EPISODE · May 28, 2025 · 13 MIN
ಮನೆಯು ಚಿಕ್ಕದಾಗಿರಬೇಕು (56)
from SatisHFactionKannada Podcast from the US · host Satish Hosanagara
ಮನೆಯು ಚಿಕ್ಕದಾಗಿರಬೇಕುಇವತ್ತು ನಮ್ಮ ಆಫ಼ೀಸಿನಲ್ಲಿ ಕೆಲ್ಸ ಮಾಡೋ ಕಾಂಟ್ರಾಕ್ಟರ್ ಒಬ್ಬರು, ಇನ್ನೇನು ಈ ತಿಂಗಳ ಕೊನೆಯಲ್ಲಿ ನನ್ನ ಕಾಂಟ್ರಾಕ್ಟ್ ಮುಗಿತಾ ಬಂತು, ಇನ್ನೂ ಬೇರೆ ಕೆಲ್ಸ ಸಿಕ್ಕಿಲ್ಲ. ಸುಮಾರು ಮೂರು ತಿಂಗಳಿನಿಂದ ಹುಡುಕುತ್ತಿದ್ದೇನೆ... ಇದೇ ರೀತಿ ಕೆಲ್ಸ ಸಿಗದೇ ಹೋದರೆ, ಮನೆ ಸಾಲ, ಕಾರು ಸಾಲ ಎಲ್ಲ ಕಟ್ಟೋದು ಯಾವಾಗ ಎಂದು ಸಂಕಟ ಪಡುತ್ತಿದ್ದ. ಅಯ್ಯೋ ಎಂದು ಮರುಕಗೊಂಡು, ಅವನ ಸುಖ-ದುಃಖಗಳನ್ನು ವಿಚಾರಿಸಿಕೊಳ್ಳುತ್ತಿದ್ದಂತೆ, ಅವನ ಮನೆ ಸಾಲ ಮತ್ತು ಕಾರಿನ ಬಾಬ್ತು ಅವನ ಒಂದು ತಿಂಗಳಿನ (ಈಗ ಬರುತ್ತಿರುವ) ಸಂಬಳದ ಬಹು ಭಾಗವನ್ನು ನುಂಗಿ ಹಾಕುತ್ತಿದ್ದವು. ಇಷ್ಟು ದೊಡ್ಡ ಮನೆ ಏಕೆ ತೆಗೆದುಕೊಂಡೆ ಎಂದಾಗ ಅವನಲ್ಲಿ ಉತ್ತರ ಇರಲಿಲ್ಲ.ಮನೆ ತೆಗೆದುಕೊಳ್ಳುವುದು ಒಂದು ಬಹಳ ಮುಖ್ಯವಾದ ಡಿಸಿಶನ್, ಅದೂ ಈಗಿನ ದುಬಾರಿಯಾದ ಕಾಲದಲ್ಲಂತೂ ಮನೆ ಕೊಳ್ಳುವುದು ಬಹಳ ಕಷ್ಟದ ವಿಷಯ ಕೂಡ. ಎಲ್ಲ ಮನೆಗಳ ಮಾರಾಟದ ಬೆಲೆ ಒಂದೆರಡು ವರ್ಷಗಳ ಹಿಂದಿನ ಬೆಲೆಗೆ ಹೋಲಿಸಿದರೆ, ಕನಿಷ್ಟ ಪಕ್ಷ ಒಂದು 20% ಆದರೂ ಮೇಲೆ ಹೋಗಿದೆ. ಈಗಿನ ಪರಿಸ್ಥತಿಯಲ್ಲಿ ಒಂದು ಅಪಾರ್ಟ್ಮೆಂಟ್ ರೆಂಟು ತೆಗೆದುಕೊಳ್ಳಲು ಅಡ್ಡಿ ಇಲ್ಲ. ಅದರ ಬೆಲೆಯೂ ಹೆಚ್ಚೇ ಆಗಿದೆ.ಈ ಸಂದರ್ಭದಲ್ಲೇ ನೆನಪಿಗೆ ಬಂದದ್ದು: "ಮನೆಯು ಚಿಕ್ಕದಾಗಿರಬೇಕು, ಮನಸ್ಸು ದೊಡ್ಡದಾಗಿರಬೇಕು" ಎನ್ನುವ ಜಾಣ್ಣುಡಿ.***ನಾನು ಯಾವಾಗಲೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಬಂದಿದ್ದೇನೆ:- ಜನರು ತಮ್ಮ ಅಗತ್ಯಕ್ಕಿಂತಲೂ ಹೆಚ್ಚು ದೊಡ್ಡ ಮನೆಗಳನ್ನು ಏಕೆ ಕೊಳ್ಳುತ್ತಾರೆ.- ಫ಼್ಯಾಮಿಲಿಯ ಸೈಜು ಕಡಿಮೆ ಆದಂತೆ, ಕೆಲವರ ಮನೆ ಅವರ ಶ್ರೀಮಂತಿಕೆಯನ್ನು ಸಾರುವಂತೆ ದೊಡ್ಡದಾಗುತ್ತಲೇ ಹೋಗುತ್ತದೆ.- ಜನರು in general, ಯಾಕೆ ದೊಡ್ಡ ಮನೆಗಳನ್ನು ತೆಗೆದುಕೊಳ್ಳುತ್ತಾರೆ?***In this episode, I explore why people desire bigger homes and how this ties into wealth, examining both behavioral motivations and economic realities. I also compare how the home size varies from country to country.
Embed this episode
NOW PLAYING
ಮನೆಯು ಚಿಕ್ಕದಾಗಿರಬೇಕು (56)
No transcript for this episode yet
Similar Episodes
No similar episodes found.
Similar Podcasts
No similar podcasts found.