EPISODE · Jul 1, 2025 · 10 MIN
ನಾವು ಕನ್ನಡಿಗರು ಇರೋದೇ ಹೀಗೆ... (65)
from SatisHFactionKannada Podcast from the US · host Satish Hosanagara
ನಾವು ಕನ್ನಡಿಗರು ಇರೋದೇ ಹೀಗೆ...ಹೀಗಂತ ಅನ್ನಿಸಿದ್ದು ಇತ್ತೀಚೆಗೆ, ನಮ್ಮ ಆಫ಼ೀಸಿನಲ್ಲಿ ಒಂದಿಷ್ಟು ಸಹೋದ್ಯೋಗಿಗಳ ಚಲನವಲನಗಳನ್ನ ಬಹಳ ಹತ್ತಿರದಿಂದ ಗಮನಿಸಿಕೊಂಡಾಗ.ಒಂದು ದಿನ ಆಫ಼ೀಸಿನಲ್ಲಿ, ನಾನು ಮತ್ತೊಬ್ಬ colleage (ದಕ್ಷಿಣ ಭಾರತೀಯ) ಇಬ್ಬರೂ ಇಂಗ್ಲೀಷಿನಲ್ಲಿ ಆಫ಼ೀಸಿಗೆ ಸಂಬಂಧಿಸಿರದ ವಿಷಯಗಳನ್ನ ಮಾತನಾಡಿಕೊಂಡಿದ್ದೆವು. ಈಗಂತೂ ಬೇಕಾದಷ್ಟು ವಿಷಯಗಳಿವೆ ಮಾತನಾಡಲು. ಆಗ ನಮ್ಮ ನಡುವೆ ಮತ್ತೊಬ್ಬ ದಕ್ಷಿಣ ಭಾರತೀಯನ ಆಗಮನವಾಯಿತು. ಒಂದೆರಡು ಕುಶಲೋಪರಿಗಳ ತರುವಾಯ, ಅವರಿಬ್ಬರೂ, ನಾನಿರುವಂತೆಯೇ ತಮಿಳಿನಲ್ಲಿ ಮಾತನಾಡಲು ಶುರುಮಾಡಿದರು. ನಾನು ಇದ್ದೇನೆ, ಇಲ್ಲ ಎನ್ನವ ಯಾವ ಉಸಾಬರಿಯೂ ಇಲ್ಲದೆ, ’ನೀನು ನಮ್ಮ ಜೊತೆ ಮಾತನಾಡುವುದಾದರೆ ತಮಿಳಿನಲ್ಲಿಯೇ ಮಾತನಾಡು, ಇಲ್ಲವಾದರೆ ತೊಲಗು’ ಎಂದು ಮುಖದ ಮೇಲೆ ಹೊಡೆದಂತೆ! ನಾನು ಈ ಸೂಕ್ಷ್ಮವನ್ನು ಗಮನಿಸಿದವನೇ, ಇಂಗ್ಲೀಷಿನಲ್ಲಿ ಬೇಕಂತಲೇ, ಸ್ವಲ್ಪ ಗಟ್ಟಿಯಾಗಿ, "...Guys, I don't know what the heck heck you're talking about... take care!" ಎಂದು ಹೇಳಿ, ಅವರ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೇ ಅಲ್ಲಿಂದ ಹೊರಟೆ.ಇದೇ ಸಂದರ್ಭ ಇಬ್ಬರು ಕನ್ನಡಿಗರ ನಡುವೆ ಆಗಿದ್ದರೆ ಹೇಗಿರುತ್ತಿತ್ತು? ಅವರು ಇಬ್ಬರೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರೇ? ಅಥವಾ ಆದಷ್ಟು ಬೇಗ ಇಂಗ್ಲೀಷಿಗೆ ಗಂಟುಬೀಳುತ್ತಿದ್ದರೇ?ಆಗ ನನಗನ್ನಿಸಿದ್ದು, "ನಾವು ಕನ್ನಡಿಗರು ಇರೋದೇ ಹೀಗೆ..." ಅಂತ.
Embed this episode
NOW PLAYING
ನಾವು ಕನ್ನಡಿಗರು ಇರೋದೇ ಹೀಗೆ... (65)
No transcript for this episode yet
Similar Episodes
No similar episodes found.
Similar Podcasts
No similar podcasts found.