EPISODE · Aug 2, 2026 · 1H 5M
ದೇಹ ದೇಗುಲದ ಕಂಬಗಳು | The Supporting Pillars Of The "Body-Temple" | Annam Brahma 4
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಮೃತಕಲಶವನ್ನು ಕೈಯಲ್ಲಿ ಹಿಡಿದು, ಕೋಟಿ ಜೀವಿಗಳಿಗೆ ನಿತ್ಯವೂ ಆಹಾರ ನೀಡುವ ದೇವತೆ "ಅನ್ನಪೂರ್ಣೇಶ್ವರೀ"*ಶರೀರ ಬಂದ ದಿನದಂದು ಏನುನ್ನು ಚಿಂತನೆ ಮಾಡಬೇಕು?*ಪಾಪ ಮಾಡುವವನ ಶರೀರವು ಚಿನ್ನದ ಜಿಂಕೆಯಂತೆ; ಹೊರಗೆ 'ರಮಣೀಯ', ಒಳಗೆ 'ಮರಣೀಯ'*ತ್ರಯೋಪಸ್ತಂಭ - ಆಹಾರ, ನಿದ್ದೆ ಮತ್ತು ಬ್ರಹ್ಮಚರ್ಯ; ಇದರಲ್ಲಿ ಇದೆ ಸಂಪೂರ್ಣ ಜೀವನದ ಸಾರ*ನಮ್ಮ ದೇಹ ನಾವು ಏನು ತಿನ್ನುತ್ತೇವೆ ಮತ್ತು ಹೇಗೆ ಯೋಚಿಸುತ್ತೇವೆ ಎನ್ನುವುದರ ಪ್ರತಿಬಿಂಬ*"ಭೋಜನಕಾಲೇ ಸೀತಾಕಾಂತಃ ಸ್ಮರಣಮ್" ಎಂಬುದನ್ನು ಏಕೆ ಪಾಲಿಸಬೇಕು? ಹೇಗೆ ಸ್ಮರಿಸಬೇಕು?*ಮನವೆಲ್ಲಿಯೂ ನಮನವಲ್ಲಿಗೆ*ನಿದ್ರೆ - ಶರೀರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ತಾಯಿ; ಸಕಾಲದಲ್ಲಿ ಬಂದರೆ ವಿಷ್ಣುಮಾಯೆ, ಸಿದ್ಧಯೋಗಿನೀ, ಅಕಾಲದಲ್ಲಿ ಬಂದರೆ ಕಾಲರಾತ್ರಿ*ನಿದ್ರೆ ಧ್ಯಾನವಾಗುವುದು ಹೇಗೆ?01-08-2026ಅಶೋಕೆ, ಗೋಕರ್ಣ
Embed this episode
NOW PLAYING
ದೇಹ ದೇಗುಲದ ಕಂಬಗಳು | The Supporting Pillars Of The "Body-Temple" | Annam Brahma 4
No transcript for this episode yet
Similar Episodes
No similar episodes found.
Similar Podcasts
No similar podcasts found.