EPISODE · May 30, 2025 · 5 MIN
ಕನ್ನಡ ಭಾಷೆ ಎಲ್ಲಿಂದ ಹುಟ್ಟಿತು (57)
from SatisHFactionKannada Podcast from the US · host Satish Hosanagara
ಕನ್ನಡ ಭಾಷೆ ಎಲ್ಲಿಂದ ಹುಟ್ಟಿತುಕನ್ನಡ ಭಾಷೆ ಎಲ್ಲಿಂದ ಹುಟ್ಟಿತು, ಅದರ ಅಪ್ಪ ಯಾರು, ಅಮ್ಮ ಯಾರು ಅಂತ ತಿಳಿಯೋಣ, ಇನ್ನೇನು ಆಗ್ತಾ ಇದೆ ಕರ್ನಾಟಕದಲ್ಲಿ ನೋಡೋಣ ಅಂತ ನನ್ನ ಖಾಸಾ ದೋಸ್ತ, ಸುಬ್ಬನಿಗೆ ಫ಼ೋನ್ ಮಾಡ್ದೆ.ಆ ಕಡೆಯಿಂದ, "ಹಲೋ, ಸಾವಕಾರ್ರೆ, ಆರಾಮೇನ್ರಿ?"ಅಂತ ಉತ್ತರ ಬಂತೋ... "ಏನೋ ಸುಬ್ಬು, ಪಕ್ಕಾ ಮಲೆನಾಡಿನ ವ್ಯಕ್ತಿ ನೀನು, ಇವತ್ತೇನು, ಬಯಲ್ ಸೀಮೆ ಭಾಷೆ ಮಾತಾಡ್ತಾ ಇದೀಯಲ್ಲ, ಏನ್ ಕತೆ?" ಎಂದಾಗ,ಅವನು, "ಹಂಗೇನಿಲ್ರಿ, ಇಲ್ಲೇ ಬಿಸಿನೆಸ್ ಸಲವಾಗಿ, ಹುಬ್ಬಳ್ಳಿಗೆ ಬಂದಿದ್ದೆನ್ರಪಾ, ಹಂಗ ಹೋದಲ್ಲಿ ಬಂದಲ್ಲಿ ಅವರವರ ಭಾಷೇನ್ಯಾಗ ಮಾತಾಡಿದ್ರೆ, ಚಂದ ಇರತತಿ ನೋಡ್ರಿ, ಹಂಗಾಗಿ ನಾನು ಇಲ್ಲಿಯವರ ಕೂಡ ಇಲ್ಲಿಯವರ ಥರಾನ ಮಾತಾಡಕ್ ಪ್ರಯತ್ನ ಪಡ್ತೇನಿ, ನೋಡು!" ಎಂದ."ಹೌದು, ಸುಬ್ಬು... ಅದೇನೋ ಕಮಲ್ ಹಾಸನ್ ಹೇಳ್ಕೆ ಕೊಟ್ಟಾನಂತೆ..., ಏನ್ ಪ್ರಾಬ್ಲಮ್ ಇವರ್ದೆಲ್ಲಾ?" ಎಂದು ಪ್ರಶ್ನೆ ಮಾಡಿದ್ದಕ್ಕೆ..."ಅದರ ಕರ್ಮ ಏನ್ ಹೇಳ್ಳಿ ಬಿಡು?!" ಅವನೀಗ ರಾಜಕೀಯಕ್ಕೆ ಇಳಿಯೋಕ್ ಹೊಂಟಂಗ್ ಕಾಣುಸ್ತದ, ಅದಕ್ಕ ಬಾಯಿಗ್ ಬಂದಿದ್ದೆಲ್ಲ ಹೇಳ್ತಾನೋ ಏನೋ""ಅಲ್ಲೋ ಸುಬ್ಬು, ಕನ್ನಡ ಹುಟ್ಟಿದ್ ಹೇಗೆ, ಎಲ್ಲಿಂದ ಯಾರಿಂದ ಅನ್ನೋ ಉಸಾಬರಿ ಇವರಿಗೆಲ್ಲ ಯಾಕೆ?’"ಸರಿಯಾಗ್ ಹೇಳ್ದೆ ನೋಡು... ಮೊದಲು ಅವರವರು ತಮ್ ತಮ್ಮ ಅಪ್ಪಂದಿರಿಗೆ ಹುಟ್ಟಿದಾರೋ ಇಲ್ಲಾ ಅಂತ ಖಾತ್ರಿ ಮಾಡಕಂಬೇಕು... ಆಮೇಲೆ, ಅಪ್ಪನಿಗೆ ಹುಟ್ಟಿದ ಮಾತಾಡ್ಬೇಕು... ಸುಮ್ನೇ ನನಿಗ್ ಸಿಟ್ಟು ತರಿಸ್ಬ್ಯಾಡ... ಅವನೌವನ... ಅಕ್ಕ-ಪಕ್ಕದ ರಾಜ್ಯದೊಳಗ ಸಾವಿರಾರು ವರ್ಷದಿಂದ ಅಣ್ಣ-ತಮ್ಮಂದಿರಂತೆ ಇದ್ವೋಇಲ್ವೋ... ಆ ಒಂದು ಸೌಹಾರ್ದತೆಗೆ ಕಲ್ ಹಾಕೋಕ್ ಇವನಂತ ಒಬ್ಬ ಎಡಬಿಡಂಗಿ ಬೇಕಾಗಿತ್ತ ನಮಗ"...’ ’ಮೊದ್ಲು, ನಮ್ ಕನ್ನಡ ಮಂದೀಗೆ ಉಗೀಬೇಕು... ಇಂಥವರ ಸವಾಸದಿಂದ ದೂರ ಇರ್ರಿ ಅನ್ನಬಕು. ಅದನ್ನ ಬಿಟ್ಟು, ಅವರನ್ನ-ಇವರನ್ನ ಮ್ಯಾಲೆ ಏರಿಸ್ಕೊಂಡು ಕುಂತಾಗ ಇಂಥಾ ಮಾತು ಬರ್ತಾವ್ ನೋಡು... ಅದೇನೋ ಅಂತಾರಲ್ಲ... ನಾಯಿ ತಗೊಂಡು ಪಲ್ಲಕ್ಕಿ ಮ್ಯಾಲೆ ಕೂರಿಸಿದ್ರೆ, ಅದೇನೋ ಕಂಡಲ್ಲಿ ಹಾರಿತ್ತಂತಲ್ಲ... ಹಂಗಾತು ನೋಡು...ಅಲ್ಲ ಸುಬ್ಬು... ಹೀಗೆ ಒಂದು ಭಾಷೆಯ ಬುಡಕ್ಕೆ ಹೋಡೀಬೋದಾ? ಅವರಿಗಿರೋ ಅರ್ಹತೆಗಳಾದ್ರೂ ಏನೂ ಅಂತ?ಅದೇ ಬಂದಿರೋದು... ವೃತ್ತಿಯಿಂದ ನಟ... ತನ್ನ ತನ್ನ ಕಾರ್ಯಕ್ಷೇತ್ರದೊಳಗ ಏನಾರೂ ಒಂದಿಷ್ಟು ಸಾದ್ನ ಮಾಡ್ರಿ ಅಂತಂದ್ರ... ಇರಲಾರ್ದ ಇರವಿ ಬಿಟಗೊಂಡ್ರು ಅಂತಾರ್ ನೋಡು, ಹಂಗಾತು ಇವರ ಕತೆ... ಯಾರಿಗ್ ಬೇಕಿತ್ತು ಇದು?ಸುಬ್ಬು, ಏನ್ ಗೊತ್ತ... ಮೊದಮೊದಲು ಏನೋ ಒಂದು ಸ್ಟೇಟ್ಮೆಂಟ್ ಕೊಟ್ಟು, ಅಮ್ಯಾಲೆ ಅಪಾಲಜಿ ಕೇಳಿದ್ರೆ ಒಂಥರ ಎಲ್ಲ ಸುಮ್ನಾಗೋದು... ಒಂದು ಕಾಲದಲ್ಲಿ ರಾಜಾಜಿ ಅವರು ಮಾಡಿದ್ದೂ ಇದೇ ತಾನೆ?... ಈ ವಯ್ಯ... ಅಪಾಲಜಿ ಕೇಳೋದು ಬಿಟ್ಟು ಏನೋ ಲವ್ವಿನಾಗೆ ಹಂಗಂದೆ, ಅದರಗೇನು ತಪ್ಪೇ ಇಲ್ಲ ಅಂತಾನಲ್ಲ?ಏ ನಿಂಗೊತ್ತಿರೋ ವಿಚಾರನೇ ಬಿಡು, ಇದು... ಅವರದ್ದು ಭಾಷಾ ದುರಭಿಮಾನ, ಇವತ್ತು ನಿನ್ನೇದಲ್ಲ... ಒಂದಿಷ್ಟು ದಿನ ಕರ್ನಾಟಕದ ಕಡೆ ಬರೋ ಅವ್ರ ಬಸ್ಸು ರೈಲುಗಳನ್ನ ತಡೆದ್ರೆ, ಸುಮ್ನೇ ದಾರಿಬ್ ಬಂದೇ ಬರ್ತಾರ್ ಬಿಡು...ಹಂಗಾರೆ, Thug Life ರಿಲೀಸ್ ಆಗುತ್ತಾ ಬೆಂಗಳೂರ್ನಲ್ಲಿ?ಸಿಟ್ಟು ಬಂದಾಂಗಾಗಿ... ಸಿನಿಮಾದ ಹೆಸರಿನಾಗೆ ಗೊತ್ತಾತಲ್ಲ... ಇವರುಗಳು ಯಾರು ಅಂತ... ಇಂತ ಥಗ್ ಲೈಫ಼್ ಅನ್ನ ರಿಲೀಸ್ ಮಾಡೋಕ್ ಬಂದಿರೋ ಥಗ್ ನನ್ನ ಮಕ್ಳನ್ನ ತಗ್ ತಗೀದು ಹುಗೀಬಕು... ಅವಾಗ ಬುದ್ದಿ ಬರ್ತತಿ ನೋಡು...ಅವನ್ಯಾವನೋ ಸೀಮನ್ ಅನ್ನೋನು ’ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ" ಅಂತ ಅವನ ಬೆನ್ನಿಗೆ ನಿಂತಾರಂತಲ್ಲ... ಎಂದು ಹೇಳುತ್ತಿದ್ದಂತೆ,"ಬೆನ್ನಿಗಾರೂ ನಿಂತಗಳ್ಳಿ, ಹೊಟ್ಟಿಗಾರೂ ಒದಕೊಳ್ಳಿ... ಹೊಟ್ಟಿಗೆ ಅನ್ನ ತಿನ್ನೋ ಮನುಷ್ಯರ ಮಾತಾಡ್ಬೇಕು... ಈ ನನ್ ಮಕ್ಳಿಗೆ ವಿನಾಶಕಾಲೇ ವಿಪರೀತ ಬುದ್ಧಿ ಅಂತಾರಲ್ಲ... ಹಂಗೆ ಅವರ ಕೊಬ್ಬು ನೆತ್ತಿಗೇರೈತಿ... ಒಂದು ದಿನ ಬುದ್ಧಿ ಕಲಸಬಕು...""ಸರಿ ನನಗ ಕೈಲಸೈತಿ, ಈಗ... ಇಡಕಿಂತ ಮುಂಚೆ ಒಂದ್ ಮಾತ್ ಹೇಳ್ತೇನಿ... ಇವತ್ತೂ ಕನ್ನಡ ಮಂದಿ ಬುದ್ದಿ ಕಲೀಲಿಲ್ಲ ಅಂದ್ರ, ಇನ್ಯಾವತ್ತು ಕಲೀತಾರೋ ಗೊತ್ತಿಲ್ಲ... ತಮ್ಮ ತಮ್ಮ ಪ್ರಪಂಚದೊಳಗ ಇದ್ದಕೊಂಡು ಎಲ್ಲ ಚಂದೈತಿ ಅಂತ ಕನಸ ಕಾಣೋ ಹೊತ್ತಿಗೆ ಒಂದು ದಿನಾ ಇವರ್ದೆಲ್ಲಾ ಮುಂಡಾ ಮುಚ್ಚತೈತಿ... ಆಗ it will be too late...ತಿಳಕ... ಮತ್ತ ಮಾತಾಡ್ತೀನಿ... ಅಂತ ಫ಼ೋನ್ ಇಟ್ಟೇ ಬಿಟ್ಟ!ಅಯ್ಯೋ ಕನ್ನಡಿಗರ ಪರಿಸ್ಥಿತಿ ಈ ಮಟ್ಟಿಗೆ ಬಂತೇ... ಔದಾರ್ಯ, ಸಹೃದಯತೆ, ಸಮಬಾಳ್ವೆ, ಸಂಗೀತ-ಸಾಹಿತ್ಯ ಅಂತಾ ಒದ್ದಾಡೋ ನಮ್ಮನ್ನೆಲ್ಲ ದೇವ್ರೆ ಕಾಪಾಡ್ಬೇಕು, ಅಂತ ಹಣೆ ಮುಟ್ಟಿಕೊಂಡೆ.
Embed this episode
NOW PLAYING
ಕನ್ನಡ ಭಾಷೆ ಎಲ್ಲಿಂದ ಹುಟ್ಟಿತು (57)
No transcript for this episode yet
Similar Episodes
No similar episodes found.
Similar Podcasts
No similar podcasts found.