EPISODE · Jul 3, 2025 · 10 MIN
ನ್ಯೂಸ್ ಪೇಪರುಗಳ ಪಾತ್ರ ಏನು?
from SatisHFactionKannada Podcast from the US · host Satish Hosanagara
ನಮ್ಮ ಸಮಾಜದಲ್ಲಿ ನ್ಯೂಸ್ ಪೇಪರುಗಳ ಪಾತ್ರ ಏನು?ನಾವೆಲ್ಲ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನ್ಯೂಸ್ ಅಂದ್ರೆ ಸುದ್ದಿಗಳನ್ನ consume ಮಾಡ್ತೀವಿ. ಅಲ್ವಾ? ಹೀಗೆ ಪ್ರತಿ ದಿನ ಸುದ್ದಿಗಳನ್ನ ಓದೋದರಿಂದ ಬಿಡೋದರಿಂದ, ನಿಮಗೆ ಮಹತ್ವದ ವಿಷಯಗಳು ತಿಳಿತಾವೋ ಇಲ್ವೋ, ಆದರೆ ಅದರಿಂದ ನಿಮ್ಮ ಬ್ಲಡ್ ಪ್ರೆಶರ್ ಹೆಚ್ಚೋದಂತೂ ಗ್ಯಾರಂಟಿ!ನಾನು ದಿನಪ್ರಂತಿ ಓದೋ ನ್ಯೂಸ್ ಪೇಪರುಗಳಲ್ಲಿ, ನಮ್ಮ ನೆಚ್ಚಿನ ಪ್ರಜಾವಾಣಿ ಜೊತೆಗೆ, ವಾಲ್ ಸ್ಟ್ರೀಟ್ ಜರ್ನಲ್, ಇವರೆಡನ್ನ ಹೆಚ್ಚೂ ಕಡಿಮೆ ರೆಗ್ಯುಲರ್ ಆಗಿ ಓದಿದ್ರೆ, ಅಪರೂಪಕ್ಕೊಮ್ಮೆ ನ್ಯೂ ಯಾರ್ಕ್ ಟೈಮ್ಸ್ ಕೂಡಾ ಓದ್ತೀನಿ.ಈ ಲೆಫ಼್ಟಿಸ್ಟ್, ರೈಟಿಸ್ಟ್, ಸೆನ್ಟ್ರಿಸ್ಟು-ಇತ್ಯಾದಿಗಳನ್ನೆಲ್ಲ ಅರ್ಥ ಮಾಡಿಕೊಂಡು, ಅವುಗಳ ಒಂದೊಂದು ಹಿನ್ನೆಲೆಯಲ್ಲಿ ಒಂದೊಂದು ವಿದ್ಯಮಾನಗಳನ್ನೆಲ್ಲ ಓದ್ತಾ ಬಂದಾಗ, ನಿಮಗೇ ಆಶ್ಚರ್ಯ ಆಗತ್ತೆ... ಈ ಪ್ರಪಂಚದಲ್ಲಿ ಇನ್ಫ಼ರಮೇಷನ್ ಗಿಂತ ಹೆಚ್ಚು ಮಿಸ್ ಇನ್ಫ಼ರ್ಮೇಷನ್ನೇ ತುಂಬಿದೆ ಅಂತ!
Embed this episode
NOW PLAYING
ನ್ಯೂಸ್ ಪೇಪರುಗಳ ಪಾತ್ರ ಏನು?
No transcript for this episode yet
Similar Episodes
No similar episodes found.
Similar Podcasts
No similar podcasts found.