EPISODE · Jun 23, 2025 · 10 MIN
Good for you... (63)
from SatisHFactionKannada Podcast from the US · host Satish Hosanagara
Good for you...ಆಮೇರಿಕನ್ ಇಂಗ್ಲೀಷ್‌ನಲ್ಲಿ "Good for you", ಅನ್ನೋ phrase ಇದೆ.ನಾನು Good for you, Good for him, ಎಂದು ಬಳಕೆಯಲ್ಲಿ ಕೇಳಿದಾಗಲೆಲ್ಲ ಅದರ ಬಗ್ಗೆ ಬಹಳ ಸೋಜಿಗವಾಗುತ್ತೆ ಮತ್ತು ಸಂತೋಷವೂ ಆಗುತ್ತೆ.ನಾವೆಲ್ಲ ಜೀವನ ಪರ್ಯಂತ ಒಂದನ್ನೊಂದು ಕಂಪೇರ್ ಮಾಡಿಕೊಂಡೇ ಬದುಕೋ ಜಾಯಮಾನದವರು ಅಂತ ಹೇಳಿದ್ರೆ ತಪ್ಪೇನೂ ಇಲ್ಲ.ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಆ ಕಾಲದಲ್ಲಿ ಹುಟ್ಟಿ ಬಂದವರೆದ್ದೆಲ್ಲ ಒಂದೇ ಪರಿಸ್ಥಿತಿ. ಅವರು ಮಕ್ಕಳು ಹೀಗಿದ್ದಾರೆ, ಅವರ ಮನೆಯಲ್ಲಿ ಏನೇನಿದೆ, ಅವರು ಹೇಗೆ ಖರ್ಚು ಮಾಡುತ್ತಾರೆ... ಇತ್ಯಾದಿ ಯಾಗಿ ಅನೇಕ comarison ಯಾವಾಗ್ಲೂ ನಡೀತಾನೇ ಇರ್ತಿತ್ತು.ಮೊದಮೊದಲು, ಅದು ಓಪನ್ ಆಗಿ ಪ್ರಚುರ ಗೊಳ್ತಿತ್ತು... ನೋಡು, ಅವರ ಮಗ ಎಷ್ಟು ಮಾರ್ಕ್ ತೆಗೆದ್ದಿದ್ದಾನೆ... ಅಂತಲೋ, ನೋಡು, ಅವನ ಬಟ್ಟೆಗಳು ಎಷ್ಟು ನೀಟಾಗಿ ಇವೆ... ಮುಂತಾಗಿ ಅನೇಕಾನೇಕ ಕಾಮೆಂಟುಗಳು ಬರ್ತಾನೇ ಇರ್ತಿದ್ವು, ನೆನಪಿದೆಯಾ ನಿಮಗೆ?ನನಗ್ಗೊತ್ತಿಲ್ಲ... ಈ ರೀತಿಯ comparison, ಅದರಲ್ಲೂultra comparison ಒಂದು ರೀತಿ ಒಳ್ಳೆಯದೋ ಕೆಟ್ಟದ್ದೋ ಅಂತ. ಒಂದು ಹಂತದಲ್ಲಿ ಸಾಮಾಜಿಕವಾಗಿ ಒಂದು ಆರೋಗ್ಯಕರ ಬೆಳವಣಿಗೆ, ಪೈಪೋಟಿಗಳನ್ನ ಇದು ಹುಟ್ಟಿ ಹಾಕುತ್ತೆ ಅನ್ನಬಹುದು. On the other hand, ಇದು ಒಂದು ರೀತಿಯಲ್ಲಿ ಕೀಳರಿಮೆ ಬೆಳೆಯೋದಕ್ಕೆ, ಮುಂದೆ ಅದೇ ನಮ್ಮ ನಮ್ಮ ಬೆಳವಣಿಗೆಯನ್ನ ಕುಂಠಿತಗೊಳಿಸುತ್ತೆ ಅನ್ನೋದು ನನ್ನ ಅನಿಸಿಕೆ.ಎಷ್ಟು ಸರ್ತಿ, "ಅಯ್ಯೋ ನನಗೆ ಕಡಮೆ ಮಾರ್ಕ್ ಬಂತಲ್ಲ, ಅನ್ನೋ ಸಂಕಟಕ್ಕಿಂತ, ಇನ್ನೊಬ್ಬರಿಗೆ ಹೆಚ್ಚು ಮಾರ್ಕ್ ಬಂತು ಅನ್ನೋ ಹೊಟ್ಟೇ ಉರಿಯೇ ನಮ್ಮನ್ನು ಹೆಚ್ಚಾಗಿ ಬಾಧಿಸಿದ್ದಿರಬಹುದು.ಆಗೆಲ್ಲ, ಬಾಲ್ಯದಲ್ಲಿ ಆರಂಭವಾದ ಈ ಕಡು comparison ಗಳು, ಮುಂದೆ ನಮ್ಮನ್ನು ಸುಮ್ಮನೇ ಬಿಡುತ್ತಾವೇನೂ? ನಾವು ಹೋದಲ್ಲಿ, ಬಂದಲ್ಲಿ, ನಮ್ಮನ್ನು ಬೆಂಬಿಡದೇ ಖಂಡಿತ ಕಾಡಿಯೇ ಕಾಡುತ್ತವೆ.
Embed this episode
NOW PLAYING
Good for you... (63)
No transcript for this episode yet
Similar Episodes
No similar episodes found.
Similar Podcasts
No similar podcasts found.