾಡ್‌ಕ್ಯಾಸ್ಟ್ ಅನ್ನು ನಾನು ಶುರು ಮಾಡಿದ್ದು, 2025 ರ ಜನವರಿಯಲ್ಲಿ.ಈ ಪಾಡ್‌ಕ್ಯಾಸ್ಟ್ ಅಂದ್ರೆ ಅದು ಒಂದು ಥರದ expression ಅಷ್ಟೇನೆ.ನಮ್ಮ ನಮ್ಮ ಸಂತೋಷವನ್ನು ಅರಿಸಿ ಹೇಗೆ ನಾವು content ಹುಡುಕಿಕೊಂಡು ಹೋಗ್ತೀವಲ್ಲ. ಹಾಗೇ! ಇದೂ ಕೂಡ ನಮ್ಮ ನಮ್ಮ ದೈನಂದಿನ ಅಗತ್ಯಗಳಲ್ಲಿ ಒಂದು ಅನ್ನಬೇಕು ಅಷ್ಟೇ.Total episodes 88.Ordent fans (listeners) about 25-30Most of the audience are from USA and India, listeners from Canada, Brazil and UK are about 2%.but I do thank the people from 26 other countries, who are around 1% of the audience.Burkina Faso is a landlocked country in West AfricaTop lessons learnedBehind the scenes (episode satisfaction & success)Top episodesCommunity responseSeason 2 teaser: We will graduate from monologue to a dialogue with stalwarts like Praveen Venkatramu, Hareesh Kadalabalu, Simhadri Santebennur, Archana Acharya, Kannada Shaale Teachers, and others from a Karnataka background.Total audience from 28 countries.75% USA15% India~2% from Canada, Brazil, UK~1% from 24 other countries
-
88
Getting used to AI Agents!
Getting used to AI Agents!ಇದ್ದಕ್ಕಿದ್ದ ಹಾಗೆ ನಮ್ಮ ಮನೆ ಮಾರ್ಗೇಜ್ ಕಂಪನಿಯವರಿಂದ ಒಂದು ಇ-ಮೇಲ್ ಬಂತು.ಅದರಲ್ಲಿ, ಈಗ ನೀವು home insurance ಕೊಡ್ತಾ ಇರೋದು ಬಹಳ ಹೆಚ್ಚಿದೆ. ನಾವು ಒಬ್ಬ ಪಾರ್ಟ್‌ನರ್ ಜೊತೆಗೆ ಸೇರಿ ಅದನ್ನ ಕಡಿಮೆ ಮಾಡಿಸ್ತಾ ಇದ್ದೇವೆ. ಇಲ್ಲಿ ಕ್ಲಿಕ್ ಮಾಡಿ ಅಂತ ಇತ್ತು.ಸ್ಪಾಮ್ ಅಲ್ಲ, ಫ಼ಿಶಿಂಗ್ ಅಲ್ಲ ಅಂತ ಕನ್‌ಫ಼ರ್ಮ್ ಮಾಡ್ಕೊಂಡು ನೋಡಿದ್ರೆ. ವೆರಿಫ಼ಿಕೇಶನ್‌ಗೆ ನಿಮ್ಮ ಫ಼ೋನ್ ನಂಬರ್ ಕೊಡಿ... ಅಂತ ಒಂದು ಗಾಳ ಇಟ್ಟಿದ್ದ್ರು.ಆಗ ನನಗೆ ಅನ್ನಿಸ್ತು, ಇದು ಎಲ್ಲಿಗೆ ಹೋಗ್ತಾ ಇದೆ ಅಂತ.ಆದದ್ದಾಗಲಿ, ಫ಼ೋನ್ ನಂಬರ್ ಹಾಕಿ ನೋಡೋಣ ಅಂದುಕೊಂಡ್ರೆ, ಅಲ್ಲಿ ಆಗಿದ್ದೇ ಬೇರೆ....
-
87
ಎಷ್ಟು ದುಡ್ಡು ಇದ್ರೆ ಒಳ್ಳೇದು? (86)
ಎಷ್ಟು ದುಡ್ಡು ಇದ್ರೆ ಒಳ್ಳೇದು?ಈಗೆಲ್ಲ ಅಮೇರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಕಾಸ್ಟ್ ಕಟ್ಟಿಂಗ್ ಅನ್ನೋ ಹೆಸರಿನಲ್ಲಿ ಸಾವಿರಾರು ಜನರನ್ನು ಮನೆಗೆ ಕಳಿಸೋದನ್ನ ನೋಡಿದ್ರೆ, ಅಮೇರಿಕದ ಎಂಪ್ಲಾಯ್‌ಮೆಂಟ್ ಸಿಚುವೇಶನ್ ಬದಲಾಗುತ್ತೋ ಇಲ್ಲವೋ ಅನ್ನೋ ಸಂಶಯ ಬರುತ್ತೆ.ನಮ್ಮ ಕಂಪನಿ ಒಂದರಲ್ಲೇ ಸುಮಾರು 13 ಸಾವಿರ ಜನರು ಒಂದೇ ಕಳೆದುಕೊಳ್ಳಬೇಕಾಗಿ ಬಂದಾಗ ಅವರನ್ನೆಲ್ಲ ನೆನೆದು ಒಂದು ಸರತಿ ಕರುಳು ಚುರುಕು ಅಂತು. ಮತ್ತೆ ಮರುಕ್ಷಣ, ಇದೆಲ್ಲ ಕ್ಯಾಪಿಟಲಿಸಮ್ಮಿನ ಲೀಲೆ. ಇಲ್ಲಿ ಯಾರೂ ಯಾವತ್ತೂ ಶಾಶ್ವತರಲ್ಲ, ಯಾರು indispensible ಅಲ್ಲ, ಅನ್ನೋ ಮಾತು ಕೂಡಾ ನೆನಪಿಗೆ ಬಂತು. ಕೆಲಸ ಕಳೆದುಕೊಂಡವರಿಗೆ, ಆಯಾ ಕಂಪನಿಗಳಲ್ಲಿ, ಅವರವರ ಸರ್ವೀಸಿಗೆ ಸಂಬಂಧ ಪಟ್ಟಂತೆ ಒಂದಿಷ್ಟು severence ಬರುತ್ತೆ. ಆದ್ರೆ, ಎಲ್ಲ ಕಂಪನಿಗಳಲ್ಲೂ ಹಾಗೇ ಬರುತ್ತೆ ಅಂತ ಹೇಳೋಕಾಗಲ್ಲ. ನನಗೆ ಗೊತ್ತಿರೋ ಹಾಗೆ, ಕೆಲವು ಕಂಪನಿಗಳಲ್ಲಿ, ಅದೆಷ್ಟೇ ವರ್ಷ ದುಡಿದ್ರೂ, ಒಂದು ತಿಂಗಳ ಸಂಬಳ ಕೊಟ್ಟು ಕೆಲಸಗಾರರನ್ನು ಮನೆಗೆ ಕಳಿಸಿರೋ ನಿದರ್ಶನಗಳೂ ಇವೆ. ಇನ್ನು ಕೆಲವು ಸಂದರ್ಭಗಳಲ್ಲಿ, ಕಂಪನಿಗಳೇನಾದರೂ ಬ್ಯಾಂಕ್ರಪ್ಟ್ ಆದ್ರೆ, ಇರೋ ಸಂಬಳವನ್ನುಕೊಡದೇ ಇರುವ ಸಾಧ್ಯತೆ ಇದೆ. ಹೀಗೆ, ಕ್ಯಾಪಿಟಲಿಸಮ್ಮಿನ ಕೆಲಸ ಅಂದ್ರೆ, ನೀರಿನ ಮೇಲಿನ ಗುಳ್ಳೆಯ ಹಾಗೆ. ಇದ್ದಾಗ ಮಾಡು, ಇಲ್ಲದಾಗ ಮಡಿ ಅನ್ನುವ ಒಂದು ಮಾತಿನಿಂದ ಇಲ್ಲಿಯ ಸ್ಥಿತಿಗತಿಯನ್ನು ಹೇಳಿಬಿಡಬಹುದು.***ಆದರೆ, ಇವತ್ತಿನ ಟಾಪಿಕ್ಕು, ಕೆಲಸದ ಬಗ್ಗೆ ಅಲ್ಲ. ಹೀಗೆ ಕೆಲಸ ಮಾಡಿ ಜನರು ಈ ಕ್ಯಾಪಿಟಲಿಸಮ್ಮಿನ ಪ್ರಪಂಚದಲ್ಲಿ ತಮ್ಮ ವೆಲ್ತ್ ಅನ್ನು ಒಟ್ಟುಗೂಡಿಸಿಕೊಳ್ಳುತ್ತಾರಲ್ಲ. ಅವರನ್ನ ನೋಡಿ ಒಮ್ಮೆ ಆಶ್ಚರ್ಯ ಆಯಿತು. ಒಂದು ಕಡೆ, ಘಂಟೆಗೆ 18 ಡಾಲರ್ ಗೆ ದುಡಿಯುವ ದುಡಿಮೆ, ಮತ್ತೊಂದು ಕಡೆ, ತಿಂಗಳಿಗೆ ಮಿಲಿಯನ್ ಗಟ್ಟಲೆ ದುಡಿಯುವ ಮಹನೀಯರೂ ಸಿಗುತ್ತಾರೆ. ಹೀಗೆ, ಕ್ಯಾಪಿಟಲಿಸಮ್ಮಿನ ಮತ್ತೊಂದು ಮುಖ ಅಂದ್ರೆ ಡಿವಿಜನ್.
-
86
ಕೆಲಸ: ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತ
ಕೆಲಸ ಎಂಬ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಭೂತನಮ್ಮ ಮನೆ ಹತ್ರ ಇರೋ ಒಬ್ಬ ಕಾರ್ ಮೆಕ್ಯಾನಿಕ್ ಹತ್ರ ಮಾತಾಡ್ತಾ ಇದ್ದೆ. ಪರಿಚಯ ಮಾಡಿಕೊಳ್ಳುತ್ತಾ ನೀನು ಎಲ್ಲಿ ಕೆಲ್ಸ ಮಾಡ್ತೀಯಾ, ಹೇಗೆ ಅಂತ ಕೇಳಿದ.ಅದಕ್ಕೆ ನಾನು ಟೆಕ್ನಾಲಜಿಯಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಕೆಲ್ಸ ಮಾಡ್ತೀನಿ ಅಂತ ಅಂದ್ರೆ.ಅವನು, ಇತ್ತೀಚೆಗೆ ಮಾಸ್ ಲೇ ಆಫ಼್ ಆಗಿರೋ ನ್ಯೂಸ್ ಅನ್ನು ಕೋಟ್ ಮಾಡಿ, ಅದು ಹೇಗೆ ಕೆಲ್ಸ ಮಾಡ್ತೀರೋ? ಅಂತ ಆಶ್ಚರ್ಯ ವ್ಯಕ್ತ ಪಡಿಸಿದ.ನನಗೆ ಆಗಲೇ ಅನ್ನಿಸಿದ್ದು, ಹೌದು, ನಮ್ಮ ಕೆಲಸ ಇದೆ/ಇಲ್ಲ ಎನ್ನುವ ಯಾವ ಗ್ಯಾರಂಟಿ ಅಂತೂ ಇಲ್ಲ.
-
85
ನಮ್ಮ (ನಮ್ಮ) ಭಾಷೆ ನಮ್ಮದು! (86)
Global Language LandscapeTotal living languages: 7,164 (Ethnologue, 2025)Languages with writing systems: 3,661 — These are considered “full-fledged” for reading, writing, and speaking.Languages without writing systems: 719 — These are oral languages used only in speech.Uncertain writing status: 2,586 — These may be partially documented or used in limited literacy contexts.This diversity reflects not just linguistic complexity but also cultural, geographic, and historical factors.Philosophical ReflectionLanguage isn’t just a tool—it’s a mirror of human consciousness. The multiplicity of languages reflects:Our need to connect, express, and belongOur creativity, inventiveness, and adaptabilityOur history, migrations, and cultural evolutionSome scholars even argue that language emerged as a social transformation, unlocking trust and symbolic thought that had previously been dormant.
-
84
ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ (Innovation)
ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿಕಳೆದ ತಿಂಗಳು (ಸೆಪ್ಟೆಂಬರ್ 19) ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದರು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿನಿಯರುಗಳನ್ನು ಹುಟ್ಟು ಹಾಕುವುದೇ ಹೌದಾದರೆ, ಆ ದೇಶದಲ್ಲಿ ಅಷ್ಟೊಂದು ಇನ್ನೋವೇಷನ್ ಏಕೆ ಇನ್ನೂ ಹುಟ್ಟೋದಿಲ್ಲ ಎನ್ನೋ ರೀತಿಯಲ್ಲಿ ಅನಿಸಿಕೆ ಬರೆದಿದ್ದರು. ನಮ್ಮಲ್ಲಿ ಉತ್ಪಾದನೆಗೊಳ್ಳುವ ಗ್ರಾಜುಯೇಟುಗಳು, ಇಂಜಿನಿಯರುಗಳನ್ನು ನಾವು ಸಮರ್ಪಕವಾಗಿ ಬಳಸುತ್ತಿದ್ದೇವೆಯೇ? ಇನ್ನೋವೇಶನ್ ಅನ್ನೋ ವಿಚಾರಕ್ಕೆ ಬಂದರೆ, ಪ್ರಪಂಚದ ಎಲ್ಲ ದೇಶಗಳಿಗೆ ಕಂಪೇರ್ ಮಾಡಿದರೆ ಭಾರತ ಎಷ್ಟನೇ ಸ್ಥಾನದಲ್ಲಿ ನಿಲ್ಲುತ್ತದೆ.ಇನ್ನೋವೇನ್ ಅನ್ನೋದು ಒಂದು ರೀತಿಯ ಹೊಸ ಕಲ್ಪನೆ, ನಾವೀನ್ಯತೆ, ಹೊಸ ಬದಲಾವಣೆ ಇದ್ದ ಹಾಗೆ. ನಾವುಗಳು ನಮ್ಮ ದೈನಂದಿನ ಜೀವನದಲ್ಲಿ status quo ಅನ್ನು ಎಷ್ಟರ ಮಟ್ಟಿಗೆ ಪ್ರಶ್ನಿಸುತ್ತೇವೆ ಎನ್ನುವಲ್ಲಿಯಿಂದ ಈ ಹೊಸ ಶೋಧ ಆರಂಭವಾಗುತ್ತದೆ.ಹಾಗಾದರೆ, ಬರೀ ಹೀಗೆ ಮಾಡು ಎಂದು ಹೇಳಿಕೊಟ್ಟ ಚೋರ್‌ಗಳನ್ನು ಮಾಡೋದರಲ್ಲಿ ಮಾತ್ರ ನಾವು ನಿಸ್ಸೀಮರೇ?ಒಂದು ಅಧ್ಯಯನದ ಪ್ರಕಾರ, ಜಗತ್ತಿನ ಅತಿ ಇನ್ನೋವೇಟಿವ್ ದೇಶಗಳಲ್ಲಿ ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಯುಎಸ್.ಎ. ಸೌತ್ ಕೊರಿಯಾ, ಸಿಂಗಪೂರ್, ಯುಕೆ, ಫ಼ಿನ್‌ಲ್ಯಾಂಡ್, ನೆದರ್‌ಲ್ಯಾಂಡ್, ಡೆನ್ಮಾರ್ಕ್ ಹಾಗೂ ಇತ್ತೀಚೆಗೆ ಚೈನಾ ದೇಶದ ಹೆಸರೂ ಕೇಳಿಬರುತ್ತದೆ.ತಮ್ಮ ತಮ್ಮ ಆಂತರಿಕ ಸ್ಟ್ರಗಲ್‌ಗಳು ಎಷ್ಟೇ ಇರಲಿ, ಈ ದೇಶಗಳಿಗೆ ಯಾವಾಗಲಾದರೂ ಸ್ವಾತಂತ್ರ್ಯ ಬಂದಿದ್ದಿರಲಿ, ಇವುಗಳೆಲ್ಲವೂ ತಮ್ಮ ತಮ್ಮ ನೆಲೆಯಲ್ಲಿ, ಹೊಸದೊಂದನ್ನು ಹುಡುಕಿಕೊಂಡು, ಅದರಲ್ಲಿ ಯಶಸ್ವಿಗೊಂಡವು. ಚೈನಾದಂತಹ ದೇಶದಲ್ಲಿ, ಸರ್ಕಾರವೇ ಈ ಬಗೆಗೆ ಪ್ರಾಶಸ್ತ್ಯ ಕೊಟ್ಟಿರಲೂ ಬಹುದು. ಹೊರಗಿನಿಂದ ನಾವು ಟೆಕ್ನಾಲಜಿಗಳನ್ನು ಆಮದು ಮಾಡಿಕೊಳ್ಳೋದಿಲ್ಲ, ಎನ್ನುವ ಒಂದೇ ಒಂದು ಮೂಲಮಂತ್ರ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಬಹುದು.ಆದರೆ, ಭಾರತದಲ್ಲಿ, ನಾವು ಬೆಳೆದು ಬಂದ ಬಗೆಯನ್ನು ಗಮನಿಸಿದರೆ, ನಮ್ಮನ್ನೆಲ್ಲ ಸೈಕಾಲಜಿ ಮಟ್ಟದಲ್ಲಿ, ಮತ್ತು ಸೈದ್ಧಾಂತಿಕವಾಗಿ ಸದಾ ಹೆದರಿಸಿ ಇಡಲಾಗುತ್ತಿತ್ತು. ಈ ಹೆದರಿಕೆಯಲ್ಲಿ ಕೆಲವೊಮ್ಮೆ ನಾವು ನಿಜ ಹೇಳುವುದಕ್ಕೂ ಹಿಂಜರಿಯುತ್ತಿದ್ದೆವು.ನಿಮಗನ್ಸತ್ತಾ?The environment that we grew up with accommodated questioning?Did we even think about innovation at that time?Or, do we challenge the status quo now?I agree, fear is necessary, but it should not become a bottleneck limiting one's creativity.
-
83
ನಮ್ಮ ದೀಪಾವಳಿಯ ಆಚರಣೆ (84)
ನಮ್ಮ ದೀಪಾವಳಿಯ ಆಚರಣೆಒಂದು ಕಾಲದಲ್ಲಿ ನರಕಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು, ಚುಮು ಚುಮು ಚಳಿಯಲ್ಲೇ ಕಾಸಿದ ಎಣ್ಣೆಯ ಲೇಪನದ ನಂತರ ಅಭ್ಯಂಜನ ಸ್ನಾನ ಮಾಡಿ, ನಂತರ ಆಟೋಟಗಳಲ್ಲಿ ಮೊದಲಾಗುತ್ತಿದ್ದ ದಿನಗಳು ಈಗಂತೂ ಇಲ್ಲ.ಆಗೆಲ್ಲ ಚಳಿಗೆ ಬೈದುಕೊಂಡಿದ್ದರ ದೆಸೆಯಿಂದಲೋ ಏನೋ ಇಂದು ಚಳಿದೇಶದಲ್ಲಿ ಬಂದು ನೆಲೆಸುವಂತಾಗಿದೆ.ಎಂತಹ ಗಮ್ಮತ್ತು ಇರ್ತಾ ಇತ್ತು ಆಗೆಲ್ಲ?ದೀಪಾವಳಿ ದಿನಗಳಲ್ಲಿ ಪುಂಡಿ ಕೋಲಿನ ಆಟ ಆಡ್ತಿದ್ವಿ.ಬೂರೆ ಕದಿಯೋದಕ್ಕೆ ಹೋಗ್ತಿದ್ವಿ.ಗೂಪೂಜೆ ಮಾಡುವುದರ ಜೊತೆಗೆ ದನಬೆದರಿಸೋ ಆಟಗಳನ್ನು ದೂರದಿಂದ ಕುತೂಹಲ ಮತ್ತು ಜಾಗರೂಕತೆಯೊಂದಿಗೆ ನೋಡ್ತಾ ಇದ್ವಿ.ಲಕ್ಷ್ಮೀ ಪೂಜೆ ದಿನ ಅಂಗಡಿ, ಮಿಲ್ಲು, ಮತ್ತೊಂದು ಅಂತ ಹೋದಲ್ಲೆಲ್ಲ ಸ್ವೀಟ್ಸ್, ಮಂಡಕ್ಕಿ, ಹಣ್ಣು ಕೊಡೋರು, ಅದನ್ನೆಲ್ಲ ಕಲೆಕ್ಟ್ ಮಾಡ್ತಾ ಇದ್ವಿ.ಪಟಾಕಿಗಳನ್ನ, ಸುರುಸುರು ಬತ್ತಿ, ಗರ್ನಾಲು, ಕುಡಿಕೆ ಪಟಾಕಿಗಳನ್ನ ಅತ್ತೋ-ಕರೆದೋ ಕೊಡಿಸಿಕೊಳ್ತಿದ್ವಿ.ಎಲ್ಲಕ್ಕಿಂತ ಮುಖ್ಯವಾಗಿ ಹೊಸಬಟ್ಟೆ ಹಾಕಿ ಸಂಭ್ರಮಿಸ್ತಿದ್ವಿ.ನಮಗೆ ಏನಿಲ್ಲವೆಂದರೂ, ನಮ್ಮ ಹಿರಿಯರು ಒಂದಿಷ್ಟು ಸಂಪ್ರದಾಯ, ಪರಂಪರೆ ಅಂತ ಕಲಿಸಿದ್ರು, ಅದರ ಬಗ್ಗೆ ಕತೆಗಳನ್ನ ಹೇಳಿಕೊಟ್ಟಿದ್ರು.***ಆದರೆ ಇಂದಿನ ದೀಪಾವಳಿ ಆಚರಣೆ ಅದಕ್ಕೆ ತದ್ವಿರುದ್ಧವಾಗಿದೆ ಅನ್ನಬಹುದು.ನಮ್ಮ ಈ ಉತ್ತರ ಅಮೇರಿಕದ ಚೌಕಟ್ಟಿನಲ್ಲಿ ನಾವೂ ದೀಪಾವಳಿಯನ್ನ ಗ್ರ್ಯಾಂಡ್ ಆಗೇ ಆಚರಿಸ್ತೀವೆ, ಆದರೆ, ನಮಗೆ ಬೇಕಾದ ರೀತಿ ಮತ್ತು ಅನುಕೂಲಗಳೊಂದಿಗೆ.ಒಂದಂತೂ ನಿಜ, ದೀಪಾವಳಿ ಹಬ್ಬ ವಾರದ ಯಾವುದೇ ದಿನಾನೇ ಬರಲಿ, ನಾವು ಅಂದಿನ ದಿನವನ್ನೇ ಆಚರಿಸ್ತೀವಿ. ಈ ಹಬ್ಬವನ್ನ ವೀಕೆಂಡ್‌ಗೆ ತಳ್ಳೋದಿಲ್ಲ.ಒಂದು cul de sac ಗೆ ಹೊಂದಿಕೊಂಡ ನೆರೆಹೊರೆಯವರೆಲ್ಲ, ನಮ್ಮ ಅಂಗಳದಲ್ಲಿ ಸೇರಿಕೊಳ್ತೀವಿ.ಸುಮಾರು ಒಂದು ಮೂವತ್ತು-ಮುವತೈದು ಫ಼್ಯಾಮಿಲಿಗಳಾಗಬಹುದು.ಪಕ್ಕಾ ಸೌತ್ ಇಂಡಿಯನ್ ತಿಂಡಿ-ತಿನಿಸುಗಳಾದ ಇಡ್ಲಿ, ವಡೆ, ಉಪ್ಪಿಟ್ಟು, ಶ್ಯಾವಿಗೆ, ಕೇಸರಿಬಾತ್ ಹಾಗೂ ಕಿಚಡಿಯ ಜೊತೆಗೆ ಶೇಂಗಾ ಚಟ್ಣಿ, ಕೊಬ್ಬರಿ ಚಟ್ಣಿ ಮತ್ತು ಟೊಮ್ಯಾಟೋ ಚಟ್ಣಿಯನ್ನು ಮಾಡಿಟ್ಟಿರುತ್ತೇವೆ.ಪ್ರತಿಯೊಂದು ಫ಼್ಯಾಮಿಲಿಯವರೆಲ್ಲ, ಕುಡಿಕೆ ಪಟಾಕಿಗಳನ್ನ ಹಾರಿಸಿ, ಅದರ ಮುನ್ನೆಲೆಯಲ್ಲಿ ಹ್ಯಾಪಿ ದೀಪಾವಳಿ/ದಿವಾಲೀ ಎಂದು ಸಂತೋಷದಿಂದ ತೆಗೆದುಕೊಳ್ಳುವ ಅನೇಕ ಗ್ರೂಪ್ ಫ಼ೋಟೋಗಳು, ವಿಡಿಯೋಗಳು ಬಹಳ ವಿಶೇಷ.ನಾವು ಸುಮಾರು 11 ವರ್ಷಗಳಿಂದ ಈ ರೀತಿಯಾಗಿ ದೀಪಾವಳಿಯನ್ನ ಕಮ್ಯೂನಿಟಿ ಇವೆಂಟ್ ಆಗಿ ಆಚರಿಸಿಕೊಂಡು ಬಂದಿದ್ದೇವೆ. ಇದು ಹೀಗೆ ಮುಂದುವರೆಯಲಿ ಅನ್ನೋದು ನನ್ನ ಆಶಯ.
-
82
ನಮ್ಮ ಮತ್ತು ಕನ್ನಡ ಸಿನಿಮಾ ನಂಟು
ನಮ್ಮ ಮತ್ತು ಕನ್ನಡ ಸಿನಿಮಾ ನಂಟುನಮ್ಮ ಮತ್ತು ನಮ್ಮ ಕನ್ನಡ ಸಿನಿಮಾಗಳ ಬಾಂಧವ್ಯ ಹಲವಾರು ದಶಕಗಳ ವಿಸ್ತಾರವುಳ್ಳದ್ದು.ನಾವು ಒಂದು ಸಿನಿಮಾ ಅಥವಾ ಸೀರಿಯಲ್ ನೋಡ್ದಾಗ, ನಮಗೆ ಗೊತ್ತೋ ಗೊತ್ತಿಲ್ಲದೆಯೋ ಆಯಾ ಸಿನಿಮಾಗಳ ಕಲಾವಿದರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದುಕೊಳ್ಳುತ್ತೆ.ಈ ಒಂದು ಸಂಬಂಧ ಬಹಳ ವಿಶೇಷವಾದದ್ದು. ಆ ಕಾರಣದಿಂದ ನಮ್ಮ ಕನ್ನಡ (ನೇಟಿವ್) ಸಿನಿಮಾಗಳು ನಮಗೆ ಬಹಳ ಆಪ್ತವಾಗುತ್ತವೆ. ಈ ಕೆಳಗಿನ ಯಾವೊಬ್ಬ ಕಲಾವಿದರನ್ನು ನೀವು ನೆನಪಿಸಿಕೊಂಡರೂ ಸಾಕು ನಿಮಗೆ ಅವರ ಸಿನಿಮಾಗಳು, ಅವರ ಪರ್ಸನಾಲಿಟಿ ನೆನಪಿಗೆ ಬರೋದು ಸಹಜ: ಶನಿಮಹಾದೇವಪ್ಪ, ಟೈಗರ್ ಪ್ರಭಾಕರ್, ಕೆ.ಎಸ್. ಅಶ್ವಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಉಮಾಶ್ರೀ, ತಾರಾ, ಸುಂದರಕೃಷ್ಣ ಅರಸ್, ಪಂಡರೀಬಾಯಿ, ಇತ್ಯಾದಿ.
-
81
H1B ವೀಸಾ: ಕಥೆ ಮತ್ತು ವ್ಯಥೆ (82)
H1B ವೀಸಾ: ಕಥೆ ಮತ್ತು ವ್ಯಥೆಇತ್ತೀಚೆಗೆ ವೀಸಾ ಫ಼ೀ ಹೆಚ್ಚು ಮಾಡಿರೋ ವಿಷಯ:H1B ವೀಸಾ ಹೆಸರಿನಲ್ಲಿ ಬೋಟ್‌ಲೋಡ್‌ಗಟ್ಟಳೆ ಕ್ಯಾಂಡಿಡೇಟುಗಳನ್ನ ತಂದು ಇಲ್ಲಿ ದುಡ್ಡು ಮಾಡಿ ಮೆರೀತಾ ಇದ್ರಲ್ಲ ಅವರಿಾಗೆ ಬುದ್ಧಿ ಕಲಿಸೋ ಉಪಾಯನೋ?ಅಥವಾಇದರ ಹಿಂದೆ ಇನ್ನೇನಾದ್ರೂ ಕಾರಣ ಇದೆಯಾ?What do the mainstream Americans say about this?What does the Indian community say and react to this?Was this visa misused?How People Took Advantage: Legally and OtherwiseThe H-1B became a gateway to permanent residency for many skilled workers. Its “dual intent” provision allowed holders to apply for green cards while working in the U.S.. Over time, however, the system saw:Mass filings by outsourcing firms, exploiting the lottery systemProxy interviews and resume inflation, especially in tech contractingLow-wage offers to game the prevailing wage requirementThese practices led to criticism that the program was being used to undercut American wages and displace domestic talent.2025 Proclamation: A Turning PointPresident Trump signed a Proclamation on Sept 19, 2025, introducing:A $100,000 one-time fee for new H-1B petitionsA proposed weighted lottery system, favoring higher-paid applicantsRulemaking to raise prevailing wage levels and prioritize “best of the best” talentThese changes sparked intense debate:🇮🇳 Indian diaspora expressed confusion and concern over visa stamping, student transitions, and outsourcing impactsTech hubs like NYC worried about talent shortages and operational disruptionsStartups and mid-sized firms feared losing access to global talent due to cost barriersCultural and Economic ImpactDespite its flaws, the H-1B program has:Fueled innovation in tech, biotech, and academiaBrought cultural diversity to U.S. workplacesEnabled immigrant entrepreneurship, with many H-1B holders founding startupsYet, its future remains uncertain—caught between economic pragmatism and political populism.
-
80
ನಮ್ಮೊಳಗಿನ ಸೃಜನಶೀಲತೆ (Creativity)
ನಮ್ಮೊಳಗಿನ ಸೃಜನಶೀಲತೆ (Creativity)ನಮ್ಮೊಳಗೆ ಹೇಗೆ ಒಂದೊಂದು creative idea ಗಳು ಹುಟ್ಟುತ್ವೆ?ಆ ಆಲೋಚನೆಗಳು ಹೇಗೆ ಹರಳು ಕಟ್ಟುತ್ವೆ?ಆ ಹರಳು ಮುಂದೆ ಹೇಗೆ ಬೆಳೆದು, ಒಂದು ಸ್ಫುಟವಾದ ರೂಪ ಪಡೆಯೋದು ಹೇಗೆ?ಒಂದು ಚಿಕ್ಕ ಐಡಿಯಾ ದೊಡ್ಡದಾಗಿ ಹೇಗೆ ಬೆಳೆಯೋದು?ಈ ಐಡಿಯಾಗಳಿಗೆ ಯಾವುದಾದರೂ catalysts (positive or negative) ಇವೆಯಾ?How does the creative mind filter through the idea? What lens is being used?Today's episode discusses the creative thought process and how it becomes big or no longer exists.What are some of the avenues of inspiration?-Personal experience: life events, emotions, relationships-Observation: noticing everyday details, social dynamics, nature’s patterns-Cross-pollination: borrowing ideas from science, history, other arts-Constraints and prompts: briefs, forms, or challenges that force innovation-Tradition and scholarship: building on cultural myths, stories, or past mastersWhat are the catalysts?-PositiveCuriosity and playfulnessSupportive communities or mentorsTime and space for experimentation-NegativeConstraints like deadlines or budgets can force inventive solutionsInternal friction or critique that provokes problem-solvingExternal tensions, social change, conflict, and personal loss fuel the raw material.
-
79
ಆಫ಼್ರಿಕಾದ ಬವಣೆ ಮತ್ತು ಬದಲಾವಣೆ (80)
ಆಫ಼್ರಿಕಾದ ಬವಣೆ ಮತ್ತು ಬದಲಾವಣೆಒಂದಾನೊಂದು ಕಾಲದಲ್ಲಿ ಮಾನವತೆಯ ಮೂಲವಾಗಿ ಬಿಂಬಿತವಾಗಿದ್ದ ಆಫ಼್ರಿಕ ಎನ್ನೋ ಖಂಡ, ಇಂದು ಬಹಳ ಸಂಕಷ್ಟದಲ್ಲಿದೆ. ಸುಡಾನ್ ನಲ್ಲಿ ಆಗಸ್ಟ್ 31ರಂದು ಮಡ್‌ಸ್ಲೈಡ್ ಆದ ಕಾರಣದಿಂದ ಸುಮಾರು ಸಾವಿರ ಜನರು ಕಾಣೆಯಾದರು, ಆದರೆ ಅದು ಅಷ್ಟು ದೊಡ್ಡ ಸುದ್ದಿ ಮಾಡಲಿಲ್ಲ. ಆದರೆ, ಯುಕ್ರೇನ್‌ನಲ್ಲಿ ಹತ್ತು ಜನ ಸತ್ರೆ, ಅದು ಇಲ್ಲಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗುತ್ತೆ. ಹಾಗೇ, ಈ ವಾರದ ಅಫ಼ಘಾನಿಸ್ತಾನದ ಭೂಕಂಪದಲ್ಲಿ ಸಾವಿಗೀಡಾದ ನೂರಾರು ಜನರ ಬಗ್ಗೆ ಸುದ್ದಿ ಆಯ್ತು.ಜನರ ಜೀವ ಮತ್ತು ಆ ಜೀವಕ್ಕೆ ಎಲ್ಲ ಕಡೆಗೆ ಒಂದೇ ರೀತಿಯ ಬೆಲೆ ಇಲ್ಲದಿರುವುದೇಕೆ?ಒಂದು ಕಾಲದಲ್ಲಿ, craddle of humanity ಯಾಗಿ ಇದ್ದಂತಹ ಆಫ಼್ರಿಕ, ಇಂದು ಅನೇಕ ಕಾರಣಗಳಿಂದ ಬಳಲುತ್ತಿರುವುದೇಕೆ?The journey outwards of Africa started about 300,000 years ago. And only recently, about 15-25,000 years ago, they arrived in the North & South American continents. That journey of Homo sapiens isn’t just a biological or geographical story. It’s a mirror to our existential longing.1. Migration as MetaphorHuman migration from Africa wasn’t just about survival; it was about becoming. Each step outward was a step inward: a confrontation with the unknown, a test of adaptability, and a quiet yearning for belonging.They left the cradle not because it was broken, but because we were restless to understand who we are.This restlessness is the same force that drives artists to create, philosophers to question, and wanderers to roam. Migration is not merely movement; it is transformation.2. The Paradox of OriginAfrica, the birthplace of humanity, is now often portrayed as the world’s wound. But this paradox invites reflection:- Why does the origin of life suffer the most neglect?- Why do we forget the soil that bore our ancestors?Perhaps it’s because we’ve mistaken technological advancement for moral progress. The true measure of civilization isn’t skyscrapers—it’s compassion.3. The Silence Around SufferingThe mudslide in Sudan, the famine in the Sahel, the wars in Congo; these are not just news items. They are **ethical failures** of global consciousness.“When suffering becomes routine, empathy becomes optional.”Philosophers like Emmanuel Levinas remind us that ethics begins with the face of the Other. If we cannot see the face of a Sudanese child buried in mud, we have lost something essential.4. The Eternal ReturnNietzsche’s idea of eternal recurrence asks: if you had to live your life over and over, would you choose it again?Apply that to humanity: if we had to migrate again, would we still leave Africa? Would we still build borders, hierarchies, and systems that forget their origin?5. A Call to RememberAfrica is not a continent to be pitied; it is a continent to be remembered. To honor its legacy is to honor ourselves.“We are all migrants of time, of memory, of meaning. And the journey is not over.”
-
78
Artificial (Intelligence) Conversation
Artificial (Intelligence) ConversationPlease welcome Akash and Krupa - ಇವರಿಬ್ಬರೂ ಕನ್ನಡದಲ್ಲಿ ಮಾತನಾಡೋದನ್ನ ಕೇಳೋಣ!ಇವರಿಗೆ ಕೊಟ್ಟ ಸಲಹೆ, ಸೂಚನೆಗಳಿಗನುಸಾರವಾಗಿ ಹಾಗೂ ಅವರಿಗೆ ಕೊಟ್ಟ ರಿಸೋರ್ಸ್‌ಗಳನ್ನ ಅವಲಂಬಿಸಿ, ನಡೆಯೋ ಒಂದು ಚರ್ಚೆಯನ್ನ ಕೇಳಬಹುದು.
-
77
ಮಿಚ್ಚಾಮಿ ದುಃಖದಮ್ (78)
ಮಿಚ್ಚಾಮಿ ದುಃಖದಮ್ಈ ಒಂದು ಜೈನರ ಪರಂಪರೆಯ ಮಾತು, "ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿ: ನಡೆ-ನುಡಿ, ಆಚಾರ-ವಿಚಾರ, ಮಾತು-ಕತೆ ಇವುಗಳನ್ನೆಲ್ಲ ಕೂಲಂಕಶವಾಗಿ ಪರಿಗಣಿಸಿ, ನನ್ನನ್ನು ಕ್ಷಮಿಸಿ!"ಎಷ್ಟು ಚೆನ್ನಾಗಿದೆ ಅಲ್ವಾ ಈ ಕಾನ್ಸೆಪ್ಟ್?The fact that so many traditions converge on forgiveness tells us something profound: humility is a universal language. It’s not weakness, it’s wisdom. It’s not erasure, it’s evolution.And in a world of algorithms and acceleration, Micchami Dukkadam reminds us to pause, reflect, and say: “I may have erred. I may have hurt. May those actions bear no fruit. May we begin again.”In my opinion, this is a wonderful thought/concept emerging from Jainism's root! I think we should all seek to celebrate and adapt.
-
76
ಧರ್ಮ-ಅಧರ್ಮಗಳ ಹೋರಾಟ
ಧರ್ಮ-ಅಧರ್ಮಗಳ ಹೋರಾಟಎಲ್ಲರೂ ಅಂದುಕೊಂಡಿರೋ ಹಾಗೆ ಇದು ಧರ್ಮದ ಜಯವಲ್ಲ... ನಿಜವಾಗಿಯೂ, ಸಾವಿರಾರು ವರ್ಷಗಳಿಂದ ಧರ್ಮವನ್ನು ನಂಬಿಕೊಂಡು ಬಂದ ನಾವುಗಳು, ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಎಚ್ಚರಿಸಿಕೊಳ್ಳಬೇಕಾದ ಸಮಯ ಕೂಡ.ಇಲ್ಲಿ ಮೇಲ್ನೋಟಕ್ಕೆ ಒಂದು ಸಣ್ಣ ಪ್ರಮಾಣದ ಸಂಚು ಎಂದು ಗೋಚರಿಕೆಯಾದರೂ, ಇದರ ಅಂತರಾಳದಲ್ಲಿ ನಮ್ಮ ಎಲ್ಲರ ಗೊಂದಲ, ಒಗ್ಗಟ್ಟಿಲ್ಲದಿರುವಿಕೆ, ರಾಜಕೀಯ ಪ್ರೇರಿತ ಆಲೋಚನೆಗಳು ಎದ್ದು ಕಾಣುತ್ತವೆ.ಸತ್ತೋರು ಯಾರೋ? ಆದರೆ, ಸತ್ತವರ ಹೆಸರಿನಲ್ಲಿ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವ ಇವರನ್ನೆಲ್ಲ ನಂಬುವುದಾದರೂ ಹೇಗೆ?ಇನ್ನು ಎರಡನೆಯ ವಿಷಯ, ಬಹುವಾಗಿ ಕಾಡುವಂಥದ್ದು, ಸ್ಥಳೀಯ ವಿಷಯಗಳ ಬಗ್ಗೆ ಎಲ್ಲೋ ಕುಳಿತು ಅಥೆಂಟಿಕ್ ಆಗಿ ಯೂ ಟ್ಯೂಬ್ ವಿಡಿಯೋಗಳನ್ನು ಮಾಡಿ, ಲಕ್ಷಾಂತರ ಜನರನ್ನು ನಂಬಿಸಿರುವುದು ಮತ್ತು ಅವರ ನಂಬಿಕೆಗಳ ಫ಼ೌಂಡೇಶನ್ ಅನ್ನು ಅಲುಗಾಡಿಸಿರುವುದು. ಇನ್ನಾದರೂ ಜನರು, ಯೂ ಟ್ಯೂಬ್ ನಲ್ಲಿ ತೋರಿಸಿರೋದೆಲ್ಲ ಸತ್ಯವಲ್ಲ ಎಂದು ಮನಗಾಣುವುದಾದರೂ ಹೇಗೆ?ಈ ಸೋ ಕಾಲ್ಡ್ ಯೂ ಟ್ಯೂಬರುಗಳು, ಈಗಾಗಲೇ ಅಸ್ಥಿತ್ವಕ್ಕೆ ಬಂದಿದ್ದ ವಾರ್ತಾವಾಹಿನಿಗಳಿಗೆ ಸಡ್ಡು ಹೊಡೆದಂತೆ ರಾತ್ರೋ ರಾತ್ರಿ ಮಿಲಿಯನ್ ಗಟ್ಟಲೆ ಫ಼ಾಲೋವರುಗಳನ್ನು ಹಾಕಿಕೊಂಡು ದುಡ್ಡು ಮಾಡಿದ್ದೇ ಬಂತು. ಅವರೇನು ಜರ್ನಲಿಸಮ್ ಅನ್ನು ಓದಿದೋರಲ್ಲ, ವಿಷಯವನ್ನು ಕೂಲಂಕಷವಾಗಿ ವಿವೇಚನೆಯಿಂದ ಆಲೋಚಿಸಿ, ವಿಮರ್ಶಿಸಿ, ಅಗೆದು-ತೆಗೆದು ಇನ್ವೆಷ್ಟಿಗೇಟಿವ್ ಜರ್ನಲಿಸಮ್ ಅನ್ನು ಮಾಡಿದವರೇ ಅಲ್ಲ. ಆದರೆ, ಅಂಥವರಿಗೆಲ್ಲ ನಮ್ಮ ಸಮುದಾಯ ಸೊಪ್ಪು ಹಾಕುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ.
-
75
ಕರುಣೆ ಇಲ್ಲದ Customer Service (76)
ಕರುಣೆ ಇಲ್ಲದ Customer Serviceಈ ಕ್ಯಾಪಿಟಲಿಸಮ್ಮಿನ ಅವಿಭಾಜ್ಯ ಅಂಗ - ಕಸ್ಟಮರ್ಸ್.ಅವರನ್ನ ಓಲೈಕೆ ಮಾಡೋದು: ಕಸ್ಟಮರ್ ಸರ್ವಿಸ್, ಅಥವಾ ಸಪೋರ್ಟ್.ಈಗಿನ ಕಾಲದ (ಕರುಣೆ ಇಲ್ಲದ) ಈ ಕಸ್ಟಮರ್ ಸರ್ವಿಸ್ ಯುಗದಲ್ಲಿ ನಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವುದು ಹೇಗೆ?ಇದರಲ್ಲಿ ನಾನು ಶೇರ್ ಮಾಡಿರುವ ಒಂದು ರನ್ನಿಂಗ್ ಶೂ ಉದಾಹರಣೆಯಲ್ಲಿ, ನಾನು ಕಂಪ್ಲೇಟ್ ಮಾಡಿದ ಶೂ ಕಂಪನಿಯವರಿಗೆ, ಹಳೆಯ ಶೂ ಅನ್ನು ಕಳಿಸಿಕೊಡಿ, ಅದನ್ನು ನಾವು ಪರೀಕ್ಷಿಸುತ್ತೇವೆ ಅನ್ನೋ ವ್ಯವಧಾನವೂ ಇರಲಿಲ್ಲ.ನನ್ನ ಕಂಪ್ಲೇಟ್ ಕೇಳಿ, ತಕ್ಷಣ ಕೂಪನ್ ಕೊಟ್ಟಿದ್ದನ್ನು ನೋಡಿದರೆ, ಸಹಾಯ ಕೇಳೋದರಲ್ಲಿ ತಪ್ಪೇನಿದೆ ಅನ್ಸುತ್ತೆ.If you wonder, what % of the people call customer service?What % of the people really return the purchased items?What % of the people get warranty support benefits?ಇವನ್ನೆಲ್ಲ ನೋಡಿದ್ರೆ, ನಾವು ಕಸ್ಟಮರ್ ಸಪೋರ್ಟ್ ಬಗ್ಗೆ ತಿಳಿದುಕೊಳ್ಳೋದು ಸಾಕಷ್ಟು ಇದೆ, ಅನ್ಸುತ್ತೆ.There is no ಕರುಣೆ or considerations in online chat or with chat bots, don't waste your time. Instead, connect with the reps when you talk to them and insist (in a nice assertive way), need his/her help to get this resolve... convince them to go over and beyond... your job will be more than half done.
-
74
ಪೌರತ್ವ (Citizenship)
ಪೌರತ್ವ (Citizenship)What does it mean to “belong” — legally, emotionally, spiritually?Is citizenship a tool for freedom or a tether to obligation?Can one renounce a passport without renouncing a past?Are immigrants reshaping the meaning of nationality itself?ನಾವು ಭಾರತೀಯ ಮೂಲದ ವೃತ್ತಿ ಸಂಬಂಧಿ ವಲಸಿಗರು ಅಮೇರಿಕಕ್ಕೆ ಬಂದ ನಂತರ, ಇಲ್ಲಿನ ಪೌರತ್ವವನ್ನು ಪಡೆಯುವ ಬಗ್ಗೆ ಒಂದಿಷ್ಟು ಅನಿಸಿಕೆಗಳನ್ನ ಇಲ್ಲಿ ಹಂಚಿಕೊಂಡಿದ್ದೇನೆ.Considerations:Practical FactorsLegal Requirements: Residency duration, language proficiency, and civic knowledge tests.Dual Citizenship Rules: India does not allow dual citizenship; U.S. does.Tax Implications: New obligations may include global income reporting, estate taxes, or exit taxes.Travel & Mobility: A stronger passport (e.g., U.S.) offers broader visa-free access. Emotional & Identity FactorsSense of Belonging: Citizenship often symbolizes acceptance and rootedness.Family Expectations: Pressure from relatives or community to “stay loyal” to one’s homeland.Cultural Disconnect: Fear of losing touch with traditions, language, or ancestral values
-
73
ಅಮೇರಿಕದಲ್ಲಿ ನಮ್ಮ ಜೀವನೋಪಾಯ (ಹೊಟ್ಟೆ ಪಾಡು)
ಅಮೇರಿಕದಲ್ಲಿ ನಮ್ಮ ಜೀವನೋಪಾಯ (ಹೊಟ್ಟೆ ಪಾಡು)ಅಮೇರಿಕದ ಈಸ್ಟ್ ಕೋಸ್ಟ್ ಪ್ರಾಡಕ್ಟ್ ಬೇಸ್ಡ್ ಕಂಪನಿ ಹಾಗೂ ಸಿಲಿಕಾನ್ ವ್ಯಾಲಿ ಕಂಪನಿಗಳಲ್ಲಿ ಕೆಲಸ ಮಾಡೋದರಲ್ಲಿ ಏನು ವ್ಯತ್ಯಾಸ?ಎಲ್ಲಿ ಕೆಲಸ ಮಾಡಿದರೆ ಒಳ್ಳೆಯದು?ಅದರಿಂದ ಆಗೋ ಕಷ್ಟ-ನಷ್ಟಗಳೇನು?What are some of the considerations, both short & long term?
-
72
AI ಆಟಾಟೋಪ
AI ಆಟಾಟೋಪArtificial Intelligence ನಮ್ಮನ್ನೆಲ್ಲ ಕುಣಿಸ್ತಾ ಇದೆ.ಇದರಿಂದ ಏನೇನು ಆಗಬಹುದು?ಯಾಕೆ ಹೀಗೆ ಆಗ್ತಾ ಇದೆ?ನಾವು ಇದರಿಂದ ಹೇಗೆ ಅನುಕೂಲ ಪಡ್ಕೋಬಹುದು ಅಥವಾ ಇದರ ಗೊಂದಲಗಳಿಂದ ಹೇಗೆ ಬಚಾವಾಗಬಹುದು ಅನ್ನೋ ಚರ್ಚೆ.
-
71
ನಾವೂ... ನಮ್ಮ ವೆಕೆಷನ್ನೂ...(72)
ನಾವೂ... ನಮ್ಮ ವೆಕೆಷನ್ನೂ...ಒಂದೇ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಕುರ್ಚಿ ಗಟ್ಟಿ ಹಿಡಿದುಕೊಂಡು ಕುಳಿತುಕೊಂಡವರಿಗೆ ಒಂದು ಹೇಳಲಾಗದ ಮತ್ತು ಹಂಚಲಾಗದ ಅಳಲಿರುತ್ತದೆ, ಅದೇನೆಂದರೆ, ಅವರವರು ಗಳಿಸಿಕೊಂಡ ವೆಕೇಷನ್ ದಿನಗಳನ್ನ ಹೇಗೆ ಕಳೆಯೋದು ಎನ್ನುವುದು!ಒಂದಾನೊಂದು ಕಾಲದಲ್ಲಿ, ಕಂಪನಿಗೆ ಸೇರಿದ ಮೊದಲ ದಿನಗಳಲ್ಲಿ, ನಮಗೆಲ್ಲ ಕೇವಲ ಎರಡೇ ಎರಡು ವಾರಗಳ ಕಾಲ ರಜೆ ಇರೋದು. ಆಗೆಲ್ಲ ಭಾರತಕ್ಕೆ ಹೋಗಿ ಬರಬೇಕೆಂದರೆ, ಕಷ್ಟ ಪಟ್ಟು ವರ್ಷವಿಡೀ ಕೂಡಿಟ್ಟ ಮೂರು ವಾರಗಳ ರಜೆ ದಿನಗಳು ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಹೋಗಿ ಬಂದು ಸುಧಾರಿಸಿಕೊಳ್ಳಲು ಒಂದು ವಾರ ಮುಗಿದು ಹೋಗುತ್ತಿತ್ತು, ಇನ್ನುಳಿದ ಎರಡು ವಾರಗಳಲ್ಲಿ ಏನನ್ನು ಮಾಡುವುದು, ಏನನ್ನು ಬಿಡುವುದು? ಕೊನೆಗೆ ವೆಕೇಷನ್ ಮುಗಿದ ಮೇಲೆ, ಎಷ್ಟೊಂದು ಸುಸ್ತಾಗಿರುತ್ತಿತ್ತೆಂದರೆ, ಭಾರತದ ಟ್ರಿಪ್ ನಂತರ ಮತ್ತೊಂದು ವೆಕೇಷನ್ ಬೇಕು ಎನ್ನುವಷ್ಟು.ಆಗೆಲ್ಲ ರಜಾ ದಿನಗಳು ಕಡಿಮೆ, ನಮಗೆ ಹೆಚ್ಚು ಬೇಕಾಗಿತ್ತು. ಈಗೆಲ್ಲ, ರಜೆ ದಿನಗಳು ಹೆಚ್ಚು, ನಾವು ಉಪಯೋಗಿಸಿದರೂ ಉಳಿದು ಮತ್ತೆ ಮುಂದಿನ ವರ್ಷಕ್ಕೆ ಹೋಗುವಷ್ಟು! ನನ್ನ ಹತ್ತಿರ ನಲವತ್ತು ದಿನಗಳ ರಜೆ ಇದೆ ಎಂದಾಕ್ಷಣ, ಎಲ್ಲವನ್ನೂ ಒಮ್ಮೆಯೇ ತೆಗೆದುಕೊಂಡು ಉಡಾಯಿಸಿ ಬಿಡುತ್ತೇನೆ ಎಂದು ಎಂಟು ವಾರಗಳ ಪ್ಲಾನ್ ಮಾಡುವುದಂತೂ ದೂರದ ಮಾತು! ಏನಾದರೂ ಎರಡು ವಾರಗಳ ರಜೆ ತೆಗೆದುಕೊಂಡರೆ, ಓಕೆ, ಪರವಾಗಿಲ್ಲ... ಮೂರಕ್ಕಿಂತ ಹೆಚ್ಚು ತೆಗೆದುಕೊಂಡರೆ, ವೆಕೇಷನ್ ಮುಗಿಸಿ ಆಫ಼ೀಸಿಗೆ ಬರಲೇ ಬೇಡ ಎಂದು ಮ್ಯಾನೇಜ್‌ಮೆಂಟ್ ನವರು ಹೇಳಿದರೂ ಆಶ್ಚರ್ಯವೇನೂ ಇಲ್ಲ, ಹುಷಾರ್!ಒಂಥರಾ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ, ಎನ್ನುತ್ತಾರಲ್ಲ ಹಾಗೆ.
-
70
Negative thoughts? ಯಾಕ್ ಹೇಳಿ?!
Negative thoughts? ಯಾಕ್ ಹೇಳಿ?!ಜೀವನ ಅಂದ್ರೆ ಕಷ್ಟಗಳು ಇರೋದು, ಬರೋದು ಸಹಜವೇ.ಅದಕ್ಕೋಸ್ಕರ negativity ಗೆ ಕಟ್ಟು ಬಿದ್ರೆ ಹೇಗೆ ಹೇಳಿ?ಸಾಲದು ಅನ್ನೋದು ಬೇಕು ಅನ್ನೋದು ತಾಯಿ ಇದ್ದ ಹಾಗೆ ಅಂತೆ. ಹಾಗೆಯೇ, ನಮಗೆ ಒದಗಿ ಬರೋ ಕಷ್ಟ-ಕಾರ್ಪಣ್ಯಗಳನ್ನ ನಾವು ಒಂದು ಸವಾಲಾಗಿ ಸ್ವೀಕರಿಸಿ ಅದರಿಂದ ಒಂದಿಷ್ಟು ಕಲಿತರೆ ಒಳ್ಳೆಯದೇ ಅಲ್ವಾ?ಈ ಪ್ರಪಂಚದಲ್ಲಿ ಬೇಕಾದಷ್ಟು ಕೆಟ್ಟ ನ್ಯೂಸ್‌ಗಳು ಬರ್ತಾನೇ ಇರುತ್ತೆ. ನಮ್ಮ ಸುತ್ತಮುತ್ತಲಿನಲ್ಲಿರೋ ಒಳ್ಳೆಯ ವಿಚಾರಗಳನ್ನ ನಾವು ನೋಡೋದಿಲ್ಲ.ಭೂಮಿ ತಾಯಿಯಿಂದ ಹಿಡಿದು, ಪಂಚಭೂತಗಳವರೆಗೆ ನಮ್ಮ ಸುತ್ತಲಿರುವ ನಿಸರ್ಗ ಎಲ್ಲವೂ ಪಾಸಿಟಿವಿಟಿಯನ್ನೇ ಸೂಸುತ್ತಿರುವಾಗ, ನಮ್ಮ ಹುಲುಮಾನವರ ಈ ಅಳುಕು ಏಕೆ?
-
69
Shall I Compare Thee To A Summer's Day? (70)
Shall I Compare Thee To A Summer's Day?ಯಾಕೆ ಹೀಗೆ Shakespear ಬರೆದ ಅಂತ ಯೋಚನೆ ಮಾಡಿದ್ರೆ, ಆಗಿನ ಕಾಲದ ಲಂಡನ್ ನಲ್ಲಿ (ಮತ್ತೆ ಈಗೂ ಕೂಡಾ), ಬೇಸಿಗೆ ದಿನಗಳಿಗೆ ಒಂದು ರೀತಿಯ ವಿಶೇಷ ಸ್ಥಾನಮಾನ ಅಂತಾನೇ ಹೇಳ್ಬೇಕು.ಬೇಸಿಗೆ ಬಗ್ಗೆ ಒಂದು ಹರಟೆ (ಅಥವಾ ತಲೆ ಹರಟೆ) ಯನ್ನ ಇಲ್ಲಿ ಹಂಚಿಕೊಳ್ತಾ ಇದ್ದೀನಿ!***Sonnet 18: Shall I compare thee to a summer’s day?By William ShakespeareShall I compare thee to a summer’s day? Thou art more lovely and more temperate: Rough winds do shake the darling buds of May, And summer’s lease hath all too short a date; Sometime too hot the eye of heaven shines, And often is his gold complexion dimm'd; And every fair from fair sometime declines, By chance or nature’s changing course untrimm'd; But thy eternal summer shall not fade, Nor lose possession of that fair thou ow’st; Nor shall death brag thou wander’st in his shade, When in eternal lines to time thou grow’st: So long as men can breathe or eyes can see, So long lives this, and this gives life to thee.
-
68
Fishing and the Gen-Z
Fishing and the Gen-Zನೀವೆಲ್ಲ ಅಂದುಕೊಂಡಿರಬಹುದು, ಈ ಗಾಳ ಹಾಕಿ ಮೀನು ಹಿಡಿಯೋ ಪ್ರಕ್ರಿಯೆಯಲ್ಲಿ ಅಂಥಾ ಏನು ವಿಶೇಷ ಅಂತ.ಒಂದು ಕಾಲದಲ್ಲಿ only old grumpy men used to go for fishing ಅಂತ ನಾನು ಅಂದುಕೊಂಡಿದ್ದೆ... ಆದರೆ, ಅದಕ್ಕೆ ತದ್ವಿರುದ್ಧವಾಗಿ, ಇವತ್ತಿನ ಈ social media rich generation ನಲ್ಲಿ ಹುಟ್ಟಿ ಬೆಳೆದಿರೋ ಮಕ್ಕಳಿಗೆ ಈ fishing a ಅನ್ನೋ ಹವ್ಯಾಸದ ಮೇಲೆ ಏಕೆ ಒಲವು ಬಂತು ಅಂದುಕೊಂಡ್ರೆ, ನಿಮಗೆ ಬಹಳಷ್ಟು ಆಶ್ಚರ್ಯ ಕಾದಿದೆ.What do you share with your kids?What is something you and your kids do together, that you cherish most?Is fishing part of your meditative retreat?
-
67
ಅನಿವಾಸಿಗಳ ಮುಖ್ಯವಾದ ತೊಳಲಾಟ...(68)
ಅನಿವಾಸಿಗಳ ಮುಖ್ಯವಾದ ತೊಳಲಾಟ...ಅನಿವಾಸಿಗಳ ಮುಖ್ಯವಾದ ತೊಳಲಾಟ... ಅಂದ್ರೆ, ನಾವು ದೂರದ ಭಾರತದಲ್ಲಿನ ಸಾವು-ನೋವುಗಳಿಗೆ ಹೇಗೆ ಸ್ಪಂದಿಸುತ್ತೇವೆ ಅನ್ನೋದು.ಅಲ್ಲಿನವರ ಕಷ್ಟ-ಸುಖಗಳಿಗೆ ನಾವು (ಸರಿಯಾದ ಸಮಯಕ್ಕೆ) ಆಗದೇ ಇದ್ದಾಗ, ನಾವು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಹುಟ್ಟುವ ಆಲೋಚನೆಗಳು ನಮ್ಮ ಅಸ್ಮಿತೆಯನ್ನೇ ಪ್ರಶ್ನಿಸಬಹುದು.ಇಲ್ಲಿದ್ದರೂ, ಅಲ್ಲಿನವರ ಕಷ್ಟ-ಸುಖಗಳಿಗೆ ನಾವು ಅದು ಹೇಗೆ ಆಗಿ ಬರಬಹುದು? ಎಲ್ಲಿಯವರೆಗೆ ಈ ಒಂದು ದ್ವಂದ್ವವನ್ನು ಮುಂದುವರೆಸಿಕೊಂಡು ಹೋಗಬಹುದು ಎನ್ನುವುದು ಇಂದಿನ ಚಿಂತನೆ.
-
66
Online Shopping: A Boon or A Bane?
Online shopping: boon or bane?ಆನ್‌ಲೈನ್ ಶಾಪ್ಪಿಂಗ್ ಅನ್ನೋದು ವರವೋ ಶಾಪವೋಈ ಎಪಿಸೋಡ್‌ನಲ್ಲಿ ಆನ್‌ಲೈನ್ ಶಾಪ್ಪಿಂಗ್‌ನ ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಚರ್ಚೆ, ಜೊತೆಗೆ ಈ ದೊಡ್ಡ ದೊಡ್ಡ ವೇರ್‌ಹೌಸ್‌ಗಳು ಒಂದು ಊರಿನಲ್ಲಿ ಬರೋದರಿಂದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ-ಅನಾನುಕೂಲ ಆಗುತ್ತೆ ಅನ್ನೋದರ ಬಗ್ಗೆ ಒಂದಿಷ್ಟು ಕಾಳಜಿಯನ್ನ ಇಲ್ಲಿ ಹಂಚಿಕೊಳ್ತಾ ಇದ್ದೀನಿ.
-
65
Tiny annoyances! (67)
Daily Life’s Tiny Frictions:These are the everyday micro-irritations that add up, slow us down, or just make us sigh.Bottles and jarsTwisty lids that refuse to budgeShrink-wrapped blister packs with industrial-strength sealsTiny, squint-inducing labelsNutrition facts in unreadable fonts“Peel here” tabs that tear wrongPrescription and pill bottlesChild-proof caps require forearm strength to openPill organizers with lids that jamPop-up overloadEndless cookie bannersNotifications are pinging every minuteTeeny touch targetsIcons and links are too small on mobile screens“Agree” and “Cancel” buttons hugging each otherCaptcha gymnasticsIdentifying all traffic lights in pixel-blurry photosAudio tests that even humans can’t parseCable chaosChargers that fray at the plug endToo-short cords forcing acrobaticsJammed furnitureDrawers that stick halfwayOffice chairs that squeak in meetingsClutter hotspotsJunk mail piling on countersDusty corners begging for a dusterRestroom surprisesAuto-flushes that never sense you, and it faucets always dispense cold waterSoap dispensers that drip everywhereWhich of these bugs do you like most? Or have you found quirky fixes of your own?How do you convert daily annoyances into wins?
-
64
ನ್ಯೂಸ್ ಪೇಪರುಗಳ ಪಾತ್ರ ಏನು?
ನಮ್ಮ ಸಮಾಜದಲ್ಲಿ ನ್ಯೂಸ್ ಪೇಪರುಗಳ ಪಾತ್ರ ಏನು?ನಾವೆಲ್ಲ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನ್ಯೂಸ್ ಅಂದ್ರೆ ಸುದ್ದಿಗಳನ್ನ consume ಮಾಡ್ತೀವಿ. ಅಲ್ವಾ? ಹೀಗೆ ಪ್ರತಿ ದಿನ ಸುದ್ದಿಗಳನ್ನ ಓದೋದರಿಂದ ಬಿಡೋದರಿಂದ, ನಿಮಗೆ ಮಹತ್ವದ ವಿಷಯಗಳು ತಿಳಿತಾವೋ ಇಲ್ವೋ, ಆದರೆ ಅದರಿಂದ ನಿಮ್ಮ ಬ್ಲಡ್ ಪ್ರೆಶರ್ ಹೆಚ್ಚೋದಂತೂ ಗ್ಯಾರಂಟಿ!ನಾನು ದಿನಪ್ರಂತಿ ಓದೋ ನ್ಯೂಸ್ ಪೇಪರುಗಳಲ್ಲಿ, ನಮ್ಮ ನೆಚ್ಚಿನ ಪ್ರಜಾವಾಣಿ ಜೊತೆಗೆ, ವಾಲ್ ಸ್ಟ್ರೀಟ್ ಜರ್ನಲ್, ಇವರೆಡನ್ನ ಹೆಚ್ಚೂ ಕಡಿಮೆ ರೆಗ್ಯುಲರ್ ಆಗಿ ಓದಿದ್ರೆ, ಅಪರೂಪಕ್ಕೊಮ್ಮೆ ನ್ಯೂ ಯಾರ್ಕ್ ಟೈಮ್ಸ್ ಕೂಡಾ ಓದ್ತೀನಿ.ಈ ಲೆಫ಼್ಟಿಸ್ಟ್, ರೈಟಿಸ್ಟ್, ಸೆನ್ಟ್ರಿಸ್ಟು-ಇತ್ಯಾದಿಗಳನ್ನೆಲ್ಲ ಅರ್ಥ ಮಾಡಿಕೊಂಡು, ಅವುಗಳ ಒಂದೊಂದು ಹಿನ್ನೆಲೆಯಲ್ಲಿ ಒಂದೊಂದು ವಿದ್ಯಮಾನಗಳನ್ನೆಲ್ಲ ಓದ್ತಾ ಬಂದಾಗ, ನಿಮಗೇ ಆಶ್ಚರ್ಯ ಆಗತ್ತೆ... ಈ ಪ್ರಪಂಚದಲ್ಲಿ ಇನ್ಫ಼ರಮೇಷನ್ ಗಿಂತ ಹೆಚ್ಚು ಮಿಸ್ ಇನ್ಫ಼ರ್ಮೇಷನ್ನೇ ತುಂಬಿದೆ ಅಂತ!
-
63
ನಾವು ಕನ್ನಡಿಗರು ಇರೋದೇ ಹೀಗೆ... (65)
ನಾವು ಕನ್ನಡಿಗರು ಇರೋದೇ ಹೀಗೆ...ಹೀಗಂತ ಅನ್ನಿಸಿದ್ದು ಇತ್ತೀಚೆಗೆ, ನಮ್ಮ ಆಫ಼ೀಸಿನಲ್ಲಿ ಒಂದಿಷ್ಟು ಸಹೋದ್ಯೋಗಿಗಳ ಚಲನವಲನಗಳನ್ನ ಬಹಳ ಹತ್ತಿರದಿಂದ ಗಮನಿಸಿಕೊಂಡಾಗ.ಒಂದು ದಿನ ಆಫ಼ೀಸಿನಲ್ಲಿ, ನಾನು ಮತ್ತೊಬ್ಬ colleage (ದಕ್ಷಿಣ ಭಾರತೀಯ) ಇಬ್ಬರೂ ಇಂಗ್ಲೀಷಿನಲ್ಲಿ ಆಫ಼ೀಸಿಗೆ ಸಂಬಂಧಿಸಿರದ ವಿಷಯಗಳನ್ನ ಮಾತನಾಡಿಕೊಂಡಿದ್ದೆವು. ಈಗಂತೂ ಬೇಕಾದಷ್ಟು ವಿಷಯಗಳಿವೆ ಮಾತನಾಡಲು. ಆಗ ನಮ್ಮ ನಡುವೆ ಮತ್ತೊಬ್ಬ ದಕ್ಷಿಣ ಭಾರತೀಯನ ಆಗಮನವಾಯಿತು. ಒಂದೆರಡು ಕುಶಲೋಪರಿಗಳ ತರುವಾಯ, ಅವರಿಬ್ಬರೂ, ನಾನಿರುವಂತೆಯೇ ತಮಿಳಿನಲ್ಲಿ ಮಾತನಾಡಲು ಶುರುಮಾಡಿದರು. ನಾನು ಇದ್ದೇನೆ, ಇಲ್ಲ ಎನ್ನವ ಯಾವ ಉಸಾಬರಿಯೂ ಇಲ್ಲದೆ, ’ನೀನು ನಮ್ಮ ಜೊತೆ ಮಾತನಾಡುವುದಾದರೆ ತಮಿಳಿನಲ್ಲಿಯೇ ಮಾತನಾಡು, ಇಲ್ಲವಾದರೆ ತೊಲಗು’ ಎಂದು ಮುಖದ ಮೇಲೆ ಹೊಡೆದಂತೆ! ನಾನು ಈ ಸೂಕ್ಷ್ಮವನ್ನು ಗಮನಿಸಿದವನೇ, ಇಂಗ್ಲೀಷಿನಲ್ಲಿ ಬೇಕಂತಲೇ, ಸ್ವಲ್ಪ ಗಟ್ಟಿಯಾಗಿ, "...Guys, I don't know what the heck heck you're talking about... take care!" ಎಂದು ಹೇಳಿ, ಅವರ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೇ ಅಲ್ಲಿಂದ ಹೊರಟೆ.ಇದೇ ಸಂದರ್ಭ ಇಬ್ಬರು ಕನ್ನಡಿಗರ ನಡುವೆ ಆಗಿದ್ದರೆ ಹೇಗಿರುತ್ತಿತ್ತು? ಅವರು ಇಬ್ಬರೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರೇ? ಅಥವಾ ಆದಷ್ಟು ಬೇಗ ಇಂಗ್ಲೀಷಿಗೆ ಗಂಟುಬೀಳುತ್ತಿದ್ದರೇ?ಆಗ ನನಗನ್ನಿಸಿದ್ದು, "ನಾವು ಕನ್ನಡಿಗರು ಇರೋದೇ ಹೀಗೆ..." ಅಂತ.
-
62
Leading Change (How to handle change?)
How do you handle change?ಈ ಬದಲಾವಣೆ ಅನ್ನೋದು ಬಹಳ ಸ್ಪೆಷಲ್ ಅಂತ ಅನ್ನಿಸಿದ್ದು, ಇತ್ತೀಚೆಗೆ ಒಂದು ರಿಪೋರ್ಟ್ ಓದಿದ ಮೇಲೆ.Forbes: It’s one of the top four traits for senior executives. Data from over one million respondents shows that 32 percent of top-management leaders rank “leading change” among their four most critical competencies (out of a list of 19), compared with just 14 percent of front-line supervisors. That places change leadership squarely in the top quartile of must-have leadership qualities—on par with strategic visioning and effective communication. ಬದಲಾವಣೆ ಅಂದರೆ: ಮಾರ್ಪಾಟು, ಪರಿವರ್ತನೆ, ರೂಪಾಂತರ (transformation).Leading change has gone from a “nice-to-have” to a mission-critical leadership competency in today’s fast-moving world. Here’s why it matters and where it sits among other traits:It’s the linchpin of adaptability. In a recent 2024 survey of 1,400+ project and portfolio professionals, 92 percent said they struggle to adapt to change—and 70 percent noted that the pace of change actually accelerated over the prior year. Without leaders who can champion a clear vision, communicate the “why,” and rally teams, even the best strategies stall out.Forbes Report: Required Skills for Leading Change
-
61
Good for you... (63)
Good for you...ಆಮೇರಿಕನ್ ಇಂಗ್ಲೀಷ್‌ನಲ್ಲಿ "Good for you", ಅನ್ನೋ phrase ಇದೆ.ನಾನು Good for you, Good for him, ಎಂದು ಬಳಕೆಯಲ್ಲಿ ಕೇಳಿದಾಗಲೆಲ್ಲ ಅದರ ಬಗ್ಗೆ ಬಹಳ ಸೋಜಿಗವಾಗುತ್ತೆ ಮತ್ತು ಸಂತೋಷವೂ ಆಗುತ್ತೆ.ನಾವೆಲ್ಲ ಜೀವನ ಪರ್ಯಂತ ಒಂದನ್ನೊಂದು ಕಂಪೇರ್ ಮಾಡಿಕೊಂಡೇ ಬದುಕೋ ಜಾಯಮಾನದವರು ಅಂತ ಹೇಳಿದ್ರೆ ತಪ್ಪೇನೂ ಇಲ್ಲ.ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಆ ಕಾಲದಲ್ಲಿ ಹುಟ್ಟಿ ಬಂದವರೆದ್ದೆಲ್ಲ ಒಂದೇ ಪರಿಸ್ಥಿತಿ. ಅವರು ಮಕ್ಕಳು ಹೀಗಿದ್ದಾರೆ, ಅವರ ಮನೆಯಲ್ಲಿ ಏನೇನಿದೆ, ಅವರು ಹೇಗೆ ಖರ್ಚು ಮಾಡುತ್ತಾರೆ... ಇತ್ಯಾದಿ ಯಾಗಿ ಅನೇಕ comarison ಯಾವಾಗ್ಲೂ ನಡೀತಾನೇ ಇರ್ತಿತ್ತು.ಮೊದಮೊದಲು, ಅದು ಓಪನ್ ಆಗಿ ಪ್ರಚುರ ಗೊಳ್ತಿತ್ತು... ನೋಡು, ಅವರ ಮಗ ಎಷ್ಟು ಮಾರ್ಕ್ ತೆಗೆದ್ದಿದ್ದಾನೆ... ಅಂತಲೋ, ನೋಡು, ಅವನ ಬಟ್ಟೆಗಳು ಎಷ್ಟು ನೀಟಾಗಿ ಇವೆ... ಮುಂತಾಗಿ ಅನೇಕಾನೇಕ ಕಾಮೆಂಟುಗಳು ಬರ್ತಾನೇ ಇರ್ತಿದ್ವು, ನೆನಪಿದೆಯಾ ನಿಮಗೆ?ನನಗ್ಗೊತ್ತಿಲ್ಲ... ಈ ರೀತಿಯ comparison, ಅದರಲ್ಲೂultra comparison ಒಂದು ರೀತಿ ಒಳ್ಳೆಯದೋ ಕೆಟ್ಟದ್ದೋ ಅಂತ. ಒಂದು ಹಂತದಲ್ಲಿ ಸಾಮಾಜಿಕವಾಗಿ ಒಂದು ಆರೋಗ್ಯಕರ ಬೆಳವಣಿಗೆ, ಪೈಪೋಟಿಗಳನ್ನ ಇದು ಹುಟ್ಟಿ ಹಾಕುತ್ತೆ ಅನ್ನಬಹುದು. On the other hand, ಇದು ಒಂದು ರೀತಿಯಲ್ಲಿ ಕೀಳರಿಮೆ ಬೆಳೆಯೋದಕ್ಕೆ, ಮುಂದೆ ಅದೇ ನಮ್ಮ ನಮ್ಮ ಬೆಳವಣಿಗೆಯನ್ನ ಕುಂಠಿತಗೊಳಿಸುತ್ತೆ ಅನ್ನೋದು ನನ್ನ ಅನಿಸಿಕೆ.ಎಷ್ಟು ಸರ್ತಿ, "ಅಯ್ಯೋ ನನಗೆ ಕಡಮೆ ಮಾರ್ಕ್ ಬಂತಲ್ಲ, ಅನ್ನೋ ಸಂಕಟಕ್ಕಿಂತ, ಇನ್ನೊಬ್ಬರಿಗೆ ಹೆಚ್ಚು ಮಾರ್ಕ್ ಬಂತು ಅನ್ನೋ ಹೊಟ್ಟೇ ಉರಿಯೇ ನಮ್ಮನ್ನು ಹೆಚ್ಚಾಗಿ ಬಾಧಿಸಿದ್ದಿರಬಹುದು.ಆಗೆಲ್ಲ, ಬಾಲ್ಯದಲ್ಲಿ ಆರಂಭವಾದ ಈ ಕಡು comparison ಗಳು, ಮುಂದೆ ನಮ್ಮನ್ನು ಸುಮ್ಮನೇ ಬಿಡುತ್ತಾವೇನೂ? ನಾವು ಹೋದಲ್ಲಿ, ಬಂದಲ್ಲಿ, ನಮ್ಮನ್ನು ಬೆಂಬಿಡದೇ ಖಂಡಿತ ಕಾಡಿಯೇ ಕಾಡುತ್ತವೆ.
-
60
ಒಂದು ಬಿಂದುವಿನಿಂದ ಸಿಂಧುವಿನೆಡೆಗೆ...
ಒಂದು ಬಿಂದುವಿನಿಂದ ಸಿಂಧುವಿನೆಡೆಗೆ...ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು. ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು!ಈ ಅರಿವು ಮೂಡಿದ್ದು ಇತ್ತೀಚೆಗೆ, ನಾನು ಸಮುದ್ರದ ತಟದಲ್ಲಿ ನಿರಂತರವಾಗಿ ಕಾಲಿಗೆ ಬಂದು ರಾಚುತ್ತಿದ್ದ ಅಲೆಗಳ ಮಡಿಲಿನಿಂದ, ಬೊಗಸೆಯಲ್ಲಿ ನೀರನ್ನು ಮೊಗೆದು, ಸೂರ್ಯನಿಗಭಿಮುಖವಾಗಿ ವಿಸರ್ಜಿಸುತ್ತಿರುವಾಗ, ಕೊನೆಯಲ್ಲಿ ಉಳಿದ ಹನಿಗಳು ತಮ್ಮೊಳಗಿನ ಹೊಸದೊಂದು ಪ್ರಪಂಚವನ್ನೇ ತೋಡಿಕೊಂಡವು.ಅಬ್ಬಾ! ಈ ಒಂದೊಂದು ಹನಿಯೂ ತನ್ನೊಳಗೆ ಅಪಾರವಾದ ಸಾಗರವನ್ನೇ ಹೊತ್ತಿಕೊಂಡಿದೆಯಲ್ಲಾ!
-
59
ಯಾರ್ ಒದ್ತಾರ್ ಬಿಡಿ?! (61)
ಯಾರ್ ಒದ್ತಾರ್ ಬಿಡಿ?!ನಮ್ಮ ಸ್ನೇಹಿತರ ಜೊತೆ ಮಾತಾಡ್ತಾ ಇರಬೇಕಾದ್ರೆ ಈ ಮಾತು ಅವಾಗಾವಾಗ ಬರ್ತಾ ಇರತ್ತೆ: "ಬರೆದಿದ್ದನ್ನಲ್ಲ ಓದೋರು ಯಾರು?" ಅಂತ.ಈಗಿನ ಸೂಪರ್ ಹೈವೆಯಲ್ಲಿ ಓಡೋ ಸೋಶಿಯಲ್ ಮೀಡಿಯಾ ಚಾನೆಲ್ಲುಗಳು ಕೊಡೋ input ಗಳ ಮುಂದೆ, ಬರಹದಲ್ಲಿ ಬರೆದಿದ್ದು, ಅದೂ ಆರ್ಟಿಕಲ್ ಅಥವಾ ಪುಸ್ತಕದ ರೂಪದಲ್ಲಿ ಸಿಗೋದಾದ್ರೆ, ಅದನ್ನ consume ಮಾಡೋರು ಯಾರು? ಜನಗಳ consumption ನಲ್ಲಿ ಅದೇನೇನು ಬದಲಾವಣೆಗಳಾಗಿವೆ ಅನ್ನೋದನ್ನ ನೋಡ್ತಾ ಹೋದ್ರೆ ಅನೇಕ ರೋಚಕತೆಗಳು ಕಾಣುತ್ವೆ.ಇತ್ತೀಚಿನ ಒಂದು AxiomHQ ರಿಸರ್ಚ್‌ನ ಪ್ರಕಾರ 70% ಜನ short communication ಇಷ್ಟ ಪಡ್ತಾರಂತೆ, ಅದರಲ್ಲೂ ನೀವೇನಾದ್ರೂ 800 ಪದಗಳನ್ನ ಮೀರಿ ಒಂದು article ಕಳಿಸಿದ್ರೆ, ಕೇವಲ 5% ಜನ ಮಾತ್ರ ಪೂರ್ತಿ ಒದ್ತಾರಂತೆ.ಅದೂ ಸರೀನೆ ಬಿಡಿ. ಇರೋ 24 ಗಂಟೆಗಳಲ್ಲಿ ಯಾವುದನ್ನ ಓದೋದು, ಯಾವುದನ್ನ ಬಿಡೋದು?
-
58
ಕೊನೆಗೂ RCB ಗೆಲ್ತಂತೆ?!
ಕೊನೆಗೂ RCB ಗೆಲ್ತಂತೆ?!ನನ್ನ ಸ್ನೇಹಿತ ಸುಬ್ಬು ಜೊತೆ, RCB ಗೆದ್ದ ಸಂಭ್ರಮದ ಬಗ್ಗೆ ಮಾತಾಡೋಣ ಅಂತ ಫ಼ೋನ್ ಮಾಡಿದ್ರೆ, ಅವನ ರಿಯಾಕ್ಷನ್ ನೋಡಿ ಆಶ್ಚರ್ಯ ಆಯ್ತು!18 ವರ್ಷಗಳ ನಂತರ ತಂಡ ಗೆದ್ದಿದ್ದನ್ನ ನೋಡಿ ಸಂಭ್ರಮ ಪಡ್ತಾನೆ ಅಂತ ಅಂದ್ರೆ, ಈ ಕೆಳಗಿನ ಪ್ರಶ್ನೆಗಳನ್ನ ಕೇಳ್ತಾನೆ ನೋಡಿ:1) Private team ಅವರವರ ದುಡ್ಡು ಹಾಕಿ ಸೆಲೆಬ್ರೇಟ್ ಮಾಡೋದು ಬಿಟ್ಟು ಕರ್ನಾಟಕದ ಜನರ ದುಡ್ಡು ಬಳಸೋದು ಯಾಕೆ?2) ಇವರ ಸಂಭ್ರಮಾಚರಣೆ ಸೂತಕ ಆಯ್ತಲ್ಲ, ಇದರಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂತು, ಅದಕ್ಕೆ ಯಾರು ಹೊಣೆ?3) ಸಂಭ್ರಮಾಚರಣೆಗೆ ಸಾವಿರಾರು ಹೆಚ್ಚಿನ ಪೋಲೀಸ್ ಅನ್ನ ನಿಯೋಜಿಸಿದ್ರಲ್ಲ, ಅದಕ್ಕೆಲ್ಲ ದುಡ್ಡು ಎಲ್ಲಿಂದ ಬರುತ್ತೆ?4) ಕಪ್ ಗೆದ್ದ ತಂಡ, ಅವರು ಮಾಡೋ ಲಾಭನೆಲ್ಲ ಕರ್ನಾಟಕದ ಜೊತೆ ಹಂಚಿಕೋತಾರ? ರಾಯಲ್ ಚಾಲೆಂಜರ್ಸ್ ಅಂತ ಹೆಸರು ಇಟಕಂಡೋರು, ನಮಗೇನಾದ್ರೂ ರಾಯಲ್ಟಿ ಕೊಡ್ತಾರ?5) ಈ celebration ಅನ್ನ ಬೆಂಗಳೂರಲ್ಲೇ ಯಾಕೆ celebrate ಮಾಡ್ಬೇಕು? ಅದನ್ನ ತೀರ್ಮಾನ ಮಾಡ್ದೋರು ಯಾರು? ಅವರನ್ನ ನಮ್ಮ ಮಂತ್ರಿ-ಮಾಗದರು receive ಮಾಡಿದ್ರಲ್ಲ, ಅದು ಯಾರ ತೀರ್ಮಾನ?6) ಈ ದುರಂತದಲ್ಲಿ ದಾರುಣವಾಗಿ ಮಡಿದ 11 ಜನರಿಗೆ ತಲಾ 25 ಲಕ್ಷ ಕೊಟ್ಟರಲ್ಲ, ಅದನ್ನ franchise owners ಕೊಟ್ಟರೋ ಅಥವಾ ಕರ್ನಾಟಕದ tax payers ಕೊಟ್ಟರೋ?7) ಈ private franchiseಗಳು ಆಡ್ತಾರೆ, ಗೆಲ್ತಾರೆ... ಅದರಲ್ಲಿ ನಾವೆಲ್ಲ ಸಂತೋಷ - ಸಂಭ್ರಮ ಪಡೋ ಅಂತ ವಿಷ್ಯಾ ಏನಿದೆ?8) RCB ಸಂಸ್ಥೆಗೂ ಕರ್ನಾಟಕ ಸರ್ಕಾರಕ್ಕೂ ಏನು ಸಂಬಂಧ?
-
57
Copy & Paste: ಒಂದು ದಿನದ ಮಟ್ಟಿಗೆ ಇಲ್ಲದಿದ್ರೆ ಹೇಗೆ? (59)
Copy & Paste functionality ನ ಒಂದು ದಿನದ ಮಟ್ಟಿಗೆ ತೆಗದ್ರೆ ಹೇಗೆ?What happens if the Copy & Paste functionality is removed in the world for just one day!One of my supervisors used to say, "Copy shamelessly!". "Only 2% of the content created in the world is real, everything is else copied & pasted in some way shape or form".ನಾವು ದಿನಾ ಕಾಪಿ-ಪೇಸ್ಟ್ ಪ್ರಕ್ರಿಯೆ ಎಷ್ಟು ಜೋರಾಗಿ ಬೆಳೆದಿದೆ ಅಂದ್ರೆ, ಒಂದು ವಿಂಡೋದಿಂದ ಮತ್ತೊಂದು ವಿಂಡೋಗೆ ರಾಜಾರೋಶವಾಗಿ ಕಾಪಿ ಮಾಡುತ್ತಲೇ ಇರುತ್ತೇವೆ! ಆ ಪ್ರಕ್ರಿಯೆ, ಇತ್ತೀಚೆಗೆ ಚಾಟ್-ಜಿಪಿಟಿ, Gemini, Copiot ಬಂದ ಮೇಲೆ ಇನ್ನೂ ಹೆಚ್ಚಿದೆ ಎನ್ನಬಹುದು.ಕೆಲವು ವರ್ಷಗಳ ಹಿಂದೆ ನನ್ನ ಪರ್ಸನಲ್ ಲ್ಯಾಪ್‌ಟಾಪ್‌ನಲ್ಲಿ ಬ್ಯಾಕ್ ಸ್ಪೇಸ್ ಕೀ ಮಿಸ್ ಆಗಿತ್ತು. ಆಗ ತಾನೆ, ತನ್ನ ತುಂಟಾಟಗಳನ್ನು ಆರಂಭಿಸಿದ್ದ ನನ್ನ ಮಗ, ಒಂದು ದಿನ ಬ್ಯಾಕ್ ಸ್ಪೇಸ್ ಕೀ ಎನ್ನು ತೆಗೆದು ಹಾಕಿದ್ದ. ಅದರಿಂದ ಆದ ತೊಂದರೆ ಅಷ್ಟಿಷ್ಟಲ್ಲ! ಕೊನೆಗೆ, ನಾನು ಕೀ ಬೋರ್ಡ್ ಅನ್ನು ಸಂಪೂರ್ಣ ರಿಪ್ಲೇಸ್ ಮಾಡಿ ಹೊಸ ಕೀ ಬೋರ್ಡ್ ಹಾಕುವವರೆಗೆ ಹೋಗಿತ್ತು, ಆ ತಲೆ ನೋವು.ನಿಮಗೆ ಗೊತ್ತಿರಬಹುದು, ಒಂದಾನೊಂದು ಕಾಲದಲ್ಲಿ Network ಕನೆಕ್ಟ್ ಆಗದ ಕಂಪ್ಯೂಟರುಗಳಲ್ಲಿ ನಾವು ಅದೆಷ್ಟು ಕೆಲಸಗಳನ್ನು ಮಾಡುತ್ತಿದ್ದೆವು. ವರ್ಡ್ ಪ್ರಾಸೆಂಸ್ಸಿಂಗ್ ನಿಂದ ಹಿಡಿದು, ಪ್ರೋಗ್ರಾಮುಗಳನ್ನು ಬರೆದು ಕಂಪೈಲ್ ಮಾಡಿ, ರನ್ ಮಾಡುವವರೆಗೆ. ಆಮೇಲೆ ಅದರಲ್ಲಿ ಗೇಮ್ ಗಳನ್ನು ಆಡುತ್ತಿದ್ದೆವು. ಆಮೇಲೆ, ಅದಕ್ಕೊಂದು ನೆಟ್‌ವರ್ಕ್ ಕನೆಕ್ಷನ್ ಅಂತ ಬಂದ ಮೇಲೆ, ಅದೇ ಕಂಪ್ಯೂಟರುಗಳನ್ನು ಬಳಸಿ, ಡೂಮ್ ಎನ್ನುವ ನೆಟ್‌ವರ್ಕ್ ಗೇಮ್ ಆಡಿದ್ದು, ಇವತ್ತಿಗೂ ನೆನಪಿನಲ್ಲಿ ಅಚ್ಚಳಿಯದೆ ನಿಂತಿದೆ.ನಾವು ನಮ್ಮ ನಮ್ಮ ಕಂಪ್ಯೂಟರುಗಳ ಮೇಲಿನ ಅವಲಂಬನೆಯನ್ನು ಹೆಚ್ಚು ಹೆಚ್ಚು ಮಾಡಿದ್ದರಿಂದಲೇ ಈಗಿನ ಮೊಬೈಲು ಫ಼ೋನುಗಳಿಗೆ ಇಷ್ಟೊಂದು ಡಿಮ್ಯಾಂಡ್ ಬಂದಿದೆಯೇನೋ ಅನ್ನಿಸುತ್ತದೆ. ಈಗಂತೂ ನಿಮ್ಮ ಕೈಯಲ್ಲಿ ಮೊಬೈಲ್ ಇಲ್ಲವೆಂದರೆ, ನೀವು ಒಂದು ರೀತಿಯಲ್ಲಿ disabled ಆದಂತೆಯೇ ಸರಿ.ಈಗ copy & paste ವಿಷಯಕ್ಕೆ ಬರೋಣ:ಆಫ಼ೀಸಿನಲ್ಲಿ ನಾವು ಬಹಳಷ್ಟು ಬಾರಿ, ಹೊಸ ಹೊಸ ಸ್ಲೈಡುಗಳನ್ನು ತಯಾರಿಸುತ್ತೇವೆ. ನಮ್ಮ powerpoint slides ಗಳ ಎಷ್ಟು dependency ಇದೆ ಅಂದರೆ, ನಾವು ಪ್ರತಿದಿನವೂ slides ಬಳಸದೆ ಬದುಕಲಾರೆವು ಎನ್ನುವಷ್ಟರ ಮಟ್ಟಿಗೆ ಬಂದು ಹೋಗಿದ್ದೇವೆ.ಆದರೆ, ಪ್ರತೀ ಬಾರಿಯೂ ಹೊಸ ಹೊಸ ಡಿಸೈನುಗಳನ್ನು ಅಳವಡಿಸಿ ಸ್ಲೈಡುಗಳನ್ನು ಮಾಡುವುದಿದೆ ನೋಡಿ, ಅದರಷ್ಟು ಕಷ್ಟದ ಕೆಲಸ ಇನ್ನೊಂದಿಲ್ಲ.Slides ಮಾಡುವಲ್ಲಿ ಎರಡು ಥರನಾದ ಕುಶಲ ಸ್ಕಿಲ್ಸ್ ಗಳಿವೆ: ಮೊದಲನೆಯದು, ಹೇಳುವ ವಿಷಯವನ್ನು ಸರಿಯಾಗಿ, ಯಾವ ಗೊಂದಲವೂ ಇಲ್ಲದೆ, ಅಂದರೆ ಪೂರ್ತಿ clarity ಇಂದ ಕೇಳುವ audience ಗೆ ನಿರೂಪಿಸುವುದು. ಎರಡನೆಯದು, ಹೇಳುವ ವಿಷಯವನ್ನು ಕಡಿಮೆ ಪದಗಳನ್ನು ಬಳಸಿ, ಚಿತ್ರಗಳನ್ನು ಬಳಸುವುದರ ಮುಖೇನ ಪರಿಣಾಮಕಾರಿಯಾಗಿ (effective) ಆಗಿ ವಿಷದೀಕರಿಸುವುದು.ಮೊದಲನೆಯ ವಿಚಾರಕ್ಕೆ ನಿಮಗೆ ಚುರುಕಾದ ಇಂಜಿನಿಯರ್ ಬುದ್ಧಿ ಬೇಕಾದರೆ, ಎರಡನೆಯದ್ದಕ್ಕೆ ಸ್ವಲ್ಪ ಆರ್ಟಿಸ್ಟ್ ಆಗಿ ಕಲಾತ್ಮಕವಾಗಿ ಯೋಚಿಸುವ ಅಗತ್ಯವೂ ಇದೆ. ನನಗೆ ಮೊದಲನೆಯ ವಿಚಾರದಲ್ಲಿ ಅಷ್ಟೊಂದು ಕಷ್ಟವೆನಿಸದು, ಆದರೆ, ಎರಡನೆಯ ವಿಚಾರದಲ್ಲಿ, ನಾನು ಯಾವಾಗಲೂ ಹೊಸ ಹೊಸ input ಗಳನ್ನು ನಿರೀಕ್ಷಿಸುತ್ತಲೇ ಇರುತ್ತೇನೆ. ಎಲ್ಲೇ ಒಂದು ಸುಂದರವಾದ pattern ಕಂಡು ಬಂದರೆ, ಅಥವಾ ಚಿತ್ರಗಳು ಗೋಚರಿಸಿದರೆ, ಅದನ್ನು ನನ್ನ ಮನಸ್ಸು ನಿರಂತರವಾಗಿ ಕಾಪಿ ಮಾಡುತ್ತಲೆ ಇರುತ್ತದೆ.ಹೀಗೆ, ಯೋಚಿಸುತ್ತಾ ಹೋದಾಗ, ಸುಮ್ಮನೆ ಒಂದು ದಿನದ ಮಟ್ಟಿಗೆ copy & paste feature ಅನ್ನು ಪ್ರತಿಯೊಂದು ಕಂಪ್ಯೂಟರ್ ನಲ್ಲಿ ತೆಗೆದು ಹಾಕಿದರೆಂದರೆ, ಆ ದಿನ ಪ್ರಪಂಚದ ವಹಿವಾಟು, ಸಂಚಲನಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು, ಎಂದು ಯೋಚಿಸುತ್ತಾ ಹೋದಂತೆ, ಮೊದಮೊದಲು science fiction ನ ಒಂದು thrilling experience ಆಗಿ ಶುರುವಾಗಿ, ಕೊನೆಗೆ ಒಂದು horror movie ಯ ಅಂತ್ಯ ಸಮೀಪಿಸುತ್ತಿರುವ ಅನುಭವವಾಗತೊಡಗಿತು.Why do we copy?If we know, if we are unable to "paste" it elsewhere, how will that copy function look like?Is this going to increase our work, or decrease the overall work? For example, you think of copying & pasting the formula on an excel spreadsheet.On the other hand, will this retain the originality of a work, that's relevant? Say, the research article, news story, exploration, expedition, they all look anew, a brand new!What do you think we will be impact to the music industry?How does this impact the artists, movie makers?How do we identify what's original content and what's copied?How much copy is allowed, that's considered legal? Does the work copyright ever work in anyone's favor? (Other than saying, "uncopywritable" is the only word in English that does not have any repeating letters.
-
56
Boston Train ಪ್ರಸಂಗ (ಯಾರದ್ದೂ ತಪ್ಪಲ್ಲ ಬಿಡಿ...)
ಯಾರದ್ದೂ ತಪ್ಪಲ್ಲ ಬಿಡಿ...ಇದು ಯಾರದ್ದೂ ತಪ್ಪಲ್ಲ ಬಿಡಿ, ಅಂತ ಅನ್ನಿಸಿದ್ದು ನಿನ್ನೆ.ಇದ್ದಕ್ಕಿದ್ದ ಹಾಗೆ ನಾನು ಬಾಸ್ಟನ್ ಇಂದ ನ್ಯೂ ಜೆರ್ಸಿ ಕಡೆಗೆ ಬರೋ Amtrak ಟ್ರೈನ್ ಕಂಡಕ್ಟರ್ ಒಂದು annoucement ಮಾಡಿದ."ನಾವು New Heaven, Connecticut ಬಿಟ್ಟು ಮುಂದೆ ಹೋಗೋ ಹಾಗಿಲ್ಲ. ಮಾರ್ಗದ ಮಧ್ಯೆ ಒಂದು ಕಡೆ ಪವರ್ ಲೈನ್ ತುಂಡಾಗಿ ಬಿದ್ದಿದೆ (10ಕೆ ವೋಲ್ಟ್), ಅದು ರಿಪೇರಿ ಆಗುವ ವರೆಗೂ ಎಲ್ಲ ಟ್ರೇನುಗಳೂ ಇಲ್ಲಿಯೇ ನಿಲ್ಲುತ್ತವೆ, ಪ್ರಯಾಣಿಕರು ತಮ್ಮ ತಮ್ಮ ಅನುಕೂಲವನ್ನು ನೋಡಿಕೊಳ್ಳಬೇಕಾಗಿ ವಿನಂತಿ... we apologize for any inconvenience this may have caused"... ಎಂಬುದಾಗಿ.ನಾನು ನೋಡಿಕೊಂಡೆ, ನ್ಯೂ ಜೆರ್ಸಿಯಿಂದ ಕೊನೇಪಕ್ಷ ಎರಡೂವರೆ ಘಂಟೆ ದೂರದಲ್ಲಿರೋ ಸ್ಟೇಷನ್ ಇದು. New Haven, CT ಅಂದ್ರೆ ಅಂಥ ದೊಡ್ಡ ಸಿಟೀ ಏನೂ ಅಲ್ಲ, ಆದರೆ, ಅಲ್ಲಿ ಇದ್ದುಕೊಂಡು ಮಾಡೋದಾದರೂ ಏನು? ರಾತ್ರಿ ಬೇರೆ ಎಂಟು ಗಂಟೆಯ ಸಮಯ ಆಗ್ತಾ ಇದೆ.ಇದೇ ಸಂದರ್ಭದಲ್ಲಿ ನಾನು ಪ್ರಯಾಣಿಸುತ್ತಿದ್ದ ಕಂಪಾರ್ಟ್‌ಮೆಂಟ್ನಲ್ಲಿ ಇದ್ದ ಕೆಲವು ಪ್ರಯಾಣಿಕರನ್ನು ಗಮನಿಸಿದೆ. ಈ ಸೋಶಿಯಲ್ network ಯುಗದಲ್ಲಿ ಕೆಲವರು ವಿಚಲಿತರಾದಂತೆ ಕಂಡರು...ಈ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು? What are your options and which one would you take?
-
55
ಕನ್ನಡ ಭಾಷೆ ಎಲ್ಲಿಂದ ಹುಟ್ಟಿತು (57)
ಕನ್ನಡ ಭಾಷೆ ಎಲ್ಲಿಂದ ಹುಟ್ಟಿತುಕನ್ನಡ ಭಾಷೆ ಎಲ್ಲಿಂದ ಹುಟ್ಟಿತು, ಅದರ ಅಪ್ಪ ಯಾರು, ಅಮ್ಮ ಯಾರು ಅಂತ ತಿಳಿಯೋಣ, ಇನ್ನೇನು ಆಗ್ತಾ ಇದೆ ಕರ್ನಾಟಕದಲ್ಲಿ ನೋಡೋಣ ಅಂತ ನನ್ನ ಖಾಸಾ ದೋಸ್ತ, ಸುಬ್ಬನಿಗೆ ಫ಼ೋನ್ ಮಾಡ್ದೆ.ಆ ಕಡೆಯಿಂದ, "ಹಲೋ, ಸಾವಕಾರ್ರೆ, ಆರಾಮೇನ್ರಿ?"ಅಂತ ಉತ್ತರ ಬಂತೋ... "ಏನೋ ಸುಬ್ಬು, ಪಕ್ಕಾ ಮಲೆನಾಡಿನ ವ್ಯಕ್ತಿ ನೀನು, ಇವತ್ತೇನು, ಬಯಲ್ ಸೀಮೆ ಭಾಷೆ ಮಾತಾಡ್ತಾ ಇದೀಯಲ್ಲ, ಏನ್ ಕತೆ?" ಎಂದಾಗ,ಅವನು, "ಹಂಗೇನಿಲ್ರಿ, ಇಲ್ಲೇ ಬಿಸಿನೆಸ್ ಸಲವಾಗಿ, ಹುಬ್ಬಳ್ಳಿಗೆ ಬಂದಿದ್ದೆನ್ರಪಾ, ಹಂಗ ಹೋದಲ್ಲಿ ಬಂದಲ್ಲಿ ಅವರವರ ಭಾಷೇನ್ಯಾಗ ಮಾತಾಡಿದ್ರೆ, ಚಂದ ಇರತತಿ ನೋಡ್ರಿ, ಹಂಗಾಗಿ ನಾನು ಇಲ್ಲಿಯವರ ಕೂಡ ಇಲ್ಲಿಯವರ ಥರಾನ ಮಾತಾಡಕ್ ಪ್ರಯತ್ನ ಪಡ್ತೇನಿ, ನೋಡು!" ಎಂದ."ಹೌದು, ಸುಬ್ಬು... ಅದೇನೋ ಕಮಲ್ ಹಾಸನ್ ಹೇಳ್ಕೆ ಕೊಟ್ಟಾನಂತೆ..., ಏನ್ ಪ್ರಾಬ್ಲಮ್ ಇವರ್ದೆಲ್ಲಾ?" ಎಂದು ಪ್ರಶ್ನೆ ಮಾಡಿದ್ದಕ್ಕೆ..."ಅದರ ಕರ್ಮ ಏನ್ ಹೇಳ್ಳಿ ಬಿಡು?!" ಅವನೀಗ ರಾಜಕೀಯಕ್ಕೆ ಇಳಿಯೋಕ್ ಹೊಂಟಂಗ್ ಕಾಣುಸ್ತದ, ಅದಕ್ಕ ಬಾಯಿಗ್ ಬಂದಿದ್ದೆಲ್ಲ ಹೇಳ್ತಾನೋ ಏನೋ""ಅಲ್ಲೋ ಸುಬ್ಬು, ಕನ್ನಡ ಹುಟ್ಟಿದ್ ಹೇಗೆ, ಎಲ್ಲಿಂದ ಯಾರಿಂದ ಅನ್ನೋ ಉಸಾಬರಿ ಇವರಿಗೆಲ್ಲ ಯಾಕೆ?’"ಸರಿಯಾಗ್ ಹೇಳ್ದೆ ನೋಡು... ಮೊದಲು ಅವರವರು ತಮ್ ತಮ್ಮ ಅಪ್ಪಂದಿರಿಗೆ ಹುಟ್ಟಿದಾರೋ ಇಲ್ಲಾ ಅಂತ ಖಾತ್ರಿ ಮಾಡಕಂಬೇಕು... ಆಮೇಲೆ, ಅಪ್ಪನಿಗೆ ಹುಟ್ಟಿದ ಮಾತಾಡ್ಬೇಕು... ಸುಮ್ನೇ ನನಿಗ್ ಸಿಟ್ಟು ತರಿಸ್ಬ್ಯಾಡ... ಅವನೌವನ... ಅಕ್ಕ-ಪಕ್ಕದ ರಾಜ್ಯದೊಳಗ ಸಾವಿರಾರು ವರ್ಷದಿಂದ ಅಣ್ಣ-ತಮ್ಮಂದಿರಂತೆ ಇದ್ವೋಇಲ್ವೋ... ಆ ಒಂದು ಸೌಹಾರ್ದತೆಗೆ ಕಲ್ ಹಾಕೋಕ್ ಇವನಂತ ಒಬ್ಬ ಎಡಬಿಡಂಗಿ ಬೇಕಾಗಿತ್ತ ನಮಗ"...’ ’ಮೊದ್ಲು, ನಮ್ ಕನ್ನಡ ಮಂದೀಗೆ ಉಗೀಬೇಕು... ಇಂಥವರ ಸವಾಸದಿಂದ ದೂರ ಇರ್ರಿ ಅನ್ನಬಕು. ಅದನ್ನ ಬಿಟ್ಟು, ಅವರನ್ನ-ಇವರನ್ನ ಮ್ಯಾಲೆ ಏರಿಸ್ಕೊಂಡು ಕುಂತಾಗ ಇಂಥಾ ಮಾತು ಬರ್ತಾವ್ ನೋಡು... ಅದೇನೋ ಅಂತಾರಲ್ಲ... ನಾಯಿ ತಗೊಂಡು ಪಲ್ಲಕ್ಕಿ ಮ್ಯಾಲೆ ಕೂರಿಸಿದ್ರೆ, ಅದೇನೋ ಕಂಡಲ್ಲಿ ಹಾರಿತ್ತಂತಲ್ಲ... ಹಂಗಾತು ನೋಡು...ಅಲ್ಲ ಸುಬ್ಬು... ಹೀಗೆ ಒಂದು ಭಾಷೆಯ ಬುಡಕ್ಕೆ ಹೋಡೀಬೋದಾ? ಅವರಿಗಿರೋ ಅರ್ಹತೆಗಳಾದ್ರೂ ಏನೂ ಅಂತ?ಅದೇ ಬಂದಿರೋದು... ವೃತ್ತಿಯಿಂದ ನಟ... ತನ್ನ ತನ್ನ ಕಾರ್ಯಕ್ಷೇತ್ರದೊಳಗ ಏನಾರೂ ಒಂದಿಷ್ಟು ಸಾದ್ನ ಮಾಡ್ರಿ ಅಂತಂದ್ರ... ಇರಲಾರ್ದ ಇರವಿ ಬಿಟಗೊಂಡ್ರು ಅಂತಾರ್ ನೋಡು, ಹಂಗಾತು ಇವರ ಕತೆ... ಯಾರಿಗ್ ಬೇಕಿತ್ತು ಇದು?ಸುಬ್ಬು, ಏನ್ ಗೊತ್ತ... ಮೊದಮೊದಲು ಏನೋ ಒಂದು ಸ್ಟೇಟ್ಮೆಂಟ್ ಕೊಟ್ಟು, ಅಮ್ಯಾಲೆ ಅಪಾಲಜಿ ಕೇಳಿದ್ರೆ ಒಂಥರ ಎಲ್ಲ ಸುಮ್ನಾಗೋದು... ಒಂದು ಕಾಲದಲ್ಲಿ ರಾಜಾಜಿ ಅವರು ಮಾಡಿದ್ದೂ ಇದೇ ತಾನೆ?... ಈ ವಯ್ಯ... ಅಪಾಲಜಿ ಕೇಳೋದು ಬಿಟ್ಟು ಏನೋ ಲವ್ವಿನಾಗೆ ಹಂಗಂದೆ, ಅದರಗೇನು ತಪ್ಪೇ ಇಲ್ಲ ಅಂತಾನಲ್ಲ?ಏ ನಿಂಗೊತ್ತಿರೋ ವಿಚಾರನೇ ಬಿಡು, ಇದು... ಅವರದ್ದು ಭಾಷಾ ದುರಭಿಮಾನ, ಇವತ್ತು ನಿನ್ನೇದಲ್ಲ... ಒಂದಿಷ್ಟು ದಿನ ಕರ್ನಾಟಕದ ಕಡೆ ಬರೋ ಅವ್ರ ಬಸ್ಸು ರೈಲುಗಳನ್ನ ತಡೆದ್ರೆ, ಸುಮ್ನೇ ದಾರಿಬ್ ಬಂದೇ ಬರ್ತಾರ್ ಬಿಡು...ಹಂಗಾರೆ, Thug Life ರಿಲೀಸ್ ಆಗುತ್ತಾ ಬೆಂಗಳೂರ್ನಲ್ಲಿ?ಸಿಟ್ಟು ಬಂದಾಂಗಾಗಿ... ಸಿನಿಮಾದ ಹೆಸರಿನಾಗೆ ಗೊತ್ತಾತಲ್ಲ... ಇವರುಗಳು ಯಾರು ಅಂತ... ಇಂತ ಥಗ್ ಲೈಫ಼್ ಅನ್ನ ರಿಲೀಸ್ ಮಾಡೋಕ್ ಬಂದಿರೋ ಥಗ್ ನನ್ನ ಮಕ್ಳನ್ನ ತಗ್ ತಗೀದು ಹುಗೀಬಕು... ಅವಾಗ ಬುದ್ದಿ ಬರ್ತತಿ ನೋಡು...ಅವನ್ಯಾವನೋ ಸೀಮನ್ ಅನ್ನೋನು ’ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ" ಅಂತ ಅವನ ಬೆನ್ನಿಗೆ ನಿಂತಾರಂತಲ್ಲ... ಎಂದು ಹೇಳುತ್ತಿದ್ದಂತೆ,"ಬೆನ್ನಿಗಾರೂ ನಿಂತಗಳ್ಳಿ, ಹೊಟ್ಟಿಗಾರೂ ಒದಕೊಳ್ಳಿ... ಹೊಟ್ಟಿಗೆ ಅನ್ನ ತಿನ್ನೋ ಮನುಷ್ಯರ ಮಾತಾಡ್ಬೇಕು... ಈ ನನ್ ಮಕ್ಳಿಗೆ ವಿನಾಶಕಾಲೇ ವಿಪರೀತ ಬುದ್ಧಿ ಅಂತಾರಲ್ಲ... ಹಂಗೆ ಅವರ ಕೊಬ್ಬು ನೆತ್ತಿಗೇರೈತಿ... ಒಂದು ದಿನ ಬುದ್ಧಿ ಕಲಸಬಕು...""ಸರಿ ನನಗ ಕೈಲಸೈತಿ, ಈಗ... ಇಡಕಿಂತ ಮುಂಚೆ ಒಂದ್ ಮಾತ್ ಹೇಳ್ತೇನಿ... ಇವತ್ತೂ ಕನ್ನಡ ಮಂದಿ ಬುದ್ದಿ ಕಲೀಲಿಲ್ಲ ಅಂದ್ರ, ಇನ್ಯಾವತ್ತು ಕಲೀತಾರೋ ಗೊತ್ತಿಲ್ಲ... ತಮ್ಮ ತಮ್ಮ ಪ್ರಪಂಚದೊಳಗ ಇದ್ದಕೊಂಡು ಎಲ್ಲ ಚಂದೈತಿ ಅಂತ ಕನಸ ಕಾಣೋ ಹೊತ್ತಿಗೆ ಒಂದು ದಿನಾ ಇವರ್ದೆಲ್ಲಾ ಮುಂಡಾ ಮುಚ್ಚತೈತಿ... ಆಗ it will be too late...ತಿಳಕ... ಮತ್ತ ಮಾತಾಡ್ತೀನಿ... ಅಂತ ಫ಼ೋನ್ ಇಟ್ಟೇ ಬಿಟ್ಟ!ಅಯ್ಯೋ ಕನ್ನಡಿಗರ ಪರಿಸ್ಥಿತಿ ಈ ಮಟ್ಟಿಗೆ ಬಂತೇ... ಔದಾರ್ಯ, ಸಹೃದಯತೆ, ಸಮಬಾಳ್ವೆ, ಸಂಗೀತ-ಸಾಹಿತ್ಯ ಅಂತಾ ಒದ್ದಾಡೋ ನಮ್ಮನ್ನೆಲ್ಲ ದೇವ್ರೆ ಕಾಪಾಡ್ಬೇಕು, ಅಂತ ಹಣೆ ಮುಟ್ಟಿಕೊಂಡೆ.
-
54
ಮನೆಯು ಚಿಕ್ಕದಾಗಿರಬೇಕು (56)
ಮನೆಯು ಚಿಕ್ಕದಾಗಿರಬೇಕುಇವತ್ತು ನಮ್ಮ ಆಫ಼ೀಸಿನಲ್ಲಿ ಕೆಲ್ಸ ಮಾಡೋ ಕಾಂಟ್ರಾಕ್ಟರ್ ಒಬ್ಬರು, ಇನ್ನೇನು ಈ ತಿಂಗಳ ಕೊನೆಯಲ್ಲಿ ನನ್ನ ಕಾಂಟ್ರಾಕ್ಟ್ ಮುಗಿತಾ ಬಂತು, ಇನ್ನೂ ಬೇರೆ ಕೆಲ್ಸ ಸಿಕ್ಕಿಲ್ಲ. ಸುಮಾರು ಮೂರು ತಿಂಗಳಿನಿಂದ ಹುಡುಕುತ್ತಿದ್ದೇನೆ... ಇದೇ ರೀತಿ ಕೆಲ್ಸ ಸಿಗದೇ ಹೋದರೆ, ಮನೆ ಸಾಲ, ಕಾರು ಸಾಲ ಎಲ್ಲ ಕಟ್ಟೋದು ಯಾವಾಗ ಎಂದು ಸಂಕಟ ಪಡುತ್ತಿದ್ದ. ಅಯ್ಯೋ ಎಂದು ಮರುಕಗೊಂಡು, ಅವನ ಸುಖ-ದುಃಖಗಳನ್ನು ವಿಚಾರಿಸಿಕೊಳ್ಳುತ್ತಿದ್ದಂತೆ, ಅವನ ಮನೆ ಸಾಲ ಮತ್ತು ಕಾರಿನ ಬಾಬ್ತು ಅವನ ಒಂದು ತಿಂಗಳಿನ (ಈಗ ಬರುತ್ತಿರುವ) ಸಂಬಳದ ಬಹು ಭಾಗವನ್ನು ನುಂಗಿ ಹಾಕುತ್ತಿದ್ದವು. ಇಷ್ಟು ದೊಡ್ಡ ಮನೆ ಏಕೆ ತೆಗೆದುಕೊಂಡೆ ಎಂದಾಗ ಅವನಲ್ಲಿ ಉತ್ತರ ಇರಲಿಲ್ಲ.ಮನೆ ತೆಗೆದುಕೊಳ್ಳುವುದು ಒಂದು ಬಹಳ ಮುಖ್ಯವಾದ ಡಿಸಿಶನ್, ಅದೂ ಈಗಿನ ದುಬಾರಿಯಾದ ಕಾಲದಲ್ಲಂತೂ ಮನೆ ಕೊಳ್ಳುವುದು ಬಹಳ ಕಷ್ಟದ ವಿಷಯ ಕೂಡ. ಎಲ್ಲ ಮನೆಗಳ ಮಾರಾಟದ ಬೆಲೆ ಒಂದೆರಡು ವರ್ಷಗಳ ಹಿಂದಿನ ಬೆಲೆಗೆ ಹೋಲಿಸಿದರೆ, ಕನಿಷ್ಟ ಪಕ್ಷ ಒಂದು 20% ಆದರೂ ಮೇಲೆ ಹೋಗಿದೆ. ಈಗಿನ ಪರಿಸ್ಥತಿಯಲ್ಲಿ ಒಂದು ಅಪಾರ್ಟ್ಮೆಂಟ್ ರೆಂಟು ತೆಗೆದುಕೊಳ್ಳಲು ಅಡ್ಡಿ ಇಲ್ಲ. ಅದರ ಬೆಲೆಯೂ ಹೆಚ್ಚೇ ಆಗಿದೆ.ಈ ಸಂದರ್ಭದಲ್ಲೇ ನೆನಪಿಗೆ ಬಂದದ್ದು: "ಮನೆಯು ಚಿಕ್ಕದಾಗಿರಬೇಕು, ಮನಸ್ಸು ದೊಡ್ಡದಾಗಿರಬೇಕು" ಎನ್ನುವ ಜಾಣ್ಣುಡಿ.***ನಾನು ಯಾವಾಗಲೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಬಂದಿದ್ದೇನೆ:- ಜನರು ತಮ್ಮ ಅಗತ್ಯಕ್ಕಿಂತಲೂ ಹೆಚ್ಚು ದೊಡ್ಡ ಮನೆಗಳನ್ನು ಏಕೆ ಕೊಳ್ಳುತ್ತಾರೆ.- ಫ಼್ಯಾಮಿಲಿಯ ಸೈಜು ಕಡಿಮೆ ಆದಂತೆ, ಕೆಲವರ ಮನೆ ಅವರ ಶ್ರೀಮಂತಿಕೆಯನ್ನು ಸಾರುವಂತೆ ದೊಡ್ಡದಾಗುತ್ತಲೇ ಹೋಗುತ್ತದೆ.- ಜನರು in general, ಯಾಕೆ ದೊಡ್ಡ ಮನೆಗಳನ್ನು ತೆಗೆದುಕೊಳ್ಳುತ್ತಾರೆ?***In this episode, I explore why people desire bigger homes and how this ties into wealth, examining both behavioral motivations and economic realities. I also compare how the home size varies from country to country.
-
53
Are you an empty nester? What to do next?
ಕೆಲವು ದಿನಗಳ ಮುಂಚೆ ನಾನು, Are you an empty nester? How do you feel?ಅನ್ನೋ ಒಂದು ಎಪಿಸೋಡ್ ಅನ್ನ ರಿಕಾರ್ಡ್ ಮಾಡಿದ್ದೆ.ಈ ಎಪಿಸೋಡನ್ನ ಅದರ ಒಂದು ಮುಂದುವರಿದ ಭಾಗ ಅನ್ನಬಹುದು.ಇವತ್ತಿನ ವಿಚಾರದಲ್ಲಿ, attachment, connection, relationship, communication, parenting ಅನ್ನೋ ಪದಗಳು ಹೆಚ್ಚಾಗಿ ಕೇಳಿ ಬರುತ್ತವೆ. But, at the same time, ನಾವು ಬದುಕಿನ ಒಂದು ಮುಂದುವರೆದ ಭಾಗದಲ್ಲಿ ಹೇಗೆ ಬದುಕಬಹುದು ಅನ್ನೋದರ ಬಗ್ಗೇನೂ ಒಂದಿಷ್ಟು ಅನಿಸಿಕೆಗಳನ್ನ ಹಂಚಿಕೊಳ್ಳುತ್ತೇನೆ.***First take care of yourself, then everything else will follow... ಅನ್ನೋದು ಇವತ್ತಿನ ಚಿಂತನೆಯ ತಾತ್ಪರ್ಯ!
-
52
ನಾವೇಕೆ ಹೀಗೆ!? (54)
ನಾವೇಕೆ ಹೀಗೆ!?In this episode I share my experience how Kannadigas behave in a group set up. How do they get together as friends/family - speaking the native tounge, etc.ಕನ್ನಡಿಗರಿಗೆ ಏನು ಇಷ್ಟ? ಪಾರಮಾರ್ಥದ ಮೇಲೆ ಹೆಚ್ಚಿನ ಪ್ರೀತಿ? ಸಾಹಿತ್ಯ, ಸಂಗೀತ, ಆಧ್ಯಾತ್ಮ, ಇತರ high value assets ಮೇಲೆ ನಮ್ಮ ಪ್ರೀತಿ.The demand for a unified Kannada-speaking state gained momentum in the early 20th century, with activists like Aluru Venkata Rao advocating for linguistic and cultural consolidation. Organizations such as the Karnataka Vidyavardhaka Sangha (founded in 1890) and the Kannada Sahitya Parishat (established in 1915) played a crucial role in fostering Kannada identity and pushing for unification.By the 1940s and 1950s, political leaders like S. Nijalingappa and others intensified efforts, leading to the eventual reorganization of states based on linguistic demographics in 1956. The movement, therefore, took over 60 years from its early beginnings to its successful realization.ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರು:ಆಲೂರು ವೆಂಕಟರಾಯರುಅನ ಕೃಷ್ಣರಾಯರುನಿಜಲಿಂಗಪ್ಪನವರುಕೋಣಂದೂರು ಲಿಂಗಪ್ಪನವರುಎಂ. ರಾಮಮೂರ್ತಿನಾಡಿಗೇರ್ ಕೃಷ್ಣರಾವ್ಕನ್ನಡ ರಾಜ್ಯೋತ್ಸವ ದಿನ:November 1, 1956ಬೆಂಗಳೂರಿನವರ ಸಂವೇದನೆಗಳಿಗೂ, ಬೆಂಗಳೂರೇತರರ ಸಂವೇದನೆಗಳಿಗೂ ಬಹಳ ವ್ಯತ್ಯಾಸವಿದೆ.ಯಕ್ಷಗಾನ - ರಾತ್ರಿ ಇಡೀ, ಬದಲಿಗೆ, ಎರಡು ಮೂರು ಘಂಟೆ.ಹಳ್ಳಿ-ಪಟ್ಟಣ-ಪೇಟೆಗಳ ನಡುವಿನ ವ್ಯತ್ಯಾಸಗಳು ನಮ್ಮನ್ನು ಬೇರೆ ರೀತಿಯಲ್ಲಿ ಕನೆಕ್ಟ್ ಮಾಡಿಸುತ್ತವೆ.
-
51
ಹೇಳುವುದು ಮುಖ್ಯವೋ ಮಾಡುವುದು ಮುಖ್ಯವೋ? (53)
ಹೇಳುವುದು ಮುಖ್ಯವೋ ಮಾಡುವುದು ಮುಖ್ಯವೋ?ಹೇಳುವುದು ಒಂದು ಮಾಡುವುದು ಇನ್ನೊಂದು ಅನ್ನೋ ಜನಪ್ರಿಯ ಹಾಡನ್ನ ಕೇಳಿರಬೇಕಲ್ವ?ಅದೇ ಥರ ಆಚಾರ ಹೇಳೋದು, ಬದನೇ ಕಾಯಿ ತಿನ್ನೋದು ಅಂತಲೂ ಇವೆ.ನಮ್ಮ ಆಫ಼ೀಸುಗಳಲ್ಲಿ, ಎಲ್ಲರೂ AI ವಿಚಾರಕ್ಕೆ ಬಂದರೆ ಹಾರಾಟ ಮಾಡುವವರೆ... ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ ಅಂತ ಎಗರಾಡ್ತಾನೇ ಇರ್ತಾರೆ.ಈಗಂತೂ ಯಾವ್ದೇ ಮೀಟೀಂಗ್ ತಗೊಳ್ಳಿ, ಅದು AI ಇಂದ ಆರಂಭವಾಗಿ AI ಇಂದ್ಲೇ ಕೊನೆ ಆಗುತ್ತೆ ಅಂತ ಹೇಳ್ಬೋದು.innovation: ಹೊಸ ಕಲ್ಪನೆ, ನಾವೀನ್ಯ, ಹೊಸಶೋಧ***ಹೀಗೆ ಮಾತು ಮತ್ತು ಕೃತಿಯ ವಿಚಾರಕ್ಕೆ ಬಂದ್ರೆ, ಯಾವಾಗ್ಲೂ ನಾವು ಆಡೋ ಮಾತು ಅಥವಾ ಬರೆಯೋ ಬರವಣಿಗೆಗೂ ಹಾಗೂ ನಾವು ಅದರಲ್ಲಿ ಎಷ್ಟು ವಿಚಾರಗಳನ್ನ ಕಾರ್ಯಶೀಲಗೊಳಿಸಿದ್ದೇವೆ ಅನ್ನೋದಕ್ಕೂ ಬಹಳ ವ್ಯತ್ಯಾಸಗಳಿರುತ್ವೆ.
-
50
ಝಣ ಝಣ ಕಾಂಚಾಣ (52)
ಝಣ ಝಣ ಕಾಂಚಾಣಅಬ್ಬಾ, ಅದೇನು ದುಡ್ಡಿನ ಮಹಿಮೆ ಅಂತ ಅನ್ನಿಸಿದ್ದು... ನಿನ್ನೆ ಸ್ಟಾರ್‌ಬಕ್ಸ್‌ನಲ್ಲಿ ಒಂದು ಕಪ್ ಕಾಫ಼ಿ ತೆಗೆದುಕೊಂಡಾಗ.ಮೊದಲೆಲ್ಲ ಆದ್ರೆ, ಜೇಬಿನಿಂದ ಪರ್ಸು ತೆಗೆದು, ಅದರಲ್ಲಿರೋ ಹಣ ಎಣಿಸಿ ಕೊಡ್ತಿದ್ವಿ. ನಂತರ ಆ ಪ್ರಕ್ರಿಯೆ ಮುಂದುವರೆದು, ಅದೇ ಜೇಬು-ಪರ್ಸುಗಳಿಂದ ಕ್ರೆಡಿಟ್ ಕಾರ್ಡ್ ಕೊಡೊದಕ್ಕೆ ಶುರು ಮಾಡಿದ್ವಿ.ಈಗ ಎಲ್ಲಿ ಹೋದ್ರು ಎಲ್ಲ ಸೈಲೆಂಟಾಗಿ, ಎಲ್ಲವೂ ಫ಼ೋನ್‌ನಲ್ಲೇ ನಡೆದು ಹೋಗುತ್ತೆ. ಆದ್ರೆ, point of sale ನ ಚಂಗ್ ಚಿಂಗ್ ಸೌಂಡಿಗೆ ಬದಲಾಗಿ ಈಗ ಟಿನ್ ಅನ್ನುವ ಫ಼ೋನ್ ಸದ್ದು ಕೇಳುತ್ತೆ.ನಿಮಗ್ಗೊತ್ತಾ ನಮ್ಮ ಆಫ಼ೀಸಿನಂತೆಯೇ ಎಷ್ಟೋ ಕಡೆ ಎಲ್ಲವೂ ಕ್ಯಾಶ್‌ಲೆಸ್ ಆಗಿದೆ ಅಂತ?ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇರುವ ಮುಖ್ಯ ವ್ಯತ್ಯಾಸಗಳಲ್ಲಿ ಅವರು ಖರ್ಚು ಮಾಡುವ ದುಡ್ಡಿನ ಪ್ರಮಾಣವೂ ಸೇರುತ್ತೆ. ನಾನು ಇನ್ಫ಼್ಲೇಷನ್ ಇರೋದ್ರಿಂದ ಹೆಚ್ಚು ಖರ್ಚು ಆಗುತ್ತೆ ಅಂತ ಹೇಳ್ತಾ ಇಲ್ಲ, ಅದರ ಜೊತೆಗೆ ಒಟ್ಟು ಖರ್ಚಿನ ಪ್ರಮಾಣವೇ ಹೆಚ್ಚು.
-
49
ಇಂಡಿಯಾ ಸೋತು ಹೋಯ್ತಂತೆ?! (51)
ಈಗೆಲ್ಲ ಎಲ್ಲಿ ನೋಡಿದ್ರೂ, ಕೇಳಿದ್ರೂ ಇಂಡಿಯಾ-ಪಾಕಿಸ್ತಾನದ ಯುದ್ಧ, ಯುದ್ಧ ವಿರಾಮಗಳ ಬಗ್ಗೆಯೇ ಮಾತು?ಏಪ್ರಿಲ್ 22 ರಂದು ಹಿಂದೂ ಪ್ರವಾಸಿಗರ ವಿರುದ್ಧ ನಡೆದ ಭಯೋತ್ಪಾದಕ ಕೃತ್ಯಕ್ಕೆ ಭಾರತ ಮೇ 8 ರಂದು ಹಲವಾರು ಕ್ಷಿಪಣಿಗಳನ್ನು ಲಾಂಚ್ ಮಾಡಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ದ್ವಂಸ ಮಾಡಲಾಯಿತು.ಈ ಸಂಬಂಧ ಯಾವ ಮೀಡಿಯಾಗಳನ್ನು ನಂಬಬೇಕು, ಬಿಡಬೇಕು ಎಂದು ಗೊತ್ತಾಗುತ್ತಿಲ್ಲ... Al Zajeera, CNN, India, Pakistan news ಮೀಡಿಯಾಗಳನ್ನೆಲ್ಲ ನೋಡಿದರೆ ಎಲ್ಲ ಕಡೆಗೂ conflicts ಕೇಳಿ ಬರುತ್ತಿವೆ.ನಿನ್ನೆ, ಅಂದ್ರೆ ಮೇ 10ಕ್ಕೆ ಅಮೇರಿಕ ಮಧ್ಯ ಪ್ರವೇಶಿಸಿ, Ceasefire agreement ಅನ್ನು ಘೋಷಿಸಿತು... ತದನಂತರ, ಪಾಕಿಸ್ತಾನ ಇನ್ನೂ ಆಕ್ರಮಣ ಮಾಡುತ್ತಲೇ ಇರುವುದು ಕೇಳಿ ಬರುತ್ತಿದೆ.
-
48
ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ (#50) Chat GPT, What do you know?
ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳChat GPT, What do you know?ಹೀಗಂತ ಅನ್ಸಿದ್ದು ಇತ್ತೀಚೆಗೆ ಎಲ್ಲ ಕಡೆಗೆ AI ಯ ಹಾವಳಿಯನ್ನು ನೋಡಿ.ನಮ್ಮ ಆಫ಼ೀಸುಗಳಲ್ಲೆಲ್ಲ AI ಯ ಹಾವಳಿಯ ಜೊತೆ ಜೊತೆಗೆ ಅನೇಕ ಅನಾಹುತ, ಅವಾಂತರಗಳೂ ಹೆಚ್ಚಾಗಿ ಕಾಣತೊಡಗಿವೆ. ಮೊದಮೊದಲು ನಿಧಾನವಾಗಿ ಚಾಟ್ GPT ಅಂತ ಶುರುವಾಗಿದ್ದು, ನಂತರ Copilot ಆಗಿ, ಮುಂದೆ Gemini ಆಗಿ, ಎಲ್ಲವೂ ಒಟ್ಟೊಟ್ಟಾಗೇ ಕಾಡತೊಡಗಿವೆ.ಅಲ್ಲ, ಈ AI engine ಗಳು ಮಾಡದ್ದೇನಾದರೂ ಇದೆಯೇ? ಕೇಳಿದ ಎಲ್ಲ ಪ್ರಶ್ನೆಗಳಿಗೂ ಬ್ರಹ್ಮಾಂಡದ ಎಲ್ಲ ಉತ್ತರಗಳೂ ತಮ್ಮ ಮಡಿಲಿನಲ್ಲೇ ಇದೆ ಎಂದು ಬೀಗುವ ಈ ತಂತ್ರಜ್ಞಾನಗಳಿಗೆ ಮಿಗಿಲಾದದ್ದೂ ಏನಾದರೂ ಇದೆಯೇ ಎಂದು ಯೋಚಿಸತೊಡಗಿದಾಗ ಅನೇಕ ವಿಚಾರಗಳು ಮನಸ್ಸಿಗೆ ಬಂದವು.ಹೀಗೆ, ಊಟ, ತಿಂಡಿ, ರುಚಿ, ವಾಸನೆಗೆ ಮೊದಲಾದ ಅನೇಕ ಗ್ರಹಣ, ಸ್ಪರ್ಶಾದಿ ವಿಷಯಗಳನ್ನು, "ಅನುಭವಿಸಿಯೇ" ನೋಡಬೇಕೇ ವಿನಾ ಅದರ ಬಗ್ಗೆ ಬರೆದು-ಓದಿ ತಿಳಿದುಕೊಳ್ಳಲಾಗದು. ಹಾಗಿದ್ದಾಗ, ಸ್ಪರ್ಶ-ಗ್ರಹಣಾದಿ, ರುಚಿಗೆ ಸಂಬಂಧಿಸಿದ ಅಭಿರುಚುಯೇ ಇಲ್ಲದ ಚಾಟ್ GPT, Copilot, Gemini ಗಳಿಗೆ ಏನು ಗೊತ್ತು? ಇವುಗಳ ಬಗ್ಗೆ... ಒಂದು ರೀತಿಯಲ್ಲಿ, ಕತ್ತೆಗೇನು ಗೊತ್ತು, ಹೊತ್ತ ಕಸ್ತೂರಿಯ ಪರಿಮಳ ಎನ್ನಬಹುದೇ?ಇನ್ನು ಎಲ್ಲರೂ ಮಾಡುವುದು ಬಟ್ಟೆಗಾಗಿ, ಹೊಟ್ಟೆಗಾಗಿ ಎಂದು ಹೇಳಿದ ದಾಸರೇ ಕೊನೆಯಲ್ಲಿ ಮುಕ್ತಿಗಾಗಿ, ಆನಂದಕ್ಕಾಗಿ ಅಂತ ಹೇಳಿದ್ದಾರಲ್ಲ... ಪಾಪ, ಈ GPT ಗಳಿಗೆ ಇವು ಯಾವುದೂ ಇಲ್ಲವೇ ಇಲ್ಲ!ಹಾಗಾಗಿ, ಎಲ್ಲಿಯವರೆಗೆ ನಲಿಯುವ ಮನವಿರುತ್ತದೋ, ಒಲಿಯುವ ಹೃದಯವಿರುತ್ತದೋ, ಕಲಿಯುವ ಛಲವಿರುತ್ತದೋ, ಆಹ್ಲಾದಿಸುವ ಭಾವನೆ ಇರುತ್ತದೆಯೋ, ಅಲ್ಲಿಯವರೆಗೆ Human beings are needed!ಈ GPT ಗಳು ಎಷ್ಟು ಬೇಕಾದರೂ ಬರಲಿ... ಅದರಂಥ ಕತ್ತೆಗಳಿಗೇನು ಗೊತ್ತು, ಹೊತ್ತ ಕಸ್ತೂರಿಯ ಪರಿಮಳ.
-
47
ದುಡ್ಡೇ ಇಲ್ಲ! ದುಡ್ಡೇ ಎಲ್ಲ!!
ದುಡ್ಡೇ ಇಲ್ಲ! ದುಡ್ಡೇ ಎಲ್ಲ!!(ಇಂದು ಶುಕ್ರವಾರ, ಇನ್ನೇನು ಲಕ್ಷ್ಮಿ ಮನೆ ಒಳಗೆ ಬರಬೇಕು ಅನ್ನೋ ಹೊತ್ತಿಗೆ ಇದೆಂಥಾ ಅಪಸ್ವರ??)ಎಲ್ಲರಿಗೂ ದುಡ್ಡು ಬೇಕು, ಆದ್ರೆ, ಯಾರ ಹತ್ರನೂ ದುಡ್ಡೇ ಇಲ್ಲ... ಅಂತ ಅನ್ನಿಸಿದ್ದು ಇತ್ತೀಚೆಗೆ.ಇನ್ನೂ ಏಪ್ರಿಲ್ ಮುಗಿದು ಮೇ ಶುರುವಾಯ್ತು ಅನ್ನೋದೇ ತಡ, ನಮ್ಮ ಆಫ಼ೀಸಿನಲ್ಲಿ ಎಲ್ಲರೂ ಒಂಥರಾ ಥಕಧಿಮಿ ಥಕಜಣು ಅಂತ ಕುಣಿಯೋಕೆ ಸ್ಟಾರ್ಟ್ ಮಾಡಿದ್ದಾರೆ. ಇನ್ನೂ ಎರಡೂ ತಿಂಗಳು ಬೇಕು ಈ ಕ್ವಾರ್ಟರ್ ಮುಗಿಯೋಕೆ, ಈಗಲೇ ಏಕೆ ಇವರಿಗೆ ಇಷ್ಟೊಂದು ಅವಸರ? ದುಡ್ಡಿಲ್ಲ ಅಂಥ ಒಂದ ಕಡೆ ಮರುಗ್ತಾರೆ, ಮತ್ತೊಂದ್ ಕಡೆ, ಮುಂದಿನ ವರ್ಷದ ಬಜೆಟ್ ಪ್ಲಾನ್ ಮಾಡೋಣ ಅಂತಾನೂ ಹಾರಾಡ್ತಾರೆ! Can you beleive it?ನಾವು ಇರೋದು, ಕ್ಯಾಪಿಟಲಿಸಮ್ಮಿನ ಮಹಾ ಸಮುದ್ರದಲ್ಲಿ... ಇಲ್ಲಿ ಕುತಗೊಂಡು ನಾವ್ ಹಿಂಗ್ ಯೋಚನೆ ಮಾಡ್ತೀವಿ ಅನ್ನೋ ಕಾರಣಕ್ಕೇನೆ ಅಡಿಗರು "ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಅಂತ ಪದ್ಯ ಬರೆದಿದ್ದು ಅಂತ ಕಾಣ್ಸುತ್ತೆ.ಈ ಕಡಲಿನಲ್ಲಿ ಉಬ್ಬರ-ಇಳಿತಗಳಲ್ಲಿ, ಆಗಾಗ್ಗೆ ಮೂಡೋ ನಮ್ಮ ಮುಖದ ಮೇಲಿನ ನಗೆ, ಹಾಯಿ ದೋಣಿ ಅಲ್ಲ, ಒಂದು ಪೇಪರಿನ ದೋಣಿ ಅಷ್ಟೇ!ಏನೀ ಕ್ಯಾಪಿಟಲಿಸಮ್ಮಿನ ಮರ್ಮ? ಇದ್ಯಾಕೆ ಹಿಂಗೆ ಇವುಗಳು ತಲೆ ಕೆಟ್ಟೋರ್ ಥರ ಆಡ್ತಾವೇ ದುಡ್ಡೂ ದುಡ್ಡೂ ಅಂತ ಯೋಚಿಸ್ಕೊಂಡಷ್ಟೂ ವಿಷ್ಯ ಗಂಭೀರವಾಗ್ತಾನೇ ಹೋಗತ್ತೆ.ಕ್ಯಾಪಿಟಲಿಸಮ್ಮಿನ ಮರ್ಮ ಅಂದ್ರೆ key traits ಏನು ಅಂತ ಗೊತ್ತಾ, ನಿಮಗೆ? ದುಡ್ಡು, ದುಡ್ಡು, ದುಡ್ಡು!ಅದನ್ನ ಇಲ್ಲಿನ ಪರಿಭಾಷೆಯಲ್ಲಿ ಹೇಳೋದಾದ್ರೆ, Profit motive, Competition, Capital accumulation & investment in expectation of more return ಅಂತ ಸರಳವಾಗಿ ಹೇಳ್ಬಹುದು.ಒಂದು ಕಂಪನಿ... ಹೇಗೆ ಹುಟ್ಟುತ್ತೆ? ಅದು ಹೇಗೆ ಬೆಳೆಯುತ್ತೆ?ಇಂಥಾ ಕಂಪನಿಯನ್ನು ಹುಟ್ಟು ಹಾಕ್ದೋರು, ಇಂಥಾ ಕಂಪನಿಗಳಲ್ಲಿ ಕೆಲ್ಸ ಮಾಡೋರು ಅಂತಂದ್ರೆ ಯಾರು, ಅವರು ಏನ್ ಮಾಡ್ತಾರೆ? ಅಷ್ಟೆಲ್ಲ ದುಡ್ಡ್ ಕೂಡ್ ಹಾಕ್ಕೊಂಡು ಅಂದ್ರಿಂದ ಏನ್ ಕಡೀತಾರೆ?Plutocrats – Individuals who wield power primarily due to their immense wealth. They influence policies and economies through financial means.ನಮ್ಮ ಭಾರತ ದೇಶದಲ್ಲಿ ಲಂಚ ಮಾತ್ರ ಇದೆ ಅಂತ ಅಂದುಕೋ ಬೇಡಿ...The main difference between an aristocracy, plutocracy, and oligarchy is in the group that holds political power. A more detailed comparison between these government systems is given here, along with a few modern and historical examples, for a better understanding.Aristocrats – Members of the traditional elite, often from noble families. Aristocracy is historically linked to hereditary privilege.Oligarchs – A small group of powerful individuals who control a country or organization, often through wealth, political connections, or military influence.Technocrats – Experts or specialists who hold power based on their technical knowledge rather than wealth or lineage.Meritocrats – Leaders who rise to power based on ability and achievement rather than inheritance.
-
46
#48: ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು?
ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು?ಈ ಪ್ರಶ್ನೆ ಅಲ್ಲಿ ಸೇರಿದ್ದ ಉದಯೋನ್ಮುಖ ಲೀಡರುಗಳಿಗೆಲ್ಲ ಕೇಳುತ್ತಾ ಬಂದಾಗ, ಎಲ್ಲರೂ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಎಂತೆಲ್ಲ ಹೆಸರುಗಳನ್ನು ಹೇಳುತ್ತಾ ಬಂದಾಗ, ನನ್ನ ಸರದಿ ಬಂತು!ನಾನೆಂದೆ My Mother!Excuse me... ಅಂದ, ಯೆಸ್, ಮೈ ಮದರ್ ಎಂದೆ.That's nice, we don't hear examples as often... but would you care to explain... ಎಂದ.ನಾನು ಅದಕ್ಕೆ, how much time do we have? ಎಂದೆ ನಗುತ್ತಾ... ಚುಟುಕಾಗಿ, ಕೆಲವೊಂದು ಲೀಡರ್‌ಶಿಪ್ ಟ್ರೈಟ್ಸ್‌ಗಳನ್ನು ಹೆಸರಿಸಿ, ಅವೆಲ್ಲದರಲ್ಲಿ ನನ್ನ ಅಮ್ಮ ಅದು ಹೇಗೆ ದೊಡ್ಡ ನಾಯಕಿ ಆಗಿದ್ದಳು ಎಂದು explain ಮಾಡಿದೆ.***ನಾವೆಲ್ಲ ಅಮೇರಿಕದಲ್ಲಿ ಎಷ್ಟೆಲ್ಲ ಸವಲತ್ತು-ಸಂಪನ್ಮೂಲಗಳು ಇದ್ದು, ಇಬ್ಬರು ಮಕ್ಕಳ ಪೋಷಣೆಯನ್ನು ಮಾಡಿಕೊಂಡು ಹೋಗಬೇಕಾದರೆ, ಸಾಕು ಬೇಕಾಗಿ ಹೋಗಿರುತ್ತದೆ... ಅಂಥದ್ದರಲ್ಲಿ, ಮನೆ ತುಂಬ ಮಕ್ಕಳನ್ನು ಅದು ಹೇಗೆ ನನ್ನ ಅಮ್ಮ ಸಂಬಾಳಿಸುತ್ತಿದ್ದಳು? ಎಂದು ಯೋಚಿಸಿದಾಗ ಆಶ್ಚರ್ಯವಾಗದೇ ಇನ್ನೇನು?My mother is my biggest inspiration and she is no less than any of the leaders that I admire most for she had all the key traits of a big a great leader!
-
45
#47: ಶಾಂತಿ ಕದಡಿದ ಶಾರದೆಯ ನಾಡು
ಈ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಹತ್ತಿರದಲ್ಲಿನ ಬೈಸರನ್ ಎಂಬ ಪ್ರವಾಸಿ ಸ್ಥಳದಲ್ಲಿ ಮುಸ್ಲಿಮ್ ಭಯೋತ್ವಾದಕರ ಸಂಘಟನೆ ಒಂದು ಆಯೋಜಿತವಾದ ಮತ್ತು ಹೇಯವಾದ ಧಾಳಿಯನ್ನು ನಡೆಸಿ 26 ಮಂದಿ ಹಿಂದೂ ಪ್ರವಾಸಿಗಳನ್ನು ಬಲಿ ತೆಗೆದುಕೊಂಡಿರುವ ವಿಷಯ ವಿಶ್ವದಾದ್ಯಂತ ತಲ್ಲಣವನ್ನು ಮೂಡಿಸಿದೆ.ಎಲ್ಲರಿಗೂ ಗೊತ್ತಾಗಲೀ ಎಂದೇ ನಡೆಸಿದ ಈ ಕ್ರೂರವಾದ ಧಾಳಿಯ ಹಿಂದೆ ಟಿ.ಆರ್.ಎಫ಼್. ಎಂಬ ಗುಂಪು ದುಷ್ಕೃತ್ಯವನ್ನು ಎಸೆಗಿದ್ದಷ್ಟೇ ಅಲ್ಲದೇ ಸಾರಾಸಗಟಾಗಿ ಇದರ ಕೈವಾಡ ತನ್ನದೇ ಎಂದು ಬಹಿರಂಗ ಹೇಳಿಕೆಯನ್ನು ನೀಡಿರುವುದು ಭಾರತ ದೇಶವನ್ನು ಮುಜುಗರಕ್ಕೀಡು ಮಾಡಿದೆ. ಕಳೆದ ಹತ್ತು ವರ್ಷಗಳಿಂದ ನಿಧಾನವಾಗಿ ಸಹಜತೆ (normalcy) ಗೆ ಮರಳುತ್ತಿದ್ದ ಶಾರದೆಯ ನಾಡು, ಇಂದು ಮತ್ತೆ ಅದೇ ಹಿಂದಿನ ಗೊಂದಲವನ್ನು ಎಲ್ಲರಲ್ಲೂ ಮೂಡಿಸಿದೆ. ಈ ನಿಟ್ಟಿನಲ್ಲಿ, ಆ ಆಯೋಜಿತ ಭಯೋತ್ಪಾದಕತೆ ಕೃತ್ಯ, ಜಯಶೀಲವಾಗಿದೆ. ಇನ್ನು ಪ್ರವಾಸಿಗಳಿರಲಿ, ಸ್ಥಳೀಯರೂ ಈ ಸ್ಥಳಗಳಲ್ಲಿ ಮುಕ್ತವಾಗಿ ಓಡಾಡಲು ಅನೇಕ ವರ್ಷಗಳೇ ಹಿಡಿಯುತ್ತದೆ.***ಈ ಸಾವು-ನೋವುಗಳಿಗೆ ಸರಿಯಾದ ಪಾಠ ಕಲಿಸಿ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ದೇಶದಾದ್ಯಂತ ಈ ರೀತಿಯ ಘಟನೆಗಳು ಮರುಕಳಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ತಾವು ಅಲ್ಪಸಂಖ್ಯಾತರು ಎನ್ನುವ ಸೋಗಿನಲ್ಲಿ, ದೇಶದ ಅಭದ್ರತೆಯ ಮೂಲಕಾರಣವಾಗಿ ಯಾರೇ ಇದರ ಸೂತ್ರಧಾರರಿದ್ದರೂ, ಅವರಿಗೆಲ್ಲ ತಕ್ಕ ಉತ್ತರವನ್ನು ಕೊಡುವ ಸಮಯ ಬಂದಿದೆ. ಭಾರತ ದೇಶದ ಸತ್ವವನ್ನು ಪರೀಕ್ಷಿಸುವ ಈ ಸಮಯದಲ್ಲಿ, ಬಲ-ಕುಶಲ-ಸಾಹಸಗಳಿಂದ ಇಂದು ಪೂರ್ಣ ದೇಶವೇ ಈಸಬೇಕು, ಇದ್ದು ಜೈಸಬೇಕು! ಈ ಸಂದರ್ಭದಲ್ಲಿ ಭಾರತ ದೇಶ ಕೈಗೊಳ್ಳುವ ಎಲ್ಲ ನಿಲುವುಗಳನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಸಮರ್ಥಿಸುತ್ತಾರಾದರೂ, ಪ್ರತಿಕ್ರಿಯೆಯ ಹೆಸರಿನಲ್ಲಿ forever ಸಮಯ ಸಿಗೋದಿಲ್ಲ. ಕಬ್ಬಿಣ ಕಾದಿದೆ, ಅದನ್ನು ಜಾಗರೂಕತೆಯಿಂದ ಬಡಿದುಕೊಂಡು ಶಾಂತಿಗೆ ಅನುಕೂಲವಾಗುವ ಆಯುಧವನ್ನು ಮಾಡಿಕೊಂಡಿದ್ದೇ ಆದರೆ, ಶಾರದೆಯ ನೆಲದಲ್ಲಿ, ಮತ್ತೆ ಶಾಂತಿ ಮೂಡಬಹುದು, ಎನ್ನುವ ಆಶಾವಾದ ನಮ್ಮದೆಲ್ಲರದು!
-
44
#46: I miss cubicles... do you?
ಕ್ಯೂಬಿಕಲ್ಸ್ ಅಂಥ ಒಂದಾನೊಂದು ಕಾಲದಲ್ಲಿ ಇರ್ತಾ ಇದ್ವು, ನೆನಪಿದೆಯಾ?ಅವೆಲ್ಲ ಈಗ, ಸ್ಟ್ಯಾಂಡಿಂಗ್ ಡೆಸ್ಕ್‌ಗಳಾಗಿ ಕನ್ವರ್ಟ್ ಆಗಿವೆ.ಆದ್ರೆ, I really miss the old ones... they used to offer us so much personal, personalizable space, but not anymore.These standing desks, or so called, mobile desks... ಒಂಥರಾ... ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಅನ್ನೋ ಅಪರಾವತಾರ ತಾಳಿದ ಜಾತಿಯವು.ಎಲ್ಲೋ ಯಾವ್ದೋ ಮುಂದುವರಿದ ಕಂಪನಿಗಳಲ್ಲಿ Standing Desks ಕೆಲಸ ಮಾಡೋಕೆ, collaboration ಮಾಡೋಕೆ ಸುಲಭ ಆಗುತ್ತೇ ಅಂದಾಕ್ಷಣ, ಅದು ಎಲ್ಲರಿಗೂ ಎಲ್ಲ ಕಂಪನಿಗಳಲ್ಲೂ ಅಪ್ಲೈ ಆಗಬೇಕು ಅಂತೇನೂ ಇಲ್ಲ.ನಿಮಗೇನ್ ಅನ್ಸತ್ತೆ? Cubicles or Standing (open) desks?
No matches for "" in this podcast's transcripts.
No topics indexed yet for this podcast.
Loading reviews...
ABOUT THIS SHOW
The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community.#NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.
HOSTED BY
Satish Hosanagara
Loading similar podcasts...