ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ (#50) Chat GPT, What do you know? episode artwork

EPISODE · May 7, 2025 · 8 MIN

ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ (#50) Chat GPT, What do you know?

from SatisHFactionKannada Podcast from the US · host Satish Hosanagara

ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳChat GPT, What do you know?ಹೀಗಂತ ಅನ್ಸಿದ್ದು ಇತ್ತೀಚೆಗೆ ಎಲ್ಲ ಕಡೆಗೆ AI ಯ ಹಾವಳಿಯನ್ನು ನೋಡಿ.ನಮ್ಮ ಆಫ಼ೀಸುಗಳಲ್ಲೆಲ್ಲ AI ಯ ಹಾವಳಿಯ ಜೊತೆ ಜೊತೆಗೆ ಅನೇಕ ಅನಾಹುತ, ಅವಾಂತರಗಳೂ ಹೆಚ್ಚಾಗಿ ಕಾಣತೊಡಗಿವೆ. ಮೊದಮೊದಲು ನಿಧಾನವಾಗಿ ಚಾಟ್ GPT ಅಂತ ಶುರುವಾಗಿದ್ದು, ನಂತರ Copilot ಆಗಿ, ಮುಂದೆ Gemini ಆಗಿ, ಎಲ್ಲವೂ ಒಟ್ಟೊಟ್ಟಾಗೇ ಕಾಡತೊಡಗಿವೆ.ಅಲ್ಲ, ಈ AI engine ಗಳು ಮಾಡದ್ದೇನಾದರೂ ಇದೆಯೇ? ಕೇಳಿದ ಎಲ್ಲ ಪ್ರಶ್ನೆಗಳಿಗೂ ಬ್ರಹ್ಮಾಂಡದ ಎಲ್ಲ ಉತ್ತರಗಳೂ ತಮ್ಮ ಮಡಿಲಿನಲ್ಲೇ ಇದೆ ಎಂದು ಬೀಗುವ ಈ ತಂತ್ರಜ್ಞಾನಗಳಿಗೆ ಮಿಗಿಲಾದದ್ದೂ ಏನಾದರೂ ಇದೆಯೇ ಎಂದು ಯೋಚಿಸತೊಡಗಿದಾಗ ಅನೇಕ ವಿಚಾರಗಳು ಮನಸ್ಸಿಗೆ ಬಂದವು.ಹೀಗೆ, ಊಟ, ತಿಂಡಿ, ರುಚಿ, ವಾಸನೆಗೆ ಮೊದಲಾದ ಅನೇಕ ಗ್ರಹಣ, ಸ್ಪರ್ಶಾದಿ ವಿಷಯಗಳನ್ನು, "ಅನುಭವಿಸಿಯೇ" ನೋಡಬೇಕೇ ವಿನಾ ಅದರ ಬಗ್ಗೆ ಬರೆದು-ಓದಿ ತಿಳಿದುಕೊಳ್ಳಲಾಗದು. ಹಾಗಿದ್ದಾಗ, ಸ್ಪರ್ಶ-ಗ್ರಹಣಾದಿ, ರುಚಿಗೆ ಸಂಬಂಧಿಸಿದ ಅಭಿರುಚುಯೇ ಇಲ್ಲದ ಚಾಟ್ GPT, Copilot, Gemini ಗಳಿಗೆ ಏನು ಗೊತ್ತು? ಇವುಗಳ ಬಗ್ಗೆ... ಒಂದು ರೀತಿಯಲ್ಲಿ, ಕತ್ತೆಗೇನು ಗೊತ್ತು, ಹೊತ್ತ ಕಸ್ತೂರಿಯ ಪರಿಮಳ ಎನ್ನಬಹುದೇ?ಇನ್ನು ಎಲ್ಲರೂ ಮಾಡುವುದು ಬಟ್ಟೆಗಾಗಿ, ಹೊಟ್ಟೆಗಾಗಿ ಎಂದು ಹೇಳಿದ ದಾಸರೇ ಕೊನೆಯಲ್ಲಿ ಮುಕ್ತಿಗಾಗಿ, ಆನಂದಕ್ಕಾಗಿ ಅಂತ ಹೇಳಿದ್ದಾರಲ್ಲ... ಪಾಪ, ಈ GPT ಗಳಿಗೆ ಇವು ಯಾವುದೂ ಇಲ್ಲವೇ ಇಲ್ಲ!ಹಾಗಾಗಿ, ಎಲ್ಲಿಯವರೆಗೆ ನಲಿಯುವ ಮನವಿರುತ್ತದೋ, ಒಲಿಯುವ ಹೃದಯವಿರುತ್ತದೋ, ಕಲಿಯುವ ಛಲವಿರುತ್ತದೋ, ಆಹ್ಲಾದಿಸುವ ಭಾವನೆ ಇರುತ್ತದೆಯೋ, ಅಲ್ಲಿಯವರೆಗೆ Human beings are needed!ಈ GPT ಗಳು ಎಷ್ಟು ಬೇಕಾದರೂ ಬರಲಿ... ಅದರಂಥ ಕತ್ತೆಗಳಿಗೇನು ಗೊತ್ತು, ಹೊತ್ತ ಕಸ್ತೂರಿಯ ಪರಿಮಳ.

Episode metadata supplied by the publisher feed · Published May 7, 2025

Embed this episode

NOW PLAYING

ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ (#50) Chat GPT, What do you know?

0:00 8:46

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SatisHFactionKannada Podcast from the US?

This episode is 8 minutes long.

When was this SatisHFactionKannada Podcast from the US episode published?

This episode was published on May 7, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.
URL copied to clipboard!